ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್‌ವೇಯಲ್ಲಿ ಮತ್ತೊಂದು ಅಪಘಾತ; ಟೋಲ್ ತಪ್ಪಿಸಲು ಹೋಗಿ ಬೈಕ್ ಸವಾರನ ಬಲಿ ಪಡೆದ KSRTC ಬಸ್

ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್‌ವೇ ಟೋಲ್ ಸಂಗ್ರಹದಿಂದ ತಪ್ಪಿಸಿಕೊಳ್ಳಲು ಹೋಗಿ ಬೈಕ್ ಸವಾರ ಮೃತಪಟ್ಟ ಘಟನೆ ನಡೆದಿದೆ. ಕೆಎಸ್​ಆರ್​ಟಿಸಿ ಚಾಲಕನ ಹುಚ್ಚಾಟಕ್ಕೆ ಜೀವ ಬಲಿಯಾಗಿದೆ.

ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್‌ವೇಯಲ್ಲಿ ಮತ್ತೊಂದು ಅಪಘಾತ; ಟೋಲ್ ತಪ್ಪಿಸಲು ಹೋಗಿ ಬೈಕ್ ಸವಾರನ ಬಲಿ ಪಡೆದ KSRTC ಬಸ್
ಅಪಘಾತ ಮಾಡಿದ ಬಸ್
Follow us
|

Updated on:Mar 20, 2023 | 8:04 AM

ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿಯವರಿಂದ(Narendra Modi) ಹೊಸದಾಗಿ ಉದ್ಘಾಟನೆಗೊಂಡ ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್‌ವೇಯಲ್ಲಿ(Bengaluru Mysuru Expressway)  ಪ್ರತಿ ದಿನ ಕಿರಿಕ್, ಸಮಸ್ಯೆಗಳು ಕಂಡು ಬರುತ್ತಿವೆ. ಆದ್ರೆ ನಿನ್ನೆ ಭೀಕರ ಘಟನೆಯೊಂದು ನಡೆದಿದೆ. ನಿನ್ನೆ ಭಾನುವಾರ (ಮಾರ್ಚ್ 19) ಟೋಲ್ ಸಂಗ್ರಹದಿಂದ ತಪ್ಪಿಸಿಕೊಳ್ಳಲು ಹೋಗಿ ಬೈಕ್ ಸವಾರ ಮೃತಪಟ್ಟ ಘಟನೆ ನಡೆದಿದೆ. ಕೆಎಸ್​ಆರ್​ಟಿಸಿ ಚಾಲಕನ ಹುಚ್ಚಾಟಕ್ಕೆ ಜೀವ ಬಲಿಯಾಗಿದೆ.

ಬೆಂಗಳೂರಿನಿಂದ ಮೈಸೂರಿಗೆ ಹೊರಟಿದ್ದ ಕೆಎಸ್‌ಆರ್‌ಟಿಸಿ ಬಸ್ ಕಣಿಮಿಣಿಕೆ ಬಳಿ ಟೋಲ್ ಕಟ್ಟುವುದನ್ನು ತಪ್ಪಿಸಲು ಹೋಗಿ ಮತ್ತೆ ವಾಪಸ್ ಬೆಂಗಳೂರು ಕಡೆಗೆ ಯೂ ಟರ್ನ್ ಮಾಡಿಕೊಂಡು ಬರುತ್ತಿದ್ದಾಗ ಕುಂಬಳಗೋಡು ಬಳಿ ಬೈಕ್​ಗೆ ಡಿಕ್ಕಿ ಹೊಡೆದಿದೆ. ಅಪಘಾತದಲ್ಲಿ ಬೈಕ್ ಸವಾರ ಸ್ಥಳದಲ್ಲೇ ಸಾವನ್ನಪ್ಪಿದ್ದು, ಹಿಂಬದಿ ಸವಾರನಿಗೆ ಗಾಯಗಳಾಗಿವೆ. ಮೃತರನ್ನು ಸಿದ್ದಪ್ಪ ಖಾಸಗಿ ಕಂಪನಿ ಉದ್ಯೋಗಿ ಎಂದು ಗುರುತಿಸಲಾಗಿದೆ. ಹಿಂಬದಿ ಸವಾರನನ್ನು ರಾಜರಾಜೇಶ್ವರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಸ್ಥಳಕ್ಕೆ ಬಂದ ಪೊಲೀಸರು ಪರಿಶೀಲನೆ ನಡೆಸಿ ದೂರು ದಾಖಲಿಸಿಕೊಂಡಿದ್ದಾರೆ. ಕೆಎಸ್‌ಆರ್‌ಟಿಸಿ ಚಾಲಕನ ನಿರ್ಲಕ್ಷ್ಯ ಮತ್ತು ಅತಿವೇಗದ ಚಾಲನೆಯಿಂದ ಅಪಘಾತ ಸಂಭವಿಸಿದೆ ಎಂದು ಪ್ರಕರಣದ ತನಿಖೆ ನಡೆಸುತ್ತಿರುವ ಕುಂಬಳಗೋಡು ಪೊಲೀಸರು ತಿಳಿಸಿದ್ದಾರೆ.

ಇದನ್ನೂ ಓದಿ: Bengaluru-Mysuru Expressway: ವಿಪಕ್ಷಗಳ ಆರೋಪದ ನಡುವೆ ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿ ಅಪಘಾತ

ಕೆಎಸ್‌ಆರ್‌ಟಿಸಿಯ ಅಧಿಕಾರಿಯೊಬ್ಬರು ಮಾತನಾಡಿ, ಇದು ಮೈಸೂರಿಗೆ ಹೋಗುವ ಬಸ್ ಆಗಿತ್ತು. ನೈಸ್ ರಸ್ತೆ ಜಂಕ್ಷನ್ ದಾಟಿದ ನಂತರ ಚಾಲಕ ಬಿಡದಿ ತಲುಪಲು ಎಕ್ಸ್‌ಪ್ರೆಸ್‌ವೇಯ ಮೇಲ್ಸೇತುವೆಯನ್ನು ಬಳಸಿಕೊಂಡಿದ್ದಾನೆ. ಟೋಲ್ ಗೇಟ್ ಬಳಿಯ ಫ್ಲೈಓವರ್‌ನಿಂದ ಕೆಳಗಿಳಿದ ನಂತರ, ಮುಖ್ಯ ಕ್ಯಾರೇಜ್‌ನಿಂದ ಸೇವೆಗೆ ಒದಗಿಸಲಾದ ಪ್ರವೇಶವನ್ನು ಮುಚ್ಚಲಾಗಿದೆ ಎಂದು ಚಾಲಕನ ಗಮನಕ್ಕೆ ಬಂದಿದೆ. ಹೋಗಾಗಿ ಟೋಲ್ ಪ್ಲಾಜಾವನ್ನು ಪ್ರವೇಶಿಸುವ ಬದಲು, ಯು-ಟರ್ನ್ ತೆಗೆದುಕೊಳ್ಳಲು ನಿರ್ಧರಿಸಿ ವಾಹನವನ್ನು ವಿರುದ್ಧ ದಿಕ್ಕಿನಲ್ಲಿ ಓಡಿಸಿದ್ದಾನೆ. ಸುಮಾರು 1 ಕಿಲೋಮೀಟರ್ ಓಡಿಸಿದ ನಂತರ, ಅಪಘಾತ ಸಂಭವಿಸಿದೆ ಎಂದು ತಿಳಿಸಿದರು. ಎರಡು ದಿನಗಳ ಹಿಂದೆ ಕ್ರೈಸ್ಟ್ ಯೂನಿವರ್ಸಿಟಿ ಬಳಿಯ ಮುಖ್ಯ ರಸ್ತೆಯಿಂದ ಸರ್ವಿಸ್ ರಸ್ತೆಗೆ ಪ್ರವೇಶವನ್ನು ಮುಚ್ಚಲಾಗಿದ್ದು, ಅದರ ಬಗ್ಗೆ ಚಾಲಕನಿಗೆ ತಿಳಿದಿರಲಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ

Published On - 7:48 am, Mon, 20 March 23