ಚಿಕ್ಕಮಗಳೂರು: ಲಂಚಕ್ಕೂ ಟಿಪ್ಸ್ಗೂ ವ್ಯತ್ಯಾಸವಿದೆ, ನಾನು ದುಡ್ಡು ಕೊಟ್ಟೇ ಕೆಲ್ಸ ಮಾಡ್ಸೋದೆಂದ ಶಾಸಕ ಟಿಡಿ ರಾಜೇಗೌಡ
ಶಾಸಕರ ಹೇಳಿಕೆಗೆ ಬಿಜೆಪಿ ಸಾಮಾಜಿಕ ಮಾಧ್ಯಮ ಎಕ್ಸ್ ಮೂಲಕ ಕಿಡಿ ಕಾರಿದ್ದು, ಎಟಿಎಂ ಸರ್ಕಾರದಲ್ಲಿ ಕೆಲಸವಾಗಲು ಶಾಸಕರೂ ಲಂಚ ಕೊಡಬೇಕು ಎಂದು ವ್ಯಂಗ್ಯವಾಡಿದೆ. ಟಿಡಿ ರಾಜೇಗೌಡರನ್ನು ಈ ಕೂಡಲೇ ಶಾಸಕ ಸ್ಥಾನದಿಂದ ವಜಾ ಮಾಡಬೇಕು ಎಂದು ಬಿಜೆಪಿ ಎಕ್ಸ್ ಪೋಸ್ಟ್ನಲ್ಲಿ ಆಗ್ರಹಿಸಿದೆ.
ಚಿಕ್ಕಮಗಳೂರು, ಅಕ್ಟೋಬರ್ 20: ಕೆಲಸ ಮಾಡಿಸಿಕೊಳ್ಳೋಕೆ ಅಧಿಕಾರಗಳಿಗೆ ದುಡ್ಡು ಕೊಡುತ್ತೇನೆ. ನಾನು ಕೂಡ ದುಡ್ಡು ಕೊಟ್ಟು ಕೆಲಸ ಮಾಡಿಸಿಕೊಳ್ಳುತ್ತೇನೆ. ಮಲೆನಾಡಿನವರು ಸಹೃದಯದವರು. ಯಾರು ಕೂಡ ಸುಮ್ಮನೇ ಕೆಲಸ ಮಾಡಿಸಿಕೊಳ್ಳಲ್ಲ. ಟಿಪ್ಸ್ ಕೊಟ್ಟು ಕೆಲಸ ಮಾಡಿಸಿಕೊಳ್ಳುತ್ತಾರೆ. ಲಂಚಕ್ಕೂ (Bribe) ಟಿಪ್ಸ್ಗೂ ಭಾರಿ ವ್ಯತಾಸವಿದೆ ಎಂದು ಶೃಂಗೇರಿ ಕ್ಷೇತ್ರದ ಕಾಂಗ್ರೆಸ್ ಶಾಸಕ ಟಿಡಿ ರಾಜೇಗೌಡ (TD Rajegowda) ಹೇಳಿರುವ ವಿಡಿಯೋ ವೈರಲ್ ಆಗಿದೆ. ಇದನ್ನೇ ಇಟ್ಟುಕೊಂಡು ಕಾಂಗ್ರೆಸ್ ವಿರುದ್ಧ ಬಿಜೆಪಿ ವಾಗ್ದಾಳಿ ನಡೆಸಿದೆ.
ಕೆರೆ ಮತ್ತು ನೆಮ್ಮಾರು ಗ್ರಾಮಪಂಚಾಯ್ತಿಯಲ್ಲಿ ಇದೆ ತಿಂಗಳ 17 ರಂದು ನಡೆದಿದ್ದ ಜನಸಂಪರ್ಕ ಸಭೆಯಲ್ಲಿ ಶಾಸಕರು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡಿದ್ದರು. ನಂತರ ಮಾತನಾಡಿ, ಮಲೆನಾಡಿನವರು ಕೆಲಸ ಮಾಡಿಕೊಟ್ರೆ ಟಿಪ್ಸ್ ಕೊಡ್ತಾರೆ. ಯಾರು ಕೂಡ ಹಾಗೇ ಹೋಗಲ್ಲ. ನಾನು ಸಹ ನನ್ನ ಕೆಲ್ಸ ಮಾಡಿದ್ರೆ ಹಣ ಕೊಡ್ತೇನೆ ಎಂದು ಹೇಳಿದ್ದರು. ಈ ವಿಡಿಯೋ ಇದೀಗ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದೆ.
ಬಿಜೆಪಿ ವಾಗ್ದಾಳಿ: ಎಟಿಎಂ ಸರ್ಕಾರ ಎಂದು ಲೇವಡಿ
ಶಾಸಕರ ಹೇಳಿಕೆಗೆ ಬಿಜೆಪಿ ಸಾಮಾಜಿಕ ಮಾಧ್ಯಮ ಎಕ್ಸ್ ಮೂಲಕ ಕಿಡಿ ಕಾರಿದ್ದು, ಎಟಿಎಂ ಸರ್ಕಾರದಲ್ಲಿ ಕೆಲಸವಾಗಲು ಶಾಸಕರೂ ಲಂಚ ಕೊಡಬೇಕು ಎಂದು ವ್ಯಂಗ್ಯವಾಡಿದೆ.
ಈ #ATMSarkara ದಲ್ಲಿ ಕೆಲಸವಾಗಲು ಶಾಸಕರೂ ಲಂಚ ಕೊಡಬೇಕು. ಇದು ಸ್ವತಃ ಕಾಂಗ್ರೆಸ್ ಶಾಸಕ ಟಿ. ಡಿ. ರಾಜೇಗೌಡರೇ ಒಪ್ಪಿಕೊಂಡಿರುವ ಸತ್ಯ.
ಇದು ಭ್ರಷ್ಟರಿಂದ ಭ್ರಷ್ಟರಿಗಾಗಿ ಮತ್ತು ಭ್ರಷ್ಟರಿಗೋಸ್ಕರವೇ ಇರುವ ಸರ್ಕಾರ ಎಂಬುದು ಸಾಬೀತಾಗಲು ಇನ್ನೇನೂ ಉಳಿದಿಲ್ಲ.
ಲಂಚಬಾಕತನ ತೀರ್ಮಾನ ಮಾಡಲು ಸಾಂದರ್ಭಿಕ ಸಾಕ್ಷ್ಯಗಳೇ ಸಾಕು ಎಂದು ಸುಪ್ರೀಂ… pic.twitter.com/NFN9eTDiFs
— BJP Karnataka (@BJP4Karnataka) October 20, 2023
ಇದನ್ನೂ ಓದಿ: ಚಿಕ್ಕಮಗಳೂರು: ಮಹಿಷ ದಸರಾ ಆಚರಣೆಗೆ ಮುಂದಾದ ನೂರಾರು ಜನರು ವಶಕ್ಕೆ
ಈ #ATMSarkara ದಲ್ಲಿ ಕೆಲಸವಾಗಲು ಶಾಸಕರೂ ಲಂಚ ಕೊಡಬೇಕು. ಇದು ಸ್ವತಃ ಕಾಂಗ್ರೆಸ್ ಶಾಸಕ ಟಿಡಿ ರಾಜೇಗೌಡರೇ ಒಪ್ಪಿಕೊಂಡಿರುವ ಸತ್ಯ. ಇದು ಭ್ರಷ್ಟರಿಂದ ಭ್ರಷ್ಟರಿಗಾಗಿ ಮತ್ತು ಭ್ರಷ್ಟರಿಗೋಸ್ಕರವೇ ಇರುವ ಸರ್ಕಾರ ಎಂಬುದು ಸಾಬೀತಾಗಲು ಇನ್ನೇನೂ ಉಳಿದಿಲ್ಲ. ಲಂಚಬಾಕತನ ತೀರ್ಮಾನ ಮಾಡಲು ಸಾಂದರ್ಭಿಕ ಸಾಕ್ಷ್ಯಗಳೇ ಸಾಕು ಎಂದು ಸುಪ್ರೀಂ ಕೋರ್ಟ್ ಹೇಳಿರುವುದರಿಂದ ಶೃಂಗೇರಿ ಶಾಸಕರಾದ ಟಿಡಿ ರಾಜೇಗೌಡರನ್ನು ಈ ಕೂಡಲೇ ಶಾಸಕ ಸ್ಥಾನದಿಂದ ವಜಾ ಮಾಡಬೇಕು ಎಂದು ಬಿಜೆಪಿ ಎಕ್ಸ್ ಪೋಸ್ಟ್ನಲ್ಲಿ ಆಗ್ರಹಿಸಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ