
ಚಿಕ್ಕಮಗಳೂರು: ಭಾರೀ ಮಳೆಗೆ ಸೇತುವೆ ಕೊಚ್ಚಿ ಹೋಗಿರುವ ಘಟನೆ ಚಿಕ್ಕಮಗಳೂರು ಜಿಲ್ಲೆ ಮೂಡಿಗೆರೆ ತಾಲೂಕಿನ ಬಂಕೇನಹಳ್ಳಿಯಲ್ಲಿ ನಡೆದಿದೆ. ಮಳೆಗಾಲ ಹತ್ತಿರ ಬರ್ತಿದೆ, ಪ್ಲೀಸ್.. ಎಷ್ಟು ಬೇಗ ಆಗುತ್ತೆ ಅಷ್ಟು ಬೇಗ ಸೇತುವೆ ನಿರ್ಮಿಸಿ. ನೀವು ಮುತುವರ್ಜಿ ವಹಿಸಿಲ್ಲ ಅಂದ್ರೆ ನಾವುಗಳು ಸಮಸ್ಯೆಗೆ ಸಿಲುಕೋದು ಖಂಡಿತಾ ಅಂತಾ ಹತ್ತಾರು ಬಾರಿ ಸಚಿವರು, ಶಾಸಕರು, ಜಿಲ್ಲಾಧಿಕಾರಿಗಳು ಸೇರಿದಂತೆ ಎಲ್ಲರಿಗೂ ಆ ಊರಿನ ಜನರು ಪರಿ ಪರಿಯಾಗಿ ಬೇಡಿಕೊಂಡಿದ್ರು. ಕೊನೆಗೆ ಸೇತುವೆ ರಿಪೇರಿಗೆ ಯಾರು ಮುಂದಾಗದಿದ್ದಾಗ ಸ್ಥಳೀಯರೇ ಮುಂದೆ ನಿಂತು ತಾತ್ಕಾಲಿಕ ಸೇತುವೆಯೊಂದನ್ನ ಮಾಡಿಕೊಂಡಿದ್ರು.
ಸ್ಥಳೀಯರೇ ನಿರ್ಮಿಸಿಕೊಂಡಿದ್ದ ತಾತ್ಕಾಲಿಕ ಸೇತುವೆ ಕೂಡ ಕೊಚ್ಚಿ ಹೋಗಿದ್ದು ಬಂಕೇನಹಳ್ಳಿ, ಕೂಡಳ್ಳಿ, ಚೇಗು ಸೇರಿದಂತೆ ಐದಾರು ಗ್ರಾಮಗಳ ಸಾವಿರಾರು ಜನರು ಇದೀಗ ಸೇತುವೆ ಇಲ್ಲದಂತೆ ಪರದಾಡುವಂತಾಗಿದೆ. ಒಂದು ವೇಳೆ ಮಳೆ ಇದೇ ರೀತಿ ಜಾಸ್ತಿಯಾದ್ರೆ ಜನರ ಜೊತೆ ಜಾನುವಾರುಗಳಿಗೂ ಅಪಾಯ ಕಟ್ಟಿಟ್ಟ ಬುತ್ತಿ.
Published On - 10:53 am, Mon, 6 July 20