ಚುನಾವಣೆಯಲ್ಲಿ ಗೆಲ್ಲಲು ಬಿಜೆಪಿ ಬಿಟ್ಟುಹೋದವರನ್ನು ವಾಪಸ್ಸು ಕರೆತರುವ ಪ್ರಯತ್ನ ನಡೆಯುತ್ತಿದೆ: ಸುನೀಲ ಕುಮಾರ, ಶಾಸಕ

ಚುನಾವಣೆಯಲ್ಲಿ ಗೆಲ್ಲಲು ಬಿಜೆಪಿ ಬಿಟ್ಟುಹೋದವರನ್ನು ವಾಪಸ್ಸು ಕರೆತರುವ ಪ್ರಯತ್ನ ನಡೆಯುತ್ತಿದೆ: ಸುನೀಲ ಕುಮಾರ, ಶಾಸಕ

ಅರುಣ್​ ಕುಮಾರ್​ ಬೆಳ್ಳಿ
|

Updated on: Jan 25, 2024 | 12:37 PM

ಲೋಕಸಭಾ ಚುನಾವಣೆ ಗೆಲ್ಲಲು ಅಂತ ರಾಜ್ಯ ಬಿಜೆಪಿ ಪ್ರಧಾನ ಕಾರ್ಯದರ್ಶಿಯೂ ಆಗಿರುವ ಸುನೀಲ ಕುಮಾರ ನಿರ್ದಿಷ್ಟವಾಗಿ ಮತ್ತು ಸ್ಪಷ್ಟವಾಗಿ ಹೇಳುತ್ತಾರೆ. ಅಂದರೆ ಪಕ್ಷ ಬಿಟ್ಟುಹೋದವರ ಮೇಲಿನ ಪ್ರೀತಿ, ಸ್ನೇಹ ಮತ್ತು ಬಾಂಧವ್ಯಗಳಿಗೋಸ್ಕರ ಕರೆದೊಯ್ಯುವ ಪ್ರಯತ್ನ ಬಿಜೆಪಿ ನಾಯಕರದಲ್ಲ.

ಬೆಂಗಳೂರು: ಪಕ್ಷ ಬಿಟ್ಟುಹೋಗಿರುವ ಜಗದೀಶ್ ಶೆಟ್ಟರ್ (Jagadish Shettar) ಮತ್ತು ಲಕ್ಷ್ಮಣ ಸವದಿಯನ್ನು (Lakshman Savadi) ಬಿಜೆಪಿ ವಾಪಸ್ಸು ಕರೆದೊಯ್ಯುವ ಪ್ರಯತ್ನವನ್ನು ಬಿಜೆಪಿ ನಾಯಕರು ಮಾಡುತ್ತಿರುವುದು ಕೇವಲ ಗಾಳಿಸುದ್ದಿಯಲ್ಲ, ನಿನ್ನೆ ಮಡಿಕೇರಿಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಆ ಅಂಶವನ್ನು ಖಚಿತಪಡಿಸಿದ್ದರು. ಇವತ್ತು ನಗರದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತಾಡಿದ ಬಿಜೆಪಿ ಶಾಸಕ ಸುನೀಲ ಕುಮಾರ (Sunil Kumar), ಲೋಕ ಸಭಾ ಚುನಾವಣೆಯಲ್ಲಿ ಗೆಲುವು ಸಾಧಿಸಲು ಪಕ್ಷ ಬಿಟ್ಟುಹೋದ ಎಲ್ಲರನ್ನು ವಾಪಸ್ಸು ಕರೆತರುವ ಕೆಲಸ ತಮ್ಮ ಪಕ್ಷ ಮಾಡುತ್ತಿದೆ ಎಂದು ಹೇಳಿದರು. ಹೇಗೆ ರಾಮ ಭಾರತವನ್ನು ಒಂದುಗೂಡಿಸಿದನೋ ಹಾಗೆಯೇ ಬಿಜೆಪಿ ವಿಚಾರಧಾರೆಯನ್ನು ಒಪ್ಪಿಕೊಂಡಿರುವ ಎಲ್ಲರನ್ನೂ ಒಟ್ಟುಗೂಡಿಸುವ ಪ್ರಯತ್ನ ನಡೆದಿದೆ ಎಂದು ಸುನೀಲ ಹೇಳಿದರು. ಜಗದೀಶ್ ಶೆಟ್ಟರ್ ಒಬ್ಬ ಹಿರಿಯ ನಾಯಕರಾಗಿರುವುದರಿಂದ ಅವರೊಂದಿಗೆ ಕೇಂದ್ರದ ನಾಯಕರು ಮಾತಾಡಲಿದ್ದಾರೆ, ಆದರೆ ಉಳಿದ ನಾಯಕರೊಂದಿಗೆ ರಾಜ್ಯದ ವರಿಷ್ಠರು ಮಾತಾಡುತ್ತಾರೆ ಎಂದು ಸುನೀಲ ಕುಮಾರ ಹೇಳಿದರು. ಲೋಕಸಭಾ ಚುನಾವಣೆ ಗೆಲ್ಲಲು ಅಂತ ರಾಜ್ಯ ಬಿಜೆಪಿ ಪ್ರಧಾನ ಕಾರ್ಯದರ್ಶಿಯೂ ಆಗಿರುವ ಸುನೀಲ ಕುಮಾರ ನಿರ್ದಿಷ್ಟವಾಗಿ ಮತ್ತು ಸ್ಪಷ್ಟವಾಗಿ ಹೇಳುತ್ತಾರೆ. ಅಂದರೆ ಪಕ್ಷ ಬಿಟ್ಟುಹೋದವರ ಮೇಲಿನ ಪ್ರೀತಿ, ಸ್ನೇಹ ಮತ್ತು ಬಾಂಧವ್ಯಗಳಿಗೋಸ್ಕರ ಕರೆದೊಯ್ಯುವ ಪ್ರಯತ್ನ ಬಿಜೆಪಿ ನಾಯಕರದಲ್ಲ.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ