ಚಿಕ್ಕಮಗಳೂರು: ಕಾಂಗ್ರೆಸ್ ಶಾಸಕ ಟಿ.ಡಿ.ರಾಜೇಗೌಡ ಆಪ್ತನ ಮನೆ ಮೇಲೆ ಪೊಲೀಸರ ದಾಳಿ, ಕುಕ್ಕರ್​ಗಳು ವಶಕ್ಕೆ

|

Updated on: Mar 21, 2023 | 8:38 PM

ಶೃಂಗೇರಿ ಕ್ಷೇತ್ರದ ಕಾಂಗ್ರೆಸ್ ಶಾಸಕ ಟಿಡಿ ರಾಜೇಗೌಡ ಅವರ ಆಪ್ತನ ಮನೆ ಮೇಲೆ ಪೊಲೀಸರು ದಾಳಿ ನಡೆಸಿದ್ದು, ಮತದಾರರಿಗೆ ಹಂಚಲು ತಂದಿದ್ದ 500ಕ್ಕೂ ಹೆಚ್ಚು ಕುಕ್ಕರ್​ಗಳನ್ನು ವಶಕ್ಕೆ ಪಡೆಯಲಾಗಿದೆ.

ಚಿಕ್ಕಮಗಳೂರು: ಕಾಂಗ್ರೆಸ್ ಶಾಸಕ ಟಿ.ಡಿ.ರಾಜೇಗೌಡ ಆಪ್ತನ ಮನೆ ಮೇಲೆ ಪೊಲೀಸರ ದಾಳಿ, ಕುಕ್ಕರ್​ಗಳು ವಶಕ್ಕೆ
ಶೃಂಗೇರಿ ಕಾಂಗ್ರೆಸ್ ಶಾಸಕ ಟಿ.ಡಿ.ರಾಜೇಗೌಡ ಆಪ್ತನ ಮನೆ ಮೇಲೆ ಪೊಲೀಸರ ದಾಳಿ, ಕುಕ್ಕರ್​ಗಳು ವಶಕ್ಕೆ
Follow us on

ಚಿಕ್ಕಮಗಳೂರು: ಕರ್ನಾಟಕ ವಿಧಾನಸಭೆ ಚುನಾವಣೆ (Karnataka Assembly Election 2023) ಸಮೀಪಿಸುತ್ತಿದ್ದಂತೆ ರಾಜಕೀಯ ಪಕ್ಷಗಳು ಮತದಾರರನ್ನು ತಮ್ಮತ್ತ ಸೆಳೆಯಲು ಇನ್ನಿಲ್ಲದ ಪ್ರಯತ್ನ, ತಂತ್ರಗಾರಿಗಳನ್ನು ಮಾಡುತ್ತಿದ್ದಾರೆ. ಇದರ ಭಾಗವಾಗಿ ನಾಯಕರು, ಆಪ್ತರು ಪೀಠೋಪಕರಣ, ಉಡುಪು ಇತ್ಯಾದಿಗಳನ್ನು ಕ್ಷೇತ್ರದ ಮತದಾರರಿಗೆ ಹಂಚಿಕೆ ಮಾಡುತ್ತಿದ್ದಾರೆ. ಆದರೆ ಯಾವುದೇ ಆಸೆ ಆಮಿಷಗಳಿಗೆ ಜನರು ಬಲಿಯಾಗದಂತೆ ಜಿಲ್ಲಾಡಳಿತಗಳು, ಪೊಲೀಸ್ ಇಲಾಖೆ ನೋಡಿಕೊಳ್ಳುತ್ತಿದೆ. ರಾಜಕೀಯ ಮುಖಂಡರ ಮೇಲೆ ಹದ್ದಿನ ಕಣ್ಣಿರಿಸಿದ್ದು, ಅಲ್ಲಲ್ಲಿ ದಾಳಿಗಳನ್ನೂ ನಡೆಸುತ್ತಿದ್ದಾರೆ. ಅದರಂತೆ ಮತದಾರರಿಗೆ ವಿತರಿಸಲು ಕಕ್ಕರ್​ಗಳನ್ನು ತಂದ ಬಗ್ಗೆ ಮಾಹಿತಿ ತಿಳಿದ ಚಿಕ್ಕಮಗಳೂರು ಪೊಲೀಸರು, ಶೃಂಗೇರಿ ಕ್ಷೇತ್ರದ ಕಾಂಗ್ರೆಸ್ ಶಾಸಕ ಟಿ.ಡಿ.ರಾಜೇಗೌಡ (MLA TD Rejegowda) ಆಪ್ತನ ಮನೆ ಮೇಲೆ ದಾಳಿ ನಡೆಸಿ ಕುಕ್ಕರ್​ಗಳನ್ನು ವಶಕ್ಕೆ ಪಡೆದಿದ್ದಾರೆ.

ಚಿಕ್ಕಮಗಳೂರು ಜಿಲ್ಲೆಯ ಶೃಂಗೇರಿ ಕ್ಷೇತ್ರದ ಶಾಸಕ ಟಿ.ಡಿ.ರಾಜೇಗೌಡ ಆಪ್ತರೂ ಆಗಿರುವ ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಸತೀಶ್ ಅವರ ಮನೆ ಮೇಲೆ ಕೊಪ್ಪ ತಾಲೂಕಿನ ಜಯಪುರ ಠಾಣಾ ಪೊಲೀಸರು ದಾಳಿ ನಡೆಸಿದ್ದಾರೆ. ಜಯಪುರ ಬಳಿಯ ತೆಂಗಿನಮನೆ ಗ್ರಾಮದಲ್ಲಿರುವ ನಿವಾಸದ ಮೇಲೆ ಈ ದಾಳಿ ನಡೆದಿದ್ದು, ಮತದಾರರಿಗೆ ಹಂಚಲು ತಂದಿದ್ದ 500ಕ್ಕೂ ಹೆಚ್ಚು ಕುಕ್ಕರ್​ಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಇದನ್ನೂ ಓದಿ: ಕುಕ್ಕರ್​ ತಯಾರಿಕಾ ಕಾರ್ಖಾನೆ ಮೇಲೆ ತಹಶೀಲ್ದಾರ್​ ದಾಳಿ: ಮತದಾರರಿಗೆ ಹಂಚಲು ತಯಾರಿಸಿದ್ದ 2900 ಕುಕ್ಕರ್​ಗಳು ಜಪ್ತಿ

ಕರ್ನಾಟಕ ವಿಧಾನಸಭೆ ಚುನಾವಣೆ ಹಿನ್ನಲೆ ಕಾಫಿನಾಡು ಚಿಕ್ಕಮಗಳೂರು ಜಿಲ್ಲೆಯ ಶೃಂಗೇರಿ ಕ್ಷೇತ್ರದ ಜನರ ಮತಗಳನ್ನು ತಮ್ಮತ್ತ ಸೆಳೆಯುವ ನಿಟ್ಟಿನಲ್ಲಿ ಕಳೆದ ಒಂದು ವಾರದಿಂದ ಟಿ.ಡಿ ರಾಜೇಗೌಡ ಬೆಂಬಲಿಗರು ಹಾಗೂ ಕಾರ್ಯಕರ್ತರು ಶೃಂಗೇರಿ ಕ್ಷೇತ್ರದಲ್ಲಿ ಕುಕ್ಕರ್ ಹಂಚಿಕೆ ಮಾಡುತ್ತಿದ್ದರು. ಇದಕ್ಕೆ ಸಂಬಂಧಿಸಿದ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದವು.

75ನೇ ಸ್ವಾತಂತ್ರ್ಯ ಅಮೃತ ಮಹೋತ್ಸವದ ಸವಿ ನೆನಪಿಗಾಗಿ ಎಂದು ಕುಕ್ಕರ್ ಬಾಕ್ಸ್​ ಮೇಲೆ ಶಾಸಕ ಟಿ.ಡಿ.ರಾಜೇಗೌಡ ಫೋಟೋ ಸಹಿತ ಪ್ರಿಂಟ್ ಹಾಕಿಸಿ ಕ್ಷೇತ್ರದ ಜನರಿಗೆ ಕುಕ್ಕರ್​ಗಳನ್ನು ಹಂಚುವಲ್ಲಿ ಬೆಂಬಲಿಗರು ನಿರತರಾಗಿದ್ದರು. ಅದರಂತೆ ಮನೆಮನೆಗಳಿಗೆ ಭೇಟಿ ನೀಡಿ ಕುಕ್ಕರ್ ಹಂಚಿಕೊಂಡು ತೆಗೆಸಿಕೊಂಡ ಫೋಟೋ ವೈರಲ್ ಆಗಿದ್ದವು. ಹೀಗೆ ಸುಮಾರು 1 ಲಕ್ಷಕ್ಕೂ ಅಧಿಕ ಕುಕ್ಕರ್​ಗಳನ್ನು ಹಂಚಿಕೆ ಮಾಡಲಾಗಿದೆ ಎನ್ನಲಾಗುತ್ತಿದೆ.

ರಾಜಕೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ