ಕಾಫಿನಾಡಿನಲ್ಲಿ ಮಳೆಯ ಅಬ್ಬರ; ಚಿಕ್ಕಮಗಳೂರು ಜಿಲ್ಲೆಯಾದ್ಯಂತ ಭಾರಿ ವಾಹನಗಳ ಸಂಚಾರ ನಿರ್ಬಂಧಿಸಿ ಡಿಸಿ ಆದೇಶ

| Updated By: ಆಯೇಷಾ ಬಾನು

Updated on: Jul 15, 2022 | 5:49 PM

ಜಿಲ್ಲೆಯಾದ್ಯಂತ ಸುರಿಯುತ್ತಿರುವ ಧಾರಾಕಾರ ಮಳೆ ಹಿನ್ನೆಲೆ ಜಿಲ್ಲೆಯಾದ್ಯಂತ ಭಾರಿ ವಾಹನಗಳ ಸಂಚಾರ ನಿರ್ಬಂಧಿಸಿ ಚಿಕ್ಕಮಗಳೂರು ಜಿಲ್ಲಾಧಿಕಾರಿ ಕೆ.ಎನ್.ರಮೇಶ್ ಆದೇಶ ಹೊರಡಿಸಿದ್ದಾರೆ.

ಕಾಫಿನಾಡಿನಲ್ಲಿ ಮಳೆಯ ಅಬ್ಬರ; ಚಿಕ್ಕಮಗಳೂರು ಜಿಲ್ಲೆಯಾದ್ಯಂತ ಭಾರಿ ವಾಹನಗಳ ಸಂಚಾರ ನಿರ್ಬಂಧಿಸಿ ಡಿಸಿ ಆದೇಶ
ಚಿಕ್ಕಮಗಳೂರು ಮಳೆ
Follow us on

ಚಿಕ್ಕಮಗಳೂರು: ಕಾಫಿನಾಡು ಚಿಕ್ಕಮಗಳೂರಲ್ಲಿ(Chikmagalur Rains) ಮಳೆಯಿಂದಾಗಿ ಭಾರಿ ಅನಾಹುತ ಸೃಷ್ಟಿಯಾಗಿದೆ. ಕೆಲವೆಡೆ ಗುಡ್ಡ ಕುಸಿದ್ರೆ, ಮತ್ತೊಂದೆಡೆ ಗುರುತೇ ಸಿಗದಂತೆ ಹೆದ್ದಾರಿ ಕುಸಿದು ಹೋಗಿದೆ. ಹೀಗಾಗಿ ಚಿಕ್ಕಮಗಳೂರು ಜಿಲ್ಲೆಯಾದ್ಯಂತ ಸುರಿಯುತ್ತಿರುವ ಧಾರಾಕಾರ ಮಳೆ ಹಿನ್ನೆಲೆ ಜಿಲ್ಲೆಯಾದ್ಯಂತ ಭಾರಿ ವಾಹನಗಳ ಸಂಚಾರ ನಿರ್ಬಂಧಿಸಿ ಚಿಕ್ಕಮಗಳೂರು ಜಿಲ್ಲಾಧಿಕಾರಿ ಕೆ.ಎನ್.ರಮೇಶ್ ಆದೇಶ ಹೊರಡಿಸಿದ್ದಾರೆ.

ಮುಳ್ಳಯ್ಯನಗಿರಿ ಭಾಗದಲ್ಲಿ ನಿರಂತರ ಭೂಕುಸಿತ, ಗುಡ್ಡ ಕುಸಿತವಾಗುತ್ತಿದೆ. ಈ ಹಿಂದೆ ಜಿಲ್ಲೆಯ ಮುಳ್ಳಯ್ಯನಗಿರಿ, ದತ್ತಪೀಠ, ಸೀತಾಳಯ್ಯನಗಿರಿ, ಮಾಣಿಕ್ಯಧಾರ, ಎಲ್ಲಾ ಜಲಪಾತಗಳಿಗೆ ಪ್ರವೇಶ ನಿರ್ಬಂಧಿಸಲಾಗಿತ್ತು. ಇದೀಗ ಜಿಲ್ಲೆಯಾದ್ಯಂತ ಭಾರಿ ವಾಹನಗಳ ಸಂಚಾರಕ್ಕೆ ನಿರ್ಬಂಧ ಹೇರಲಾಗಿದೆ. ಜಿಲ್ಲೆಯಾದ್ಯಂತ ಮಳೆಯಿಂದ ಜನಜೀವನ ಸಂಪೂರ್ಣ ಅಸ್ತವ್ಯಸ್ತಗೊಂಡಿದೆ. ಮುನ್ನೆಚ್ಚರಿಕೆ ಕ್ರಮವಾಗಿ ಭಾರಿ ವಾಹನ ಸಂಚಾರ ನಿರ್ಬಂಧಿಸಿ ಡಿಸಿ ಕೆ.ಎನ್.ರಮೇಶ್ ಆದೇಶ ಹೊರಡಿಸಿದ್ದಾರೆ.

$45 ಲಕ್ಷ ರೂ ಸಾಲ ಮಾಡಿ ಕಟ್ಟಿಸಿದ್ದ ಸೂರು ನಾಶ

ರಣಮಳೆಗೆ ಚಿಕ್ಕಮಗಳೂರು ಜಿಲ್ಲೆ ಅಕ್ಷರಶಃ ಥಂಡಾ ಹೊಡೆದಿದೆ. ಭಾರಿ ಮಳೆಯಿಂದಾಗಿ ಶೃಂಗೇರಿಯ ಸಾಹಿತಿ ಗಣೇಶ್ ಹೆಗ್ಡೆ ಎಂಬುವರ ಭವ್ಯವಾದ ಮನೆ ಗುಡ್ಡಕುಸಿತಕ್ಕೆ ಹೇಳತೀರದಷ್ಟು ಹಾನಿಯಾಗಿದೆ. ಅದೃಷ್ಟವಶಾತ್ ಗುಡ್ಡ ಕುಸಿತದ ಶಬ್ದ ಕೇಳಿಸ್ತಿದ್ದಂತೆ ಕುಟುಂಬಸ್ಥರು ಹೊರಗೋಡಿ ಬಂದಿದ್ದರಿಂದ ಪ್ರಾಣಹಾನಿ ತಪ್ಪಿದೆ. ಸಾಹಿತಿ ಗಣೇಶ್ ಹೆಗ್ಡೆ ಬಹಳ ಕಷ್ಟಪಟ್ಟು 45 ಲಕ್ಷ ರೂಪಾಯಿ ಸಾಲ ಮಾಡಿ ಮನೆ ಕಟ್ಟಿಸಿದ್ರಂತೆ. ಆದ್ರೆ ಪ್ರಕೃತಿ ವಿಕೋಪದ ಜೊತೆ ಅರಣ್ಯ ಇಲಾಖೆ ನಿರ್ಲಕ್ಷ್ಯ ಇಷ್ಟೆಲ್ಲಾ ಅವಾಂತರಕ್ಕೆ ಕಾರಣವಾಗಿದೆ. ಮುಂದೇನು ಗತಿ ಅಂತಾ ಮನೆ ಮಾಲೀಕ ಬಿಕ್ಕಿ ಬಿಕ್ಕಿ ಅಳ್ತಿದ್ದಾರೆ. ಗಣೇಶ್ ಹೆಗ್ಡೆ ಅವರು 14 ಕಾದಂಬರಿಗಳನ್ನು ಬರೆದಿದ್ದು, ಮನೆಯಲ್ಲಿಟ್ಟಿದ್ದ 4,500 ಸಾವಿರಕ್ಕೂ ಹೆಚ್ಚು ಪುಸ್ತಕಗಳು ನಾಶವಾಗಿವೆ.

ಗುಡ್ಡದ ಭೂತಕ್ಕೆ ಹೆದ್ದಾರಿಯೇ ನಾಮಾವೇಶೇಷ

ಗುಡ್ಡದ ಭೂತಕ್ಕೆ ಮನೆಗಳು ಮಾತ್ರವಲ್ಲ ಹೆದ್ದಾರಿಗಳೇ ಕೊಚ್ಚಿಹೋಗ್ತಿವೆ. ಭಾರಿ ಪ್ರಮಾಣದ ಗುಡ್ಡ ಕುಸಿತದಿಂದ ಶೃಂಗೇರಿಯಿಂದ ಆಗುಂಬೆಗೆ ಸಂಪರ್ಕ ಕಲ್ಪಿಸುವ ರಾಜ್ಯ ಹೆದ್ದಾರಿಯೇ ಕೊಚ್ಚಿಹೋಗಿದೆ. 200ಮೀಟರ್‌ಗೂ ಹೆಚ್ಚು ದೂರ ಡಾಂಬರಿನ ಇಡೀ ರಸ್ತೆ ಗುರುತೇ ಸಿಗದಂತೆ ನಾಮಾವೇಶೇಷವಾಗಿದೆ. ವಾಹನ ಸಂಚಾರ ವೇಳೆ ಈ ಅವಘಡ ಸಂಭವಿಸಿದ್ರೆ ಭಾರಿ ಪ್ರಾಣಹಾನಿಯೇ ಸಂಭವಿಸ್ತಿತ್ತು.

Published On - 5:49 pm, Fri, 15 July 22