ದೇವಸ್ಥಾನ ಹಾಗೂ ಗರ್ಭಗುಡಿಗಳಲ್ಲಿ ಮೊಬೈಲ್ ಬಳಕೆ ನಿಷೇದಿಸಿ ಮುಜರಾಯಿ ಇಲಾಖೆ ಆದೇಶ ಮಾಡಿದ್ದರೂ, ಅದೊಂದು ಐತಿಹಾಸಿಕ ಪ್ರಸಿದ್ದ, ಪುರಾಣ ಪ್ರಸಿದ್ದ ದೇವಸ್ಥಾನವೊಂದರಲ್ಲಿ ಭಕ್ತರು ಮನಸ್ಸೋ ಇಚ್ಚೆ ದೇವರ ಮುಂದೆ ಸೆಲ್ಪಿಗೆ (Mobile Selfies) ಮುಗಿಬೀಳುವುದು, ಸಾಮಾಜಿಕ ಜಾಲತಾಣದಲ್ಲಿ ಲೈವ್‍ಗಳನ್ನು ನೀಡುತ್ತಿರುವುದು ಹೆಚ್ಚಾಗುತ್ತಿದೆ. ಇದರಿಂದ ದೇವಸ್ಥಾನದ ಅರ್ಚಕರು ಹಾಗೂ ಅನೇಕ ಭಕ್ತರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಅಷ್ಟಕ್ಕೂ ಅದು ಎಲ್ಲಿ ಅಂತೀರಾ ಈ ವರದಿ ನೋಡಿ…
ಹೀಗೆ.. ದೇವರ ಮುಂದೆ ನಿಂತು ಸೆಲ್ಫಿ ತೆಗೆದುಕೊಳ್ಳಲು ಮುಗಿಬಿದ್ದಿರುವುದು ಚಿಕ್ಕಬಳ್ಳಾಪುರ (Chikkaballapur) ತಾಲ್ಲೂಕಿನ ಐತಿಹಾಸಿಕ ಪ್ರಸಿದ್ದ, ಪುರಾಣ ಪ್ರಸಿದ್ಧ ನಂದಿ ಶ್ರೀ ಭೋಗನಂದೀಶ್ವರ ದೇವಸ್ಥಾನದಲ್ಲಿ (Sri Bhoga Nandeeshwara temple ). ದೇವಸ್ಥಾನ ನಂದಿ ಗಿರಿಧಾಮದ ತಪ್ಪಲಿನಲ್ಲಿದೆ, ನಂದಿ ಗಿರಿಧಾಮಕ್ಕೆ ಬಂದ ಕೆಲವು ಪ್ರವಾಸಿಗರು ಹಾಗೂ ಉತ್ತರ ಭಾರತ ಮೂಲದ ಪ್ರವಾಸಿಗರು ದೇವರ ದರ್ಶನಕ್ಕೆಂದು ಪ್ರತಿದಿನ ಬರುತ್ತಾರೆ. ಆದರೆ ದೇವರ ಮುಂದೆ ನಿಂತು ಭಕ್ತಿ, ಭಾವದಿಂದ ಪ್ರಾರ್ಥನೆ ಮಾಡುವುದರ ಬದಲು ಕೈಲ್ಲೊಂದು ಮೊಬೈಲ್ ಹಿಡಿದು ಸೆಲ್ಫಿ ಪೋಟೋ, ವೀಡಿಯೋ ತೆಗೆದುಕೊಳ್ಳುವುದು, ಸಾಮಾಜಿಕ ಜಾಲತಾಣಗಳ್ಳಿ ಲೈವ್‍ಸ್ಟ್ರೀಮಿಂಗ್ ಮಾಡುವುದು ಹೆಚ್ಚಾಗುತ್ತಿದೆ. ಇದರಿಂದ ಭಕ್ತಿ ಹಾಗೂ ನಿಷ್ಠೆಯಿಂದ ಬರುವ ಭಕ್ತರು ಹಾಗೂ ದೇವಸ್ಥಾನದ ಅರ್ಚಕರಿಗೆ ಕಿರಿಕಿರಿ ಉಂಟಾಗುತ್ತಿದೆ.
ಇನ್ನು ದೇವಸ್ಥಾನದ ಪುರೋಹಿತರುಗಳು ಅಭಿಷೇಕ, ಅರ್ಚನೆ, ಮಹಾಮಂಗಳಾರತಿ ಮಾಡುವಾಗಲೂ ಕೆಲವರು ಕೈಯಲ್ಲಿ ಮೊಬೈಲ್ ಹಿಡಿದು ಪೋಟೋ, ವೀಡಿಯೋ ಮೊರೆಹೋಗುತ್ತಾರೆ, ಇನ್ನೂ ಕೆಲವರು ವಾಟ್ಸಾಪ್ ವೀಡಿಯೋ ಕಾಲ್ ಮಾಡಿ, ಲೈವ್‍ನಲ್ಲಿ ದೇವರನ್ನು ತೋರಿಸುವುದರ ಬದಲು ಮನಸ್ಸಿಗೆ ಬಂದಂತೆ ದೇವರ ಮುಂದೆ ಮಾತನಾಡುತ್ತಿದ್ದಾರೆ. ಇದಕ್ಕೆಲ್ಲಾ ದೇವಸ್ಥಾನದ ಆಡಳಿತ ಮಂಡಳಿ ಕಡಿವಾಣ ಹಾಕಬೇಕು ಎನ್ನುತ್ತಾರೆ ಕೆಲವು ಭಕ್ತರು.
ದೇವಸ್ಥಾನಗಳಲ್ಲಿ ಮೊಬೈಲ್ ಬಳಕೆ ನಿಷೇದ ಮಾಡಿ, ಸರ್ಕಾರ ಆದೇಶ ಮಾಡಿದ್ದರೂ ಕೆಲವು ಭಕ್ತರು ಸೆಲ್ಫಿ, ಪೋಟೋ, ವೀಡಿಯೋಗಳಿಗೆಂದೇ ದೇವಸ್ಥಾನಗಳಿಗೆ ಬಂದು ದೇವರ ಮುಂದೆ ಚಾಟಿಂಗ್ ಮಾಡುತ್ತಿದ್ದಾರೆ. ಇದರಿಂದ ನಿಷ್ಠಾವಂತ ಭಕ್ತರು ಹಾಗೂ ಅರ್ಚಕರ ಗಮನಕ್ಕೆ ಭಂಗ ಬರುತ್ತಿದೆ.
ಜೀವನಶೈಲಿಗೆ ಸಂಬಂಧಿಸಿದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ