ಚಿಕ್ಕಬಳ್ಳಾಪುರ, ಡಿ.19: ಜಿಲ್ಲೆಯ ಗುಡಿಬಂಡೆ(Gudibande)ತಾಲ್ಲೂಕಿನ ದಪ್ಪರ್ತಿ ಗ್ರಾಮದ ಮನೋಜ್ ಹಾಗೂ ಅಂಕಿತ ಪ್ರೇಮಿಗಳು (Lovers) ಒಬ್ಬರಿಗೊಬ್ಬರು ಪ್ರೀತಿಸಿ ಮನೆಯಿಂದ ಓಡಿಹೋಗಿ ಮದುವೆ ಮಾಡಿಕೊಂಡಿದ್ದರು. ಈ ಹಿನ್ನಲೆ ಆಕ್ರೋಶಗೊಂಡ ಅಂಕಿತ ತಂದೆ-ತಾಯಿ ಹಾಗೂ ಸಂಬಂಧಿಕರು, ನಿನ್ನೆ(ಡಿ.18) ಮನೋಜ್ ಮನೆಗೆ ನುಗ್ಗಿ ಅವರ ತಂದೆ ಗಂಗರಾಜು, ತಾಯಿ ವೆಂಕಟಲಕ್ಷ್ಮಮ್ಮ ಮೇಲೆ ಮನಸ್ಸೋ ಇಚ್ಚೆ ಹಲ್ಲೆ ನಡೆಸಿ ಗಾಯಗೊಳಿಸಿದ್ದರು. ಇದರಿಂದ ಗುಡಿಬಂಡೆ ಪೊಲೀಸ್ ಠಾಣೆಯಲ್ಲಿ ದೂರು-ಪ್ರತಿದೂರು ದಾಖಲಾಗಿದ್ದು, ಗ್ರಾಮದಲ್ಲಿ ಪೊಲೀಸರು ಬಂದೋಬಸ್ತ್ ಏರ್ಪಡಿಸಿದ್ದಾರೆ. ಮತ್ತೊಂದಡೆ ಗಾಯಾಳುಗಳು ಚಿಕ್ಕಬಳ್ಳಾಪುರ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಮತ್ತೊಂದಡೆ ಒಂದೇ ಗ್ರಾಮದ, ಒಂದೇ ಸಮುದಾಯದ ಅಕ್ಕಪಕ್ಕದ ಮನೆಯ ಹುಡುಗ-ಹುಡುಗಿ ಓಡಿಹೋಗಿ ಮದುವೆ ಮಾಡಿಕೊಂಡ ಕಾರಣ ಗ್ರಾಮದಲ್ಲಿ ಉದ್ವಿಘ್ನ ಪರಿಸ್ಥಿತಿ ಉಂಟಾಗಿದೆ. ಇದರಿಂದ ಎಚ್ಚೆತ್ತ ಗುಡಿಬಂಡೆ ಠಾಣೆ ಪೊಲೀಸರು ಇಂದು ಅಂಕಿತಾಳ ತಂದೆ ಶ್ರೀನಿವಾಸ್, ಚಿಕ್ಕಪ್ಪಂದಿರಾದ ಗೋವಿಂದಪ್ಪ, ಆನಂದಪ್ಪ ಹಾಗೂ ವೆಂಕಟೇಶಪ್ಪ ರವರನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.
ಇದನ್ನೂ ಓದಿ:ಬೆಳಗಾವಿ ರೀತಿ ಹಾವೇರಿಯಲ್ಲೂ ಹೀನ ಕೃತ್ಯ: ಪ್ರೀತಿಸಿ ಓಡಿ ಹೋದರೆಂದು ಯುವಕನ ಸೋದರ ಮಾವನ ಅರೆಬೆತ್ತಲೆಗೊಳಿಸಿ ಹಲ್ಲೆ
ಪ್ರೀತಿಸಿ ಓಡಿಹೋದ ಜೋಡಿಯ ಮದುವೆಗೆ ಯುವತಿಯ ಮನೆಯಲ್ಲಿ ತೀವ್ರ ವಿರೋಧ ವ್ಯಕ್ತವಾಗಿದೆ. ಅಂಕಿತಾಳ ಮನೆ ಕಡೆ ಆರ್ಥಿಕವಾಗಿ, ಸಾಮಾಜಿಕವಾಗಿ, ರಾಜಕೀಯವಾಗಿ ಬಲಾಢ್ಯರಾಗಿದ್ದಾರೆ. ಆದರೆ, ಹುಡುಗ ಮನೋಜ್ ಮನೆ ಕಡೆಯವರು ಸಾಮಾಜಿಕವಾಗಿ, ಆರ್ಥಿಕವಾಗಿ ಹಿಂದುಳಿದಿದ್ದಾರೆ. ಇದೇ ಈಗ ಮದುವೆಗೆ ಇದೇ ಅಡ್ಡಿಯಾಗಿದೆ. ಆದರೆ, ಯುವತಿ ಮದುವೆಯಾದರೆ ತನ್ನ ಪ್ರಿಯತಮನನ್ನೇ ಎಂದು ಹಠ ಹಿಡಿದು ಎಸ್ಕೇಪ್ ಆಗಿದ್ದಾಳೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ