ದರ್ಗಾದ ಮೇಲೆ ದಾಳಿ: 5ಕ್ಕೂ ಹೆಚ್ಚು ದತ್ತಮಾಲಾಧಾರಿಗಳ ವಿರುದ್ಧ ಎಫ್​ಐಆರ್​​​ ದಾಖಲು

| Updated By: ಗಂಗಾಧರ​ ಬ. ಸಾಬೋಜಿ

Updated on: Dec 26, 2023 | 4:16 PM

ದರ್ಗಾದ ಮೇಲೆ ದಾಳಿ ಮಾಡಿದ್ದ ದತ್ತಮಾಲಾಧಾರಿಗಳ ವಿರುದ್ಧ ಚಿಕ್ಕಮಗಳೂರು ತಾಲೂಕಿನ ಲಿಂಗದಹಳ್ಳಿ ಠಾಣೆಯಲ್ಲಿ FIR ದಾಖಲು ಮಾಡಲಾಗಿದೆ. 5ಕ್ಕೂ ಹೆಚ್ಚು ಜನರ ವಿರುದ್ಧ ಎಫ್​ಐಆರ್​​​ ದಾಖಲಿಸಿರುವ ಪೊಲೀಸರು, ಸಿಸಿಟಿವಿ ವಿಡಿಯೋ ಆಧಾರದ ಮೇಲೆ ತನಿಖೆ ನಡೆಸುತ್ತಿದ್ದಾರೆ.

ದರ್ಗಾದ ಮೇಲೆ ದಾಳಿ: 5ಕ್ಕೂ ಹೆಚ್ಚು ದತ್ತಮಾಲಾಧಾರಿಗಳ ವಿರುದ್ಧ ಎಫ್​ಐಆರ್​​​ ದಾಖಲು
ದರ್ಗಾ ಮೇಲೆ ದಾಳಿ
Follow us on

ಚಿಕ್ಕಮಗಳೂರು, ಡಿಸೆಂಬರ್​ 26: ದರ್ಗಾದ ಮೇಲೆ ದಾಳಿ ಮಾಡಿದ್ದ ದತ್ತಮಾಲಾಧಾರಿಗಳ ವಿರುದ್ಧ ಚಿಕ್ಕಮಗಳೂರು ತಾಲೂಕಿನ ಲಿಂಗದಹಳ್ಳಿ ಠಾಣೆಯಲ್ಲಿ FIR ದಾಖಲು ಮಾಡಲಾಗಿದೆ. 5ಕ್ಕೂ ಹೆಚ್ಚು ಜನರ ವಿರುದ್ಧ ಎಫ್​ಐಆರ್​​​ ದಾಖಲಿಸಿರುವ ಪೊಲೀಸರು, ಸಿಸಿಟಿವಿ ವಿಡಿಯೋ ಆಧಾರದ ಮೇಲೆ ತನಿಖೆ ನಡೆಸುತ್ತಿದ್ದಾರೆ. ಶಾಂತವೇರಿ ಗ್ರಾಮದ ರಸ್ತೆ ಬದಿಯ ದರ್ಗಾ ಮೇಲೆ ಶಿವಮೊಗ್ಗ ನೋಂದಣಿಯ ವಾಹನದಲ್ಲಿದ್ದ ದತ್ತಮಾಲಾಧಾರಿಗಳು ದಾಳಿ ಮಾಡಿದ್ದರು.

ದತ್ತಜಯಂತಿ ಕೊನೆಯ ದಿನವಾದ ಇಂದು ದತ್ತ ಪಾದುಕೆ ದರ್ಶನದ ವೇಳೆ ದರ್ಗಾದಲ್ಲಿದ್ದ ಗೋರಿಗಳ ಮೇಲೆ ಗುಂಪೊಂದು ದಾಂದಲೆ ನಡೆಸಿದೆ. ದರ್ಗಾದ ಮೇಲಿದ್ದ ಬಟ್ಟೆ ತೆಗೆದು, ವಸ್ತುಗಳನ್ನು ಎಸೆದುಹೋಗಲಾಗಿದೆ. ಜಿಲ್ಲೆಯ ತರೀಕೆರೆ ತಾಲೂಕಿನ ಶಾಂತವೇರಿ ಗ್ರಾಮದಲ್ಲಿ ಘಟನೆ ಕಂಡುಬಂದಿದೆ. ಶಿವಮೊಗ್ಗ ಜಿಲ್ಲೆ ನೋಂದಣಿಯ ವಾಹನಗಳಲ್ಲಿ ದತ್ತಪೀಠಕ್ಕೆ ತೆರಳುತ್ತಿದ್ದಾಗ ಯುವಕರ ಗುಂಪು ದಾಂದಲೆ ನಡೆಸಿದೆ.

ಇದನ್ನೂ ಓದಿ: ಚಿಕ್ಕಮಗಳೂರಿನ ಶಾಂತವೇರಿ ದರ್ಗಾದಲ್ಲಿ ದಾಂಧಲೆ ನಡೆಸಿದ ಯುವಕರ ಗುಂಪು

ಪ್ರಶ್ನಿಸಲು ಬಂದ ಪೊಲೀಸರ ಮೇಲೂ ಹಲ್ಲೆ ಯತ್ನಿಸಿದ ಆರೋಪ ಕೇಳಿಬಂದಿತ್ತು. ಸ್ಥಳೀಯರು, ಪೊಲೀಸರು ಬರುತ್ತಿದ್ದಂತೆ ಪುಂಡರ ಗುಂಪು ಕಾಲ್ಕಿತ್ತಿದೆ. ಸದ್ಯ ಶಾಂತವೇರಿ ಗ್ರಾಮದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿದೆ.

ಪ್ರತಿ ವಾಹನಗಳ ತಪಾಸಣೆ

ವಿವಾದಿತ ಇನಾಂ ದತ್ತಾತ್ರೇಯ ಬಾಬಾ ಬುಡನ್ ಸ್ವಾಮಿ ದರ್ಗಾದಲ್ಲಿ ಇಂದು ದತ್ತಪಾದುಕೆ ದರ್ಶನ ಹೋಮ ಪೂಜೆ ಹಿನ್ನೆಲೆ ರಾಜ್ಯದ ಮೂಲೆ ಮೂಲೆಗಳಿಂದ ದತ್ತಮಾಲಾ ಧಾರಿಗಳು ಆಗಮಿಸಿದ್ದಾರೆ. ಹೀಗಾಗಿ ಚಿಕ್ಕಮಗಳೂರು ಪೊಲೀಸರು ಹೈ ಅಲರ್ಟ್ ಆಗಿದ್ದು, ದರ್ಗಾಕ್ಕೆ ತೆರಳುತ್ತಿರುವ ಪ್ರತಿ ವಾಹನ ತಪಾಸಣೆ ಮಾಡಲಾಗುತ್ತಿದೆ.

ಇದನ್ನೂ ಓದಿ: ಚಿಕ್ಕಮಗಳೂರು: ನಾಗೇಹನಹಳ್ಳಿಯಲ್ಲಿ 144 ಸೆಕ್ಷನ್​ ಜಾರಿ, ಶ್ರೀರಾಮ ಸೇನೆ ಮುಖಂಡ ರಂಜಿತ್ ಶೆಟ್ಟಿ ಅರೆಸ್ಟ್​

ಸಾವಿರಾರು ಸಂಖ್ಯೆಯಲ್ಲಿ ದತ್ತಮಾಲಾ ಧಾರಿಗಳು ಆಗಮಿಸುತ್ತಿದ್ದಾರೆ. ತಪಾಸಣೆ ನಡೆಸಿ ವಾಹನಗಳನ್ನ ಪೊಲೀಸರು ಬಿಡುತ್ತಿದ್ದಾರೆ. ಚಂದ್ರದ್ರೋಣ ಪರ್ವತದ ಕೈ ಮರ ಚೆಕ್ಪೋಸ್ಟ್ ಬಳಿ ತಪಾಸಣೆ ಮಾಡಲಾಗುತ್ತಿದೆ. ಇನಾಂ ದತ್ತಾತ್ರೇಯ ಬಾಬಾ ಬುಡನ್ ಸ್ವಾಮಿ ದರ್ಗಾಕ್ಕೆ ತೆರಳುವ ಮಾರ್ಗದಲ್ಲಿ ಪೊಲೀಸ್ ನಿಯೋಜನೆ ಮಾಡಲಾಗಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 4:06 pm, Tue, 26 December 23