ಚಿತ್ರದುರ್ಗ: ಹೊಸ ಮೊಬೈಲ್ ಕೊಡಿಸುವಂತೆ ಹಠ, ಆತ್ಮಹತ್ಯಗೆ ಯತ್ನಿಸಿದ ಯುವಕ ದುರಂತ ಅಂತ್ಯ

| Updated By: ರಮೇಶ್ ಬಿ. ಜವಳಗೇರಾ

Updated on: Oct 20, 2023 | 10:48 AM

ಮೊದಲಿದ್ದ ಫೋನ್ ಕಳೆದುಕೊಂಡು ಪರದಾಡುತ್ತಿದ್ದ ಯುವಕನೋರ್ವ ಹೊಸ ಮೊಬೈಲ್​ ಕೊಡಿಸುವಂತೆ ಅಜ್ಜನ ಬಳಿ ಬೇಡಿಕೆ ಇಟ್ಟಿದ್ದ. ಆದ್ರೆ, ಅಜ್ಜ ಈರುಳ್ಳಿ ಬೆಳೆ ಬಂದ ಮೇಲೆ ಕೊಡಿಸುತ್ತೇನೆಂದು ಹೇಳಿದ್ದ. ಆದರೂ ಸುಮ್ನೆ ಇರದ ಮೊಮ್ಮಗ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾನೆ. ದುರದೃಷ್ಟವಶಾತ್ ಯುವಕನ ಪ್ರಾಣ ಪಕ್ಷಿ ಹಾರಿಹೋಗಿದೆ.

ಚಿತ್ರದುರ್ಗ: ಹೊಸ ಮೊಬೈಲ್ ಕೊಡಿಸುವಂತೆ ಹಠ, ಆತ್ಮಹತ್ಯಗೆ ಯತ್ನಿಸಿದ ಯುವಕ ದುರಂತ ಅಂತ್ಯ
ಮೃತ ಯುವಕ
Follow us on

ಚಿತ್ರದುರ್ಗ, (ಅಕ್ಟೋಬರ್ 20): ಮೊಬೈಲ್ (mobile phone) ಕೊಡಿಸುವಂತೆ ಅಜ್ಜನಿಗೆ ಬ್ಲ್ಯಾಕ್​ ಮಾಡಲು ವಿಷ ಸೇವಿಸಿ ಆತ್ಮಹತ್ಯೆಗೆ  (Suicide) ಯತ್ನಿಸಿದ್ದ ಮೊಮ್ಮಗ ಮೃತಪಟ್ಟಿದ್ದಾನೆ. ಚಿತ್ರದುರ್ಗ (Chitradurga) ಜಿಲ್ಲೆಯ ಹೊಳಲ್ಕೆರೆ ತಾಲೂಕಿನ ಕೊಳಾಳ್​ ಗ್ರಾಮದಲ್ಲಿ ಈ ದುರ್ಘಟನೆ ನಡೆದಿದೆ. ಯಶವಂತ್​(20) ಮೃತ ಯುವಕ. ಹೊಸ ಮೊಬೈಲ್ ಕೊಡಿಸುವಂತೆ ಹಠ ಹಿಡಿದಿದ್ದ ಯಶವಂತ್, ಬೆದರಿಸಲೆಂದೇ ಆತ್ಮಹತ್ಯೆಗೆ ಯತ್ನಿಸಿದ್ದ. ಆದ್ರೆ, ದುರದೃಷ್ಟವಶಾತ್ ಯಶವಂತ್ ದುರಂತ ಅಂತ್ಯಕಂಡಿದ್ದಾನೆ.

ಅಕ್ಟೋಬರ್ 8ರಂದು ಹಿಂದೂ ಮಹಾಗಣಪತಿ ವಿಸರ್ಜನೆ ವೇಳೆ ಯಶವಂತ್​ ಮೊಬೈಲ್ ಕಳೆದುಕೊಂಡಿದ್ದ. ಈ ಹಿನ್ನೆಲೆಯಲ್ಲಿ ಕೈಯಲ್ಲಿ ಮೊಬೈಲ್​ ಇಲ್ಲದೇ ಕಂಗಾಲಾಗಿದ್ದ. ಕೊನೆಗೆ ಹೊಸ ಮೊಬೈಲ್ ಕೊಡಿಸುವಂತೆ ಅಜ್ಜನ ಬಳಿ ಹಠ ಹಿಡಿದಿದ್ದನ. ಆದ್ರೆ, ಅಜ್ಜ ಈರುಳ್ಳಿ ಬೆಳೆ ಬಂದ ಬಳಿಕ ಮೊಬೈಲ್ ಕೊಡಿಸುವುದಾಗಿ ಹೇಳಿದ್ದ. ಆದರೂ ಸಹ ಈಗಲೇ ಬೇಕೆಂದು ಬ್ಕ್ಯಾಕ್​ ಮೇಲೆ ಮಾಡಲು ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾನೆ. ಕೂಡಲೇ ಯಶವಂತ್ ನನ್ನು ಆಸ್ಪತ್ರೆಗೆ ಸಾಗಿಸುವ ಮಾರ್ಗ ಮಧ್ಯೆಯೇ ಕೊನೆಯುಸಿರೆಳೆದಿದ್ದಾನೆ. ಈ ಬಗ್ಗೆ ಚಿತ್ರಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಒಟ್ಟಿನಲ್ಲಿ ಮೊಬೈಲ್​ ಫೋನ್​ ಗೀಳಿಗೆ ಯುವಕ ಯಶವಂತ್ ಜೀವ ಕಳೆದುಕೊಂಡಿರುವುದು ದುರಂತ.

ಹೆಜ್ಜೇನು ದಾಳಿಗೆ ಅಸುನೀಗಿದ ರೈತ

ಹೆಜ್ಜೇನು ದಾಳಿಯಿಂದ ಗಾಯಗೊಂಡು ಆಸ್ಪತ್ರೆ ಸೇರಿದ್ದ ರೈತ ಚಿಕಿಕ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ ಘಟನೆ ಮೈಸೂರು‌ ಜಿಲ್ಲೆಯ ಹುಣಸೂರು ತಾಲ್ಲೂಕಿನ ತಟ್ಟೆಕೆರೆ ಗ್ರಾಮದಲ್ಲಿ ನಡೆದಿದೆ. ಲಕ್ಷ್ಮಣ್(58) ಚಿಕಿತ್ಸೆ ಫಲಿಸದೆ ಸಾವನ್ನಪ್ಪಿದ ರೈತ. ಇತ ಮೇಕೆಯ ಮೇವಿಗಾಗಿ ಮರದಲ್ಲಿ ಸೊಪ್ಪು ಕೀಳುತ್ತಿದ್ದಾಗ ಜೇನು ಹುಳುಗಳು ದಾಳಿ ಮಾಡಿದ್ದವು. ಇದರಿಂದ ತೀವ್ರ ಅಸ್ವಸ್ಥಗೊಂಡು ಆಸ್ಪತ್ರೆ ಸೇರಿದ್ದ ರೈತ, ಇದೀಗ ಚಿಕಿತ್ಸೆ ಫಲಿಸಿದೇ ಕೊನೆಯುಸಿರೆಳೆದಿದ್ದಾನೆ. ಈ ಕುರಿತು ಹುಣಸೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ.

Published On - 10:47 am, Fri, 20 October 23