ಚಿಕ್ಕಬಳ್ಳಾಪುರ, ಅ.15: ತಾಲೂಕಿನ ನಲ್ಲಗುಟ್ಟಪಾಳ್ಯಾ ಗ್ರಾಮದ ಶ್ರೀನಿವಾಸ್ ಹಾಗೂ ಶಶಿಕಲಾ ದಂಪತಿಗೆ ಒಂದು ಗಂಡು, ಒಂದು ಹೆಣ್ಣು ಮಕ್ಕಳಿದ್ದಾರೆ. ಕುಟುಂಬದಲ್ಲಿ ಅನುವಂಶಿಯ ಎಂಬಂತೆ ತಂದೆ-ತಾಯಿ ಹಾಗೂ ಇಬ್ಬರು ಮಕ್ಕಳಿಗೆ ಸ್ಕೀನ್ ಅಲರ್ಜಿಯಾಗಿದೆ. ನಾಟಿ ಔಷಧಿ(Graft Medicine)ಯಿಂದ ಗುಣಮುಖ ಆಗುತ್ತೆ ಎನ್ನುವ ನಂಬಿಕೆಯಿಂದ ಚಿಕ್ಕಬಳ್ಳಾಪುರ (Chikkaballapura)ದ ಬೋಯಿನಹಳ್ಳಿ ಗ್ರಾಮದ ನಾಟಿ ವೈದ್ಯ ಸತೀಶ ಎನ್ನುವವರ ಬಳಿ ಹೋಗಿ ಔಷಧಿ ತಂದಿದ್ದಾರೆ. ಮೂರು ದಿನಗಳ ಕಾಲ ಔಷಧಿಯನ್ನು ತಂದೆ-ಮಗ ಹಾಗೂ ಮಗಳು ಕುಡಿದಿದ್ದಾರೆ. ನಂತರ ತಲೆ ಸುತ್ತು, ಮೈ ನಡುಕದಿಂದ ಅಸ್ವಸ್ಥರಾಗಿ ಚಿಕ್ಕಬಳ್ಳಾಪುರ ಜಿಲ್ಲಾಸ್ಪತ್ರೆಗೆ ಬಂದಿದ್ದಾರೆ. ಇದೀಗ ಚಿಕಿತ್ಸೆ ಫಲಕಾರಿಯಾಗದೆ ನಾಲ್ಕು ವರ್ಷದ ಬಾಲಕ ವೇಧೇಶ ಮೃತಪಟ್ಟಿದ್ದು, ತಂದೆ ಹಾಗೂ ಮಗಳು ಗುಣಮುಖರಾಗಿದ್ದಾರೆ.
ಹೌದು, ನಾಟಿ ಔಷಧಿಯಿಂದ ಆದ ಪರಿಣಾಮವನ್ನು ಕೂಡಲೇ ವೈದ್ಯ ಸತೀಶ್ಗೆ ತಿಳಿಸಿದ್ದಾರೆ. ಆದ್ರೆ, ಅವಿವೇಕಿ ಸತೀಶ್ ಆಸ್ಪತ್ರೆಗೆ ಹೋಗಬೇಡಿ ಕೆಲವು ಸಮಯದ ಬಳಿಕ ಸರಿಹೊಗುತ್ತೆ ಎಂದು ಆಸ್ಪತ್ರೆಗೆ ಹೋಗುವುದನ್ನು ತಡೆದಿದ್ದಾನಂತೆ. ಆದ್ರೆ, ನೋವು ತಡೆಯಲಾಗದೆ ಚಿಕ್ಕಬಳ್ಳಾಪುರ ಜಿಲ್ಲಾಸ್ಪತ್ರೆಗೆ ಬಂದಿದ್ದಾರೆ. ತಕ್ಷಣ ವೈದ್ಯರು ತಂದೆ-ಮಗಳಿಗೆ ವಾಂತಿ ಮಾಡಿಸಿ ಪ್ರಾಣ ರಕ್ಷಣೆ ಮಾಡಲಾಗಿದೆ. ಆದ್ರೆ, ಬಾಲಕ ಮೃತಪಟ್ಟಿದ್ದಾನೆ. ಈಗ ನಾಟಿ ಔಷಧಿ ಸೇವಿಸಿದ್ದಕ್ಕೆ ಬಾಲಕನ ತಾಯಿ ಪಶ್ಚಾತ್ಥಾಪ ಪಡುತ್ತಿದ್ದು, ತಮಗೆ ಆದ ಗತಿ ಇನ್ಯಾರಿಗೂ ಆಗಬಾರದು ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ:ಮಕ್ಕಳಿಗೆ ದೊಣ್ಣೆಯಿಂದ ಹಲ್ಲೆ; ಪುತ್ರಿ ಸಾವು, ಪುತ್ರನಿಗೆ ಗಂಭೀರ ಗಾಯ, ತಾಯಿ ನೇಣಿಗೆ ಶರಣಾದ
ಇನ್ನು ನೊಂದ ಕುಟುಂಬದವರು ಈ ಘಟನೆ ಕುರಿತು ಚಿಕ್ಕಬಳ್ಳಾಪುರ ಗ್ರಾಮಾಂತರ ಠಾಣೆಗೆ ದೂರು ನೀಡಿದೆ. ಪೊಲೀಸರು ಅನುಮಾನಸ್ಪದ ಸಾವು ಪ್ರಕರಣ ದಾಖಲು ಮಾಡಿಕೊಂಡು ತನಿಖೆ ನಡೆಸಿದ್ದಾರೆ. ಇತ್ತ ಸೂಕ್ತ ಉತ್ತರ ನೀಡಬೇಕಿರುವ ನಾಟಿ ವೈದ್ಯ ಸತೀಶ್ ಅವರು ಫೋನ್ ಸ್ವೀಚ್ ಆಫ್ ಮಾಡಿಕೊಂಡು ತಲೆ ಮರೆಸಿಕೊಂಡಿದ್ದಾನೆ. ಆದರೆ, ಮಗನನ್ನು ಕಳೆದುಕೊಂಡ ಪೋಷಕರ ದುಖಃ ಹೇಳತೀರದಾಗಿದೆ. ಕೂಡಲೇ ಪೊಲೀಸರು ತನಿಖೆ ನಡೆಸಿ, ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಬೇಕಾಗಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ