ಮೈಸೂರು: ಯುಗಾದಿ ಹಬ್ಬದ ನಿಮಿತ್ತ ತ್ರಿವೇಣಿ ಸಂಗಮದಲ್ಲಿ ಪುಣ್ಯಸ್ನಾನ ಮಾಡಲು ಹೋಗಿ ಎಸ್ಬಿಐ ನೌಕರ ಸಾವು
ಯುಗಾದಿ ಹಬ್ಬದ ನಿಮಿತ್ತ ಜಿಲ್ಲೆಯ ಟಿ.ನರಸೀಪುರ ತಾಲೂಕಿನ ತ್ರಿವೇಣಿ ಸಂಗಮದಲ್ಲಿ ಪುಣ್ಯಸ್ನಾನಕ್ಕೆ ಹೋಗಿದ್ದ ಎಸ್ಬಿಐ(SBI) ನೌಕರ ನದಿಯಲ್ಲಿ ಮುಳುಗಿ ಸಾವನ್ನಪಿದ್ದಾರೆ.
ಮೈಸೂರು: ಯುಗಾದಿ ಹಬ್ಬದ ನಿಮಿತ್ತ ಜಿಲ್ಲೆಯ ಟಿ.ನರಸೀಪುರ ತಾಲೂಕಿನ ತ್ರಿವೇಣಿ ಸಂಗಮದಲ್ಲಿ ಪುಣ್ಯಸ್ನಾನಕ್ಕೆ ಹೋಗಿದ್ದ ಎಸ್ಬಿಐ(SBI) ನೌಕರ ಸಾವನ್ನಪಿದ್ದಾರೆ. ಮಳವಳ್ಳಿ ತಾಲೂಕಿನ ಹೊನಗನಹಳ್ಳಿ ನಿವಾಸಿ ಗಂಗಾಧರ್ ಮೃತ ರ್ದುದೈವಿ. ಇಂದು ನಾಡಿನಾದ್ಯಂತ ಯುಗಾದಿ ಹಬ್ಬ ಅದ್ದೂರಿಯಾಗಿ ನಡೆಯುತ್ತಿದ್ದು, ಈ ಹಿನ್ನಲೆ ಟಿ.ನರಸೀಪುರದಲ್ಲಿರುವ ತ್ರಿವೇಣಿ ಸಂಗಮದಲ್ಲಿ ಪುಣ್ಯಸ್ನಾನ ಮಾಡಲು ಮೈಸೂರು, ಮಂಡ್ಯ, ಚಾಮರಾಜನಗರ ಜಿಲ್ಲೆಗಳಿಂದ ಸಾವಿರಾರು ಭಕ್ತರು ಆಗಮಿಸಿದ್ದರು. ಈ ವೇಳೆ ಸ್ನಾನಕ್ಕೆಂದು ನದಿಗೆ ಇಳಿದಾಗ ಮುಳುಗಿ ಸಾವನ್ನಪಿದ್ದಾರೆ. ಈ ಕುರಿತು ಟಿ.ನರಸೀಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕಂಟೈನರ್ಗೆ ವಿದ್ಯುತ್ ತಂತಿ ತಗುಲಿ ಗಾಯಗೊಂಡಿದ್ದ ಚಾಲಕ ಸಾವು
ಬೆಂಗಳೂರು ಗ್ರಾಮಾಂತರ: ಚಲಿಸುತ್ತಿದ್ದ ಲಾರಿಗೆ ವಿದ್ಯುತ್ ತಂತಿ ತಾಕಿದ ಪರಿಣಾಮ ಕಂಟೇನರ್ ಸ್ಥಳದಲ್ಲೇ ಹೊತ್ತಿ ಉರಿದು ಲಾರಿ ಚಾಲಕ ಗಂಭೀರವಾಗಿ ಗಾಯಗೊಂಡಿದ್ದ. ಬಳಿಕ ಆತನನ್ನ ಜಿಲ್ಲೆಯ ಆನೇಕಲ್ ತಾಲೂಕಿನ ಜಿಗಣಿಯ ಖಾಸಗಿ ಆಸ್ಪತ್ರೆಗೆ ಆತನನ್ನ ಸೇರಿಸಲಾಗಿತ್ತು. ಇದೀಗ ಜಿಗಣಿಯ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಿಸದೆ ಚಾಲಕ ಸಾವನ್ನಪಿದ್ದಾನೆ.
ಇದನ್ನೂ ಓದಿ:ಕೋಲಾರ: ಮಗಳನ್ನು ಏರ್ಪೋರ್ಟ್ಗೆ ಬಿಟ್ಟು ಬರುವಾಗ ಕಾರು ಅಪಘಾತ; ತಂದೆ ತಾಯಿ ಸ್ಥಳದಲ್ಲೇ ಸಾವು
ಅಕ್ರಮವಾಗಿ ಮದ್ಯ ಸೇವಿಸಿ ವ್ಯಕ್ತಿ ಸಾವು ಆರೋಪ; ಮೃತದೇಹವಿಟ್ಟು ಗ್ರಾಮಸ್ಥರಿಂದ ಧರಣಿ
ಚಿಕ್ಕಮಗಳೂರು: ಅಕ್ರಮವಾಗಿ ಮದ್ಯ ಸೇವಿಸಿ ಪುಟ್ಟೇಗೌಡ(60) ಎಂಬಾತ ಸಾವನ್ನಪ್ಪಿದ್ದು, ಆತನ ಮೃತದೇಹ ಇಟ್ಟು ಕೊಪ್ಪ ತಾಲೂಕಿನ ಹಿತ್ಲೆಗುಳಿ ಗ್ರಾಮಸ್ಥರಿಂದ ಪ್ರತಿಭಟನೆ ನಡೆಸಿದ್ದಾರೆ. ನಿನ್ನೆ(ಮಾ.21) ಸಂಜೆ ಮದ್ಯ ಸೇವಿಸಿ ಗ್ರಾಮದ ಪುಟ್ಟೇಗೌಡ ಮೃತಪಟ್ಟಿದ್ದಾನೆ. ಗ್ರಾಮದಲ್ಲಿ ಒಂದೇ ತಿಂಗಳಲ್ಲಿ ಇದು ಸೇರಿ ಮೂರನೇ ವ್ಯಕ್ತಿ ಸಾವನ್ನಪಿದ್ದು, ಅಕ್ರಮವಾಗಿ ಮಾರುತ್ತಿರುವ ಮದ್ಯ ಸೇವನೆಯೇ ಈ ಸಾವಿಗೆ ಕಾರಣ ಎಂದು ಆರೋಪಿಸಿದ್ದಾರೆ. ಅಕ್ರಮ ಮದ್ಯ ಮಾರಾಟಕ್ಕೆ ಕಡಿವಾಣ ಹಾಕದೆ ನಿರ್ಲಕ್ಷ್ಯ ಮಾಡುತ್ತಿದ್ದಾರೆ. ಸ್ಥಳಕ್ಕೆ ಜಿಲ್ಲಾಧಿಕಾರಿ, ಎಸ್ಪಿ ಬರುವಂತೆ ಗ್ರಾಮಸ್ಥರು ಪಟ್ಟು ಹಿಡಿದಿದ್ದಾರೆ.
ಚಿಕ್ಕಕೆರೆ ಸೇತುವೆ ಬಳಿ ಬೈಕ್ನಿಂದ ಬಿದ್ದು ಇಬ್ಬರು ಸಾವು
ತುಮಕೂರು: ಜಿಲ್ಲೆಯ ಕುಣಿಗಲ್ ತಾಲೂಕಿನ ಚಿಕ್ಕಕೆರೆ ಸೇತುವೆ ಬಳಿ ಬೈಕ್ನಿಂದ ಬಿದ್ದು ಕುಣಿಗಲ್ ನಿವಾಸಿಗಳಾದ ಚೇತನ್(28), ಕಿರಣ್(19) ಸಾವನ್ನಪಿದ್ದಾರೆ. ಕುಣಿಗಲ್ನಿಂದ ಹುಲಿಯೂರುದುರ್ಗದ ಕಡೆಗೆ ಹೋಗುತ್ತಿದ್ದಾಗ ಬೈಕ್ನಲ್ಲಿ ನಿಯಂತ್ರಣ ತಪ್ಪಿ ಬಿದ್ದು ಸಾವಿಗೀಡಾಗಿದ್ದಾರೆ. ಹುಲಿಯೂರುದುರ್ಗ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ಇನ್ನಷ್ಟು ರಾಜ್ಯಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ