ಕರಸೇವಕರ ಪಟ್ಟಿ ಕೋಡುತ್ತೇನೆ, ತಾಕತ್ತಿದ್ದರೆ ಸಿದ್ದರಾಮಯ್ಯ ಬಂಧಿಸಲಿ: ಸುನೀಲ ಕುಮಾರ, ಬಿಜೆಪಿ ಶಾಸಕ

ಕರಸೇವಕರ ಪಟ್ಟಿ ಕೋಡುತ್ತೇನೆ, ತಾಕತ್ತಿದ್ದರೆ ಸಿದ್ದರಾಮಯ್ಯ ಬಂಧಿಸಲಿ: ಸುನೀಲ ಕುಮಾರ, ಬಿಜೆಪಿ ಶಾಸಕ

ಅರುಣ್​ ಕುಮಾರ್​ ಬೆಳ್ಳಿ
|

Updated on: Jan 02, 2024 | 6:24 PM

ಜನವರಿ 22 ರಂದು ದೇಶದ ಎಲ್ಲ ಮನೆಗಳಲ್ಲಿ ಐದೈದು ನಂದಾದೀಪಗಳನ್ನು ಹಚ್ಚಬೇಕೆಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ ಕರೆ ನೀಡಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಸಹ ಕುಟುಂಬ ಸಮೇತರಾಗಿ ತಮ್ಮ ಮನೆಯಲ್ಲಿ ದೀಪಗಳನ್ನು ಹಚ್ಚಿ ತಾನೊಬ್ಬ ಹಿಂದೂ ಅನ್ನೋದನ್ನು ತೋರಿಸಲಿ ಎಂದು ಬಿಜೆಪಿ ಶಾಸಕ ಸುನೀಲ ಕುಮಾರ್ ಹೇಳಿದರು.

ಬೆಂಗಳೂರು: ರಾಮ ಕರ ಸೇವಕರ (Ram Karsevak) ಪಟ್ಟಿಯನ್ನು ಕೊಡುತ್ತೇನೆ, ರಾಜ್ಯ ಕಾಂಗ್ರೆಸ್ ಸರ್ಕಾರಕ್ಕೆ ಅಥವಾ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ (CM Siddaramaiah) ತಾಕತ್ತಿದ್ದರೆ ಬಂಧಿಸಲಿ ಎಂದು ಬಿಜೆಪಿ ಶಾಸಕ ಸುನೀಲ್ ಕುಮಾರ್ (Sunil Kumar) ಸವಾಲೆಸೆದರು. ಬೆಂಳೂರಲ್ಲಿಂದು ಮಾಧ್ಯಮವನ್ನು ಉದ್ದೇಶಿಸಿ ಮಾತಾಡಿದ ಅವರು, ರಾಮ ಮಂದಿರ ಪ್ರಾಣ ಪ್ರತಿಷ್ಠೆ ಕಾರ್ಯಕ್ರಮದಲ್ಲಿ ಭಾಗಿಯಾಗಲು ತನಗೆ ಆಹ್ವಾನ ಸಿಕ್ಕಿಲ್ಲ್ಲ ಎಂದು ಪಿಳ್ಳೆನೆವ ಹೇಳುವ ಬದಲು ಸಿದ್ದರಾಮಯ್ಯನವರು ಕಾರ್ಯಕ್ರಮದಲ್ಲಿ ಪಾಲ್ಗೊಂಡು ಹಿಂದೂ ಧರ್ಮದೆಡೆ ಬದ್ಧತೆ ಪ್ರದರ್ಶಿಸಲಿ ಎಂದು ಶಾಸಕ ಹೇಳಿದರು. ಅಲ್ಪಸಂಖ್ಯಾತರನ್ನು ಓಲೈಸಲು ರೂ. 10,000 ಕೋಟಿ ಅನುದಾನ ಘೋಷಿಸುವ ಮುಖ್ಯಮಂತ್ರಿಯವರು ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣವಾಗಿರುವ ಹಿನ್ನೆಲೆಯಲ್ಲಿ ರಾಜ್ಯದ 100 ದೇವಸ್ಥಾನಗಳ ಅಭಿವೃದ್ಧಿಗಾಗಿ ಒಂದೊಂದು ದೇವಸ್ಥಾನಕ್ಕೆ ರೂ. 100 ಕೋಟಿಯಂತೆ ಮುಂದಿನ ಮೂರು ವರ್ಷಗಳ ಅವಧಿಯಲ್ಲಿ ಅನುದಾನ ಘೋಷಿಸಲಿ ಎಂದು ಸುನೀಲ ಕುಮಾರ್ ಹೇಳಿದರು.

 

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ