Chikkaballapur earthquake: ಮತ್ತೆ ಕಂಪಿಸಿದ ಚಿಕ್ಕಬಳ್ಳಾಪುರ ತಾಲೂಕು, ತಡ ರಾತ್ರಿ ಅಲ್ಲಲ್ಲಿ ಭೂಕಂಪ, 2.6 ತೀವ್ರತೆ ದಾಖಲು

| Updated By: ಆಯೇಷಾ ಬಾನು

Updated on: Jan 05, 2022 | 3:48 PM

Earthquake jolts chikkaballapur: ಚಿಕ್ಕಬಳ್ಳಾಪುರ ತಾಲೂಕಿನ ವಿವಿಧೆಡೆ ಮಂಗಳವಾರ ರಾತ್ರಿ ಭೂಕಂಪದ ಅನುಭವವಾಗಿದೆ. ಶೆಟ್ಟಗೆರೆ ಮತ್ತು ಸುತ್ತಮುತ್ತಲ ಪ್ರದೇಶಗಳಲ್ಲಿ ಕಂಪನದ ಅನುಭವವಾಗಿದೆ. ತಡರಾತ್ರಿ 3 ಗಂಟೆಯಿಂದ 2-3 ಬಾರಿ ಭೂಮಿ ಕಂಪಿಸಿದ ಅನುಭವವಾಗಿದೆ.

Chikkaballapur earthquake: ಮತ್ತೆ ಕಂಪಿಸಿದ ಚಿಕ್ಕಬಳ್ಳಾಪುರ ತಾಲೂಕು, ತಡ ರಾತ್ರಿ ಅಲ್ಲಲ್ಲಿ ಭೂಕಂಪ, 2.6 ತೀವ್ರತೆ ದಾಖಲು
ಚಿಕ್ಕಬಳ್ಳಾಪುರ ತಾಲೂಕಿನ ವಿವಿಧೆಡೆ ಮಂಗಳವಾರ ರಾತ್ರಿ ಭೂಕಂಪದ ಅನುಭವವಾಗಿದೆ.
Follow us on

ಚಿಕ್ಕಬಳ್ಳಾಪುರ: ಮಳೆ ನಿಂತರೂ ಹನಿ ನಿಂತಿಲ್ಲ ಎಂಬಂತಾಗಿದೆ ಚಿಕ್ಕಬಳ್ಳಾಪುರ ಸುತ್ತಮುತ್ತಲ ಪರಿಸ್ಥಿತಿ. 5 ದಶಕಗಳಲ್ಲಿ ಕಂಡುಕೇಳರಿಯದ ಮಳೆಯಿಂದ ತೊಯ್ದುತೊಪ್ಪೆಯಾಗಿದ್ದ ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಭಾರೀ ಮಳೆಗಾಲ ಬಳಿಕ, ಭೂಮಿಯ ಒಡಲಿನಿಂದ ಪಶ್ಚಾತ್​ ಕಂಪನಗಳ ಆರ್ಭಟ ಕೇಳಿ ಬರುತ್ತಿದೆ. ಹದಿನೈದು ಇಪ್ಪತ್ತು ದಿನಗಳ ಹಿಂದೆ ಭಾರೀ ಪ್ರಮಾಣದಲ್ಲಿ ನಿರಂತರವಾಗಿ ಭೂಮಿ ಅಲುಗಾಡಿತ್ತು. ಜನ ಬೆಚ್ಚಿಬಿದ್ದಿದ್ದರು. ಅದಾದ ಬಳಿಕ ಸ್ವಲ್ಪಮಟ್ಟಿಗೆ ಭೂತಾಯಿ ಶಾಂತವಾಗಿದ್ದಳು.

ಈ ಮಧ್ಯೆ, ಬರಗೆಟ್ಟ ಭೂಮಿ ಬರಿದಾಗಿದ್ದು, ಸತತ ಮಳೆಯಿಂದ ಅಂತರ್ಜಲ ಹೆಚ್ಚಾಗಿದ್ದೇ ಇದಕ್ಕೆ ಕಾರಣ. ಖಾಲಿಯಾಗಿದ್ದ ಕೊಳವೆ ಬಾವಿಗಳಿಂದ ಶಬ್ದಗಳು ಕೇಳಿಬರುತ್ತಿವೆ ಎಂದು ಸ್ವತಃ ಜಿಲ್ಲಾ ಆಡಳಿತವೇ ಗ್ರಾಮಸ್ಥರಲ್ಲಿ ಧೈರ್ಯ ತುಂಬುವ ಕೆಲಸ ಮಾಡಿತ್ತು. ವಿಜ್ಞಾನಿಗಳು ತಂಡೋಪಾದಿಯಲ್ಲಿ ಗ್ರಾಮಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದರು. ಆದರೆ ನಿನ್ನೆ ಮಂಗಳವಾರ ನಡುರಾತ್ರಿ 3 ಗಂಟೆಯಲ್ಲಿ ಮತ್ತೊಮ್ಮೆ ಭೂಮಿ ಕಂಪಿಸಿದೆ. ಜನ ಮತ್ತೊಮ್ಮೆ ಬೆಚ್ಚಿಬಿದ್ದಿದ್ದಾರೆ.

ಚಿಕ್ಕಬಳ್ಳಾಪುರ ತಾಲೂಕಿನ ವಿವಿಧೆಡೆ ಮಂಗಳವಾರ ರಾತ್ರಿ ಭೂಕಂಪದ ಅನುಭವವಾಗಿದೆ. ಶೆಟ್ಟಗೆರೆ ಮತ್ತು ಸುತ್ತಮುತ್ತಲ ಪ್ರದೇಶಗಳಲ್ಲಿ ಕಂಪನದ ಅನುಭವವಾಗಿದೆ. ತಡರಾತ್ರಿ 3 ಗಂಟೆಯಿಂದ 2-3 ಬಾರಿ ಭೂಮಿ ಕಂಪಿಸಿದ ಅನುಭವವಾಗಿದೆ. ಗ್ರಾಮದ ಕೆಲ ಮನೆಗಳ ಗೋಡೆಗಳಲ್ಲಿ ಬಿರುಕು ಕಾಣಿಸಿಕೊಳ್ಳುವಷ್ಟು ಭೂಮಿ ಕಂಪಿಸಿದೆ. ಇದರಿಂದ ಭಯಭೀತರಾದ ಗ್ರಾಮಸ್ಥರು ಮನೆಯ ಒಳಗಡೆ ಇರಲು ಹಿಂದೇಟು ಹಾಕಿದ್ದಾರೆ.

ಚಿಕ್ಕಬಳ್ಲಾಪುರ ತಾಲೂಕಿನ ಶೆಟ್ಟಿಗೆರೆ ಗ್ರಾಮದಲ್ಲಿ ಬುಧವಾರ ಬೆಳಗಿನ ಜಾವ 3.15 ರಿಂದ ಬೆಳಿಗ್ಗೆ 8 ಗಂಟೆ ವರೆಗೂ ಆಗಾಗ ಭೂಕಂಪ ಸಂಭವಸಿದ್ದು, ರಿಕ್ಟರ್ ಮಾಪಕದಲ್ಲಿ 2.6 ಭೂಕಂಪದ ತೀವ್ರತೆ ದಾಖಲಾಗಿದೆ ಎಂದು ಅಧಿಕೃತ ಮೂಲಗಳು ತಿಳಿಸಿವೆ. ಕೊರೊನಾ ಆತಂಕದ ಮಧ್ಯೆ ಭೂ ಕಂಪನ ಭೀತಿಯೂ ಕಾಡಲಾರಂಭಿಸಿದ್ದು ಬಂಡಹಳ್ಳಿ, ಪಿಲ್ಲಗುಂಡ್ಲಹಳ್ಳಿ, ಶೆಟ್ಟಿಗೆರೆ ಗ್ರಾಮಸ್ಥರು ನಿಜಕ್ಕೂ ಭಯಭೀತರಾಗಿದ್ದಾರೆ. ಆದರೆ ಇನ್ನೂ ಕೆಲವು ದಿನಗಳವರೆಗೂ ಭೂಮಿ ಕಂಪನವಾಗುವುದರ ಬಗ್ಗೆ ಮೂಲಗಳು ಮಾಹಿತಿಯೂ ಇದೆ. ಈಗಾಗಲೇ ಭೂಕಂಪನದಿಂದ ಗ್ರಾಮಗಳಲ್ಲಿರುವ ಮನೆಗಳ ಗೋಡೆಗಳಲ್ಲಿ ಬಿರುಕು ಕಾಣಿಸಿಕೊಂಡಿದೆ.

ರಿಕ್ಟರ್ ಮಾಪಕದಲ್ಲಿ 2.6 ಭೂಕಂಪದ ತೀವ್ರತೆ ದಾಖಲಾಗಿದೆ ಎಂದು ಅಧಿಕೃತ ಮೂಲಗಳು

Published On - 8:04 am, Wed, 5 January 22