ಆ ಜಿಲ್ಲೆಯ ಆರು ತಾಲೂಕುಗಳು ತೀವ್ರ ಬರಪೀಡಿತವಾಗಿದ್ದು (drought) ಬಿತ್ತಿದ್ದ ಬೆಳೆಗಳು ಒಣಗಿ ನಿಂತಿವೆ. ಅಲ್ಲಿಷ್ಟು ಇಲ್ಲಷ್ಟು ಬೆಳೆಗಳು ಜೀವ ಹಿಡಿದು ನಿಂತಿವೆ, ರಾಗಿ ಫಸಲು ಒಣಗುತ್ತಿದೆ, ಒಣಗುತ್ತಿರುವ ಬೆಳೆ ಉಳಿಸಿಕೊಳ್ಳಲು ಅಲ್ಲಿಯ ರೈತರು, ಟ್ಯಾಂಕರ್ (tank irrigation) ಗಳ ಮೂಲಕ ನೀರು ಖರೀದಿಸಿ ಬೆಳೆ ರಕ್ಷಣೆ ಮಾಡಿಕೊಳ್ಳುತ್ತಿರುವ ದೃಶ್ಯ ಬರಗಾಲದ ಬವಣೆಯನ್ನು ಎತ್ತಿ ತೋರಿಸುತ್ತಿದೆ. ಅಷ್ಟಕ್ಕೂ ಅದೆಲ್ಲಿ ಅಂತೀರಾ ಈ ಕುರಿತು ಒಂದು ವರದಿ.
ಬಿತ್ತಿದ್ದ ರಾಗಿ ಪೈರು, ಇನ್ನೇನು ಒಂದಿಷ್ಟು ಮಳೆ ಬಂದಿದ್ರೆ… ರೈತರ ಹಸಿವು ನೀಗಿಸಬೇಕಿತ್ತು, ಆದ್ರೆ ಮಳೆರಾಯ ಕೈಕೊಟ್ಟ ಕಾರಣ ಜಮೀನಿನಲ್ಲಿ ರಾಗಿ ಪೈರು ಒಣಗುತ್ತಿದೆ. ಇದ್ರಿಂದ ಕನಿಷ್ಠ ಮನೆಯಲ್ಲಿರುವ ಹಸುಗಳಿಗೆ ಮೇವು ಆಗಲಿ ಅಂತ ಚಿಕ್ಕಬಳ್ಳಾಪುರ (Chikkaballapur) ತಾಲೂಕು ಕೊಳವನಹಳ್ಳಿ ರೈತ ದೇವರಾಜ್… ದೂರದ ಬೋರ್ ವೇಲ್ ಗಳಲ್ಲಿ ನೀರು ಖರೀದಿ ಮಾಡಿ ಟ್ಯಾಂಕರ್ ಗಳ ಮೂಲಕ ಒಣಗುತ್ತಿರುವ ರಾಗಿಗೆ ನೀರು ಹರಿಸುತ್ತಿದ್ದಾನೆ. ಈ ಕುರಿತು ನಮ್ಮ ಪ್ರತಿನಿಧಿ ಭೀಮಪ್ಪ ಪಾಟೀಲ ರೈತನ ಜಮೀನಿನಿಂದ ಪ್ರತ್ಯಕ್ಷ ವರದಿ ನೀಡಿದ್ದಾರೆ.
ಒಂದು ಟ್ಯಾಂಕರ್ ನೀರಿಗೆ ಆರು ನೂರು ರೂಪಾಯಿ ಬೆಲೆ ಆಗುತ್ತಿದೆ, ಆದ್ರೂ ಪರವಾಗಿಲ್ಲ, ಹಸಿವಿನಿಂದ ಬಳಲುತ್ತಿರುವ ಹಸುಗಳಿಗೆ ಮೇವು ಆದ್ರೂ ಆಗಲಿ ಅಂತ ದುಬಾರಿ ಹಣ ತೆತ್ತು ಪ್ರತಿದಿನ ಆರು ಟ್ಯಾಂಕರ್ ನೀರು ತರಿಸಿ ರಾಗಿ ಜಮೀನಿಗೆ ನೀರು ಹರಿಸುತ್ತಿದ್ದಾನೆ, ಜನರು ಎಲ್ಲಿಯಾದ್ರೂ ಕೂಲಿಗೆ ಹೋಗಿ ದುಡಿದು ತಿನ್ನಬಹುದು ಹಸುಗಳನ್ನು ಏನ್ ಮಾಡೊದು ಅನ್ನೊ ಚಿಂತೆ ರೈತರಿಗೆ ಕಾಡುತ್ತಿದೆ.
ರಾಜ್ಯ ಸರ್ಕಾರ ಚಿಕ್ಕಬಳ್ಳಾಪುರ ಜಿಲ್ಲೆಯನ್ನು ಸಂಪೂರ್ಣ ಬರಪೀಡಿತ ಜಿಲ್ಲೆಯೆಂದು ಘೋಷಣೆ ಮಾಡಿದೆ. ಆದ್ರೆ ಇನ್ನೂ ಸೂಕ್ತ ಬರ ಪರಿಹಾರ ಕ್ರಮಕೈಗೊಂಡಿಲ್ಲ, ಗೋ ಶಾಲೆಗಳ ಆರಂಭ ಮಾಡಿದ ಬಗ್ಗೆ ಮಾಹಿತಿ ಇಲ್ಲ, ಇದ್ರಿಂದ ಒಂದೆಡೆ ರೈತರು, ಮತ್ತೊಂದೆಡೆ ಜಾನುವಾರುಗಳು ಪರದಾಡ್ತಿವೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 1:45 pm, Sat, 28 October 23