Munivenkatappa: ತಮಟೆ ವಾದಕ ಮುನಿವೆಂಕಟಪ್ಪಗೆ ಪದ್ಮಶ್ರೀ ಘೋಷಣೆ: ರಾಜ್ಯ ಸರ್ಕಾರದಿಂದ ಬಿ.ಡಿ.ಎ ನಿವೇಶನ ರದ್ದು!

| Updated By: ವಿವೇಕ ಬಿರಾದಾರ

Updated on: Jan 26, 2023 | 7:46 AM

Padma shri: ದೇಶದ ಅತ್ಯನ್ನತ ನಾಗರಿಕ ಪ್ರಶಸ್ತಿಗಳಿಲ್ಲಿ ಒಂದಾದ ಪದ್ಮಶ್ರೀ ಪ್ರಶಸ್ತಿ ಪಡೆದ ತಮಟೆ ಕಲಾವಿದ ಮುನಿವೆಂಕಟಪ್ಪ ಅವರ ಬಿ.ಡಿ.ಎನ ಜೆ-ಕ್ಯಾಟಗರಿ ನಿವೇಶನವನ್ನು ರಾಜ್ಯ ಸರ್ಕಾರ ರದ್ದು ಮಾಡಿದೆ.

Munivenkatappa: ತಮಟೆ ವಾದಕ ಮುನಿವೆಂಕಟಪ್ಪಗೆ ಪದ್ಮಶ್ರೀ ಘೋಷಣೆ: ರಾಜ್ಯ ಸರ್ಕಾರದಿಂದ ಬಿ.ಡಿ.ಎ ನಿವೇಶನ ರದ್ದು!
ಮುನಿವೆಂಟಪ್ಪ (ಎಡಚಿತ್ರ) ಬಿಡಿಎ (ಬಲಚಿತ್ರ)
Follow us on

ಚಿಕ್ಕಬಳ್ಳಾಪುರ: ದೇಶದ ಅತ್ಯನ್ನತ ನಾಗರಿಕ ಪ್ರಶಸ್ತಿಗಳಿಲ್ಲಿ ಒಂದಾದ ಪದ್ಮಶ್ರೀ ಪ್ರಶಸ್ತಿಯನ್ನು (Padma Shri ) ಕೇಂದ್ರ ಸರ್ಕಾರ ರಾಜ್ಯದ ಬಡ ದಲಿತ ಖ್ಯಾತ ತಮಟೆ ಕಲಾವಿದ ಪಿಂಡಿಪಾಪನಹಳ್ಳಿ ಮುನಿವೆಂಕಟಪ್ಪಗೆ (Munivenkatappa) ಘೋಷಣೆ ಮಾಡಿದೆ. ಆದರೆ ರಾಜ್ಯ ಸರ್ಕಾರದ ಬಿ.ಡಿ.ಎ, ಮುನಿವೆಂಕಟಪ್ಪಗೆ ಮಂಜೂರಾಗಿದ್ದ ಜೆ-ಕ್ಯಾಟಗರಿ ನಿವೇಶನವನ್ನು ರದ್ದು ಮಾಡಿದೆ.

ಮುನಿವೆಂಕಟಪ್ಪಗೆ ಬಿ.ಡಿ.ಎ ನಿವೇಶನ ಮಂಜೂರಾಗಿತ್ತು

ಚಿಕ್ಕಬಳ್ಳಾಪುರ ಜಿಲ್ಲೆ ಶಿಡ್ಲಘಟ್ಟ ತಾಲೂಕಿನ ಕುಗ್ರಾಮ ಪಿಂಡಿಪಾಪನಹಳ್ಳಿ ಗ್ರಾಮದ ನಿವಾಸಿ ಮುನಿವೆಂಕಟಪ್ಪಗೆ ರಾಜ್ಯ ಸರ್ಕಾರ 26/2/2016ರಲ್ಲಿ ಕೆಂಪೇಗೌಡ ಬಡಾವಣೆಯ ಬಿ4 ಬ್ಲಾಕ್​ನ ಎ ಸೇಕ್ಟರ್​ನಲ್ಲಿ 6 ಇನ್ ಟು 9 ಮೀಟರ್​ನ (ಇ.ಡ್ಲೂ.ಎಸ್) ಜೆ-ಕ್ಯಾಟಗರಿಯ ನಿವೇಶನ ಸಂಖ್ಯೆ 70ನ್ನು ಮಂಜೂರು ಮಾಡಿತ್ತು. ಹಕ್ಕು ಪತ್ರನ್ನೂ ಕೊಡಲಾಗಿತ್ತು.

ಇದನ್ನೂ ಓದಿ: ಪ್ರಖ್ಯಾತ ತಮಟೆ ವಾದ್ಯ ಕಲಾವಿದ ಬಡ ಮುನಿವೆಂಕಟಪ್ಪಗೆ ಪದ್ಮಶ್ರೀ ಪ್ರಶಸ್ತಿ; ಇಲ್ಲಿದೆ ಯಶೋಗಾಥೆ

ಮುನಿವೆಂಕಟಪ್ಪಗೆ ಮಂಜೂರಾಗಿದ್ದ ಬಿ.ಡಿ.ಎ ನಿವೇಶನ ರದ್ದು

26/2/2016ರಲ್ಲಿ ಪಿಂಡಿಪಾಪನಹಳ್ಳಿ ಮುನಿವೆಂಕಟಪ್ಪಗೆ ಜೆ.ಕ್ಯಾಟಗರಿಯ ನಿವೇಶನ ಮಂಜೂರಾಗಿತ್ತು. ನಿವೇಶನ ಮಂಜೂರಾದ ಅವಧಿಯಿಂದ ಮೂರು ವರ್ಷಗಳ ಅವಧಿಯಲ್ಲಿ ಆ ನಿವೇಶನದ ಮೌಲ್ಯ 5 ಲಕ್ಷ ರೂಪಾಯಿಯನ್ನು ಬಿಡಿ.ಎಗೆ ಸಂದಾಯ ಮಾಡಿ ನಿವೇಶನವನ್ನು ನೊಂದಣಿ ಮಾಡಿಕೊಳ್ಳಬೇಕಿತ್ತು. ಆದರೆ ಬಡಪಾಯಿ ಕಲಾವಿದ ಮುನಿವೆಂಕಟಪ್ಪ ಬಳಿ ಅಷ್ಟೊಂದು ಹಣ ಇರಲಿಲ್ಲ. ಇದರಿಂದ ನಿಗದಿತ ಅವಧಿಯಲ್ಲಿ ಮುನಿವೆಂಕಟಪ್ಪ ಹಣ ಸಂದಾಯ ಮಾಡದೆ ತಡವಾಗಿ ಬ್ಯಾಂಕ್​ನಲ್ಲಿ ನಿವೇಶನದ ಮೌಲ್ಯದ ಹಣವನ್ನು ಸಂದಾಯ ಮಾಡಿದ್ದರು. ಇದರಿಂದ ಬಿಡಿಎ ನಿಯಮಾವಳಿ 1984ರ ನಿಯಮ 13(1)ರ ಪ್ರಕಾರ ಬಿ.ಡಿ.ಎ ಉಪಕಾರ್ಯದರ್ಶಿ 3 ರವರು 16/2/2019ರಂದು ಮುನಿವೆಂಕಟಪ್ಪನವರಿಗೆ ನೊಟೀಸ್ ಜಾರಿ ಮಾಡಿದರು. ನಂತರ 25/12/2019ಕ್ಕೆ ಅವಧಿ ಮುಕ್ತಾಯವಾಗಿದೆ ಎಂದು ಬಿ.ಡಿ.ಎ ಆಯುಕ್ತರ ಆದೇಶದ ಮೇರೆಗೆ ಬಿ.ಡಿ.ಎ ಕಾರ್ಯದರ್ಶಿ 3 ರವರು ಮುನಿವೆಂಕಟಪ್ಪನವರಿಗೆ ಮಂಜೂರಾಗಿದ್ದ ಬಿಡಿಎ ಜೆ-ಕ್ಯಾಟಗರಿಯ ನಿವೇಶನವನ್ನು 05/01/2023ರಂದು ರದ್ದು ಮಾಡಿ ಆದೇಶ ಹೊರಡಿಸಿದ್ದಾರೆ. ಇದರಿಂದ ಕೈಗೆ ಬಂದ ತುತ್ತು ಬಾಯಿಗೆ ಬರಲಿಲ್ಲ ಅಂತ ಪದ್ಮಶ್ರೀ ಪ್ರಶಸ್ತಿಗೆ ಆಯ್ಕೆ ಆಗಿರುವ ಪಿಂಡಿಪಾಪನಹಳ್ಳಿ ಮುನಿವೆಂಕಟಪ್ಪ ಟಿವಿ9 ಬಳಿ ಅಸಮಧಾನ ವ್ಯಕ್ತಪಡಿಸಿದ್ದಾರೆ.

ವರದಿ-ಭೀಮಪ್ಪ ಪಾಟೀಲ ಟಿವಿ9 ಚಿಕ್ಕಬಳ್ಳಾಫುರ

Published On - 7:31 am, Thu, 26 January 23