ಹಾಜರಾತಿ ಹಾಕಿ ದಿ ಕಾಶ್ಮೀರ್ ಫೈಲ್ಸ್ ಸಿನಿಮಾ ನೋಡಲು ಹೋದ ಚಿಕ್ಕಮಗಳೂರು ನಗರಸಭೆ ಸಿಬ್ಬಂದಿ, ಕಚೇರಿಗೆ ಬಂದು ಕಂಗಾಲಾದ ಸಾರ್ವಜನಿಕರು

| Updated By: ಆಯೇಷಾ ಬಾನು

Updated on: Mar 21, 2022 | 4:00 PM

ಚಿಕ್ಕಮಗಳೂರು ನಗರಸಭೆ ಸಂಪೂರ್ಣ ಖಾಲಿ ಖಾಲಿ ಕಂಡು ಬಂದಿದೆ. ಸಿಬ್ಬಂದಿ ಕರ್ತವ್ಯದ ವೇಳೆ ಸಿನಿಮಾ ವೀಕ್ಷಣೆಗೆ ತೆರಳಿದ್ದಾರೆ. ನಗರಸಭೆ ಸಿಬ್ಬಂದಿ ವರ್ತನೆ ವಿರುದ್ಧ ಕಾಂಗ್ರೆಸ್ ಕಾರ್ಯಕರ್ತರು ಆಕ್ರೋಶ ಹೊರ ಹಾಕಿದ್ದಾರೆ.

ಹಾಜರಾತಿ ಹಾಕಿ ದಿ ಕಾಶ್ಮೀರ್ ಫೈಲ್ಸ್ ಸಿನಿಮಾ ನೋಡಲು ಹೋದ ಚಿಕ್ಕಮಗಳೂರು ನಗರಸಭೆ ಸಿಬ್ಬಂದಿ, ಕಚೇರಿಗೆ ಬಂದು ಕಂಗಾಲಾದ ಸಾರ್ವಜನಿಕರು
ಚಿಕ್ಕಮಗಳೂರು ನಗರಸಭೆ ಕಚೇರಿ ಖಾಲಿ ಖಾಲಿ
Follow us on

ಚಿಕ್ಕಮಗಳೂರು: ಕಾಶ್ಮೀರಿ ಪಂಡಿತರ ಮೇಲಾದ ದೌರ್ಜನ್ಯ, ಹತ್ಯೆ, ವಲಸೆಯನ್ನು ಎಳೆ ಎಳೆಯಾಗಿ ತೆರೆದಿಟ್ಟಿರುವ ದಿ ಕಾಶ್ಮೀರ್ ಫೈಲ್ಸ್(The Kashmir Files) ಚಿತ್ರ ಅನೇಕ ಕಾರಣಗಳಿಂದಾಗಿ ಭಾರಿ ಸದ್ದು ಮಾಡುತ್ತಿದೆ. ವಿವೇಕ್ ಅಗ್ನಿಹೋತ್ರಿ ನಿರ್ದೇಶನದ “ದಿ ಕಾಶ್ಮೀರ್ ಫೈಲ್ಸ್” ಸಿನಿಮಾ ಹೊಸದೊಂದು ಹವಾವನ್ನೇ ಸೃಷ್ಠಿ ಮಾಡಿರೋದು ಎಲ್ಲರಿಗೂ ಗೊತ್ತಿರುವ ವಿಚಾರ. ಕಾಶ್ಮೀರ ಪಂಡಿತರ ಹತ್ಯಾಕಾಂಡದ ಕುರಿತಾದ ಎಳೆಯನ್ನ ಹೊಂದಿರುವ ಈ ಚಿತ್ರ ಇದೀಗ ರಾಜಕೀಯ ಚರ್ಚೆಗೂ ಎಡೆಮಾಡಿಕೊಟ್ಟಿದೆ. ಒಂದೆಡೆ ಹೇಗಾದ್ರೂ ಮಾಡಿ ಎಲ್ಲರಿಗೂ ಈ ಚಿತ್ರವನ್ನ ತೋರಿಸಬೇಕು ಅಂತಾ ಬಿಜೆಪಿ ಉತ್ಸುಕತೆ ತೋರುತ್ತಿದ್ರೆ, ಈ ಸಿನಿಮಾದದಿಂದ ತನಗೆ ಮೈನಸ್ ಆಗಬಗಹುದು ಅಂತಾ ಕಾಂಗ್ರೆಸ್ ಲೆಕ್ಕಾಚಾರ ಹಾಕುತ್ತಿದೆ. ಇಷ್ಟೇ ಅಲ್ಲ ಹಿಂದಿ ಭಾಷೆಯಲ್ಲಿರುವ “ದಿ ಕಾಶ್ಮೀರ್ ಫೈಲ್ಸ್ ” ಚಿತ್ರವನ್ನ ಕನ್ನಡಕ್ಕೆ ಡಬ್ ಮಾಡುವ ಪ್ರಯತ್ನಗಳು ಕೂಡ ನಡೀತಿದೆ. ಈ ಮಧ್ಯೆದಲ್ಲೇ ಚಿಕ್ಕಮಗಳೂರು ನಗರಸಭೆಯಲ್ಲೊಂದು ಎಡವಟ್ಟು ನಡೆದು ಹೋಗಿದೆ. ಸಿನಿಮಾವನ್ನ ವೀಕ್ಷಿಸಲು ಕರ್ತವ್ಯಕ್ಕೆ ಚಕ್ಕರ್ ಹಾಕಿ ಸಿಬ್ಬಂದಿಗಳೆಲ್ಲರೂ ಸಿನಿಮಾಕ್ಕೆ ಹಾಜರ್ ಆಗಿರುವ ಘಟನೆ ನಡೆದಿದೆ.

ಸಿನಿಮಾ ವೀಕ್ಷಣೆಗೆ ನಗರಸಭೆ ಅಧಿಕಾರಿಗಳು-ಸಿಬ್ಬಂದಿಗಳನ್ನ ಆಹ್ವಾನಿಸಿದ ಅಧ್ಯಕ್ಷ
“ದಿ ಕಾಶ್ಮೀರ್ ಫೈಲ್ಸ್” ಸಿನಿಮಾವನ್ನ ಉಚಿತವಾಗಿ ತೋರಿಸುವುದಾಗಿ ನಗರಸಭೆ ಅಧ್ಯಕ್ಷ ವರಸಿದ್ದಿ ವೇಣುಗೋಪಾಲ್ ನಿನ್ನೆಯೇ ಎಲ್ಲರಿಗೂ ವಾಟ್ಸಾಪ್ ಮೆಸೇಜ್ ಮಾಡಿದ್ದಾರೆ. ಕಾಶ್ಮೀರಿ ಪಂಡಿತರ ಮಾರಣಹೋಮವನ್ನ ಎಳೆ ಎಳೆಯಾಗಿ ಬಿಚ್ಚಿಡುವ ನೈಜ್ಯ ಘಟನೆಗಳ ಸಿನಿಮಾ 32 ವರ್ಷಗಳನ ನಂತರ ತೆರೆಗೆ ಬಂದಿದೆ. ತಪ್ಪದೇ ಸಿನಿಮಾ ನೋಡೋಣ, ಇತಿಹಾಸ ಅರಿಯೋಣ ಅಂತಾ ನಗರಸಭೆ ಅಧ್ಯಕ್ಷರು ಎಲ್ಲರಿಗೂ ಸಂದೇಶ ರವಾನಿಸಿದ್ದಾರೆ. ಹೀಗಾಗಿ ಇಂದು ಎಲ್ಲಾ ಅಧಿಕಾರಿಗಳು-ಸಿಬ್ಬಂದಿಗಳು ಕೆಲಸಕ್ಕೆ ಚಕ್ಕರ್ ಹಾಕಿ ಸಿನಿಮಾವನ್ನ ನೋಡಿದ್ದಾರೆ.

ಚಿಕ್ಕಮಗಳೂರು ನಗರಸಭೆ ಕಚೇರಿ

ಕರ್ತವ್ಯ ಬಿಟ್ಟು ಚಿತ್ರ ವೀಕ್ಷಿಸಲು ಹೋದವರ ವಿರುದ್ಧ ಕಾಂಗ್ರೆಸ್ ಆಕ್ರೋಶ
ಕೆಲಸಕ್ಕೆ ಚಕ್ಕರ್ ಹಾಕಿ ಎಲ್ಲರೂ ಸಿನಿಮಾಗೆ ತೆರಳಿದ್ದರಿಂದ ಸಹಜವಾಗಿಯೆ ನಗರಸಭೆ ಸಂಪೂರ್ಣ ಖಾಲಿ ಖಾಲಿಯಾಗಿತ್ತು. ನಗರಸಭೆಗೆ ಕೆಲಸ ಮಾಡಿಸಿಕೊಳ್ಳಲು ಬಂದ ಸಾರ್ವಜನಿಕರು ಸಿಬ್ಬಂದಿಗಳು ಇಲ್ಲದೇ ಪರದಾಡಿದ್ದಾರೆ. ಹಾಜರಾತಿ ಪುಸ್ತಕದಲ್ಲಿ ಸಹಿ ಹಾಕಿ ಸಿಬ್ಬಂದಿಗಳೆಲ್ಲಾ ಕರ್ತವ್ಯದ ಸಮಯದಲ್ಲೇ ಸಿನಿಮಾ ನೋಡಲು ಹೋಗಿದ್ದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿತ್ತು. ವಿಚಾರ ಗೊತ್ತಾಗುತ್ತಿದ್ದಂತೆ ನಗರಸಭೆಗೆ ತೆರಳಿದ ಕಾಂಗ್ರೆಸ್ ಮುಖಂಡರು, ಕಾರ್ಯಕರ್ತರು ನಗರಸಭೆ ಅಧ್ಯಕ್ಷ, ಅಧಿಕಾರಿಗಳು-ಸಿಬ್ಬಂದಿಗಳ ವಿರುದ್ಧ ಗರಂ ಆದ್ರು. ಅಲ್ಲದೇ ಈ ಕುರಿತು ಕ್ರಮ ಕೈಗೊಳ್ಳುವಂತೆ ಜಿಲ್ಲಾಧಿಕಾರಿಗಳಿಗೆ ಮನವಿ ಕೂಡ ಸಲ್ಲಿಸಿದ್ರು.

ಸಿನಿಮಾ ನೋಡೋದು ತಪ್ಪಲ್ಲ, ಕರ್ತವ್ಯದ ಸಮಯದಲ್ಲೇ ಹೋಗಿದ್ದು ನೂರಕ್ಕೆ ನೂರರಷ್ಟು ತಪ್ಪು
ಒಂದೆಡೆ ಕಾಂಗ್ರೆಸ್ ನಗರಸಭೆಯ ಅಧಿಕಾರಿಗಳು-ಸಿಬ್ಬಂದಿಗಳ ವರ್ತನೆಯನ್ನ ಖಂಡಿಸಿದ್ರೆ, ಇನ್ನೊಂದೆಡೆ ಜನಸಾಮಾನ್ಯರು ಕೂಡ ನಗರಸಭೆಯ ಈ ನಡೆಯನ್ನ ವಿರೋಧಿಸಿದ್ರು. ಸಿನಿಮಾವನ್ನ ನೋಡೋದು ತಪ್ಪಲ್ಲ, ಆದ್ರೆ ಕೆಲಸಕ್ಕೆ ಚಕ್ಕರ್ ಹಾಕಿ ಸಿನಿಮಾ ನೋಡಲು ಹೋಗಿದ್ದು ನೂರಕ್ಕೆ ನೂರರಷ್ಟು ತಪ್ಪು ಅನ್ನೋ ಅಭಿಪ್ರಾಯವನ್ನ ಜನಸಾಮಾನ್ಯರು ವ್ಯಕ್ತಪಡಿಸಿದ್ರು. ಎಷ್ಟೋ ಜನ ಆ ಕೆಲಸ, ಈ ಕೆಲಸ ಅಂತಾ ನಗರಸಭೆಗೆ ಬಂದಿರ್ತಾರೆ, ಇಲ್ಲಿ ಬಂದ್ರೆ ಯಾರೂ ಕೂಡ ಇಲ್ಲ ಅಂದ್ರೆ ಏನರ್ಥ ಅಂತಾ ಪ್ರಶ್ನಿಸಿದ್ರು. ಸಿನಿಮಾ ನೋಡೋಕೆ ಯಾರ ಅಭ್ಯಂತರವೂ ಇಲ್ಲ, ಆದ್ರೆ ಕಚೇರಿ ಕೆಲಸದ ನಡುವೆ ಹೋಗಿ ಸಾರ್ವಜನಿಕರಿಗೆ ತೊಂದರೆ ಕೊಟ್ಟಿದ್ದು ನಿಜಕ್ಕೂ ಒಳ್ಳೆ ನಡೆಯಲ್ಲ ಅಂತಾ ಜನಸಾಮಾನ್ಯರು ಕೂಡ ನಗರಸಭೆ ಟೀಂ ವಿರುದ್ಧ ಆಕ್ರೋಶ ಹೊರಹಾಕಿದ್ರು.

ಇದನ್ನೂ ಓದಿ: ಬೀದಿ ಬದಿಯಲ್ಲಿದ್ದ ನಿರ್ಗತಿಕ ವ್ಯಕ್ತಿಯನ್ನು ಮದುವೆಯಾದ ಮಹಿಳೆ: ಇವರ ಸಿಂಪಲ್​ ಲವ್​ ಸ್ಟೋರಿ ಈಗ ಸಖತ್​ ವೈರಲ್​

‘ರಾಧೆ ಶ್ಯಾಮ್’​ ಸೋತರೂ ಕಮ್ಮಿ ಆಗಿಲ್ಲ ಪೂಜಾ ಹೆಗ್ಡೆ ಜೋಶ್​

Published On - 3:03 pm, Mon, 21 March 22