ಚಿಕ್ಕಮಗಳೂರು: ಮೆಸ್ಕಾಂ ಕಚೇರಿಯಲ್ಲಿ ಸಂವಿಧಾನ ಶಿಲ್ಪಿಗೆ ಅವಮಾನ, ಅಂಬೇಡ್ಕರ್ ಫೋಟೋದಲ್ಲಿ ಚಪ್ಪಲಿ ಗುರುತು ಪತ್ತೆ

| Updated By: ವಿವೇಕ ಬಿರಾದಾರ

Updated on: Dec 24, 2022 | 5:11 PM

ಚಿಕ್ಕಮಗಳೂರು ಜಿಲ್ಲೆಯ ಶೃಂಗೇರಿಯ ಮೆಸ್ಕಾಂ ಕಚೇರಿಯಲ್ಲಿನ ಡಾ. ಬಿ ಆರ್​​ ಅಂಬೇಡ್ಕರ್ ಅವರ ಭಾವಚಿತ್ರದಲ್ಲಿ ಚಪ್ಪಲಿ ಗುರುತು ಪತ್ತೆಯಾಗಿದೆ.

ಚಿಕ್ಕಮಗಳೂರು: ಮೆಸ್ಕಾಂ ಕಚೇರಿಯಲ್ಲಿ ಸಂವಿಧಾನ ಶಿಲ್ಪಿಗೆ ಅವಮಾನ, ಅಂಬೇಡ್ಕರ್ ಫೋಟೋದಲ್ಲಿ ಚಪ್ಪಲಿ ಗುರುತು ಪತ್ತೆ
ಅಂಬೇಡ್ಕರ್ ಫೋಟೋಗೆ ಅವಮಾನ
Follow us on

ಚಿಕ್ಕಮಗಳೂರು: ಜಿಲ್ಲೆಯ ಶೃಂಗೇರಿಯ (Sringeri) ಮೆಸ್ಕಾಂ (MESCOM) ಕಚೇರಿಯಲ್ಲಿನ ಡಾ. ಬಿ ಆರ್​​ ಅಂಬೇಡ್ಕರ್ (B R Ambedkar) ಅವರ ಭಾವಚಿತ್ರಕ್ಕೆ ಅವಮಾನ ಮಾಡಿರುವ ಆರೋಪ ಕೇಳಿಬಂದಿದೆ. ಮೆಸ್ಕಾಂ ಕಚೇರಿಯಲ್ಲಿದ್ದ ಅಂಬೇಡ್ಕರ್ ಭಾವಚಿತ್ರದಲ್ಲಿ ಚಪ್ಪಲಿ ಗುರುತು ಪತ್ತೆಯಾಗಿದೆ. ಫೋಟೋಗೆ ಕಿಡಿಗೇಡಿಗಳು ಚಪ್ಪಲಿಯಿಂದ ಹೊಡೆದಿರೊ ಶಂಕೆ ವ್ಯಕ್ತವಾಗಿದೆ.

ಇದನ್ನು ಕಂಡ ದಲಿತ ಸಂಘಟನೆಗಳು ಅಂಬೇಡ್ಕರ್ ಭಾವಚಿತ್ರವನ್ನ ಸ್ವಚ್ಛ ಮಾಡಿ ಹೂಮಾಲೆ ಹಾಕಿದ್ದಾರೆ. ನಂತರ ದುಷ್ಕೃತ್ಯ ಎಸಗಿದ ಕಿಡಿಗೇಡಿಗಳ ವಿರುದ್ಧ ದಲಿತ ಸಂಘಟನೆಗಳು ತೀವ್ರ ಆಕ್ರೋಶ ವ್ಯಕ್ತಪಡಿಸಿ, ಆರೋಪಿಗಳನ್ನು ಬಂಧಿಸಿಸುವಂತೆ ಒತ್ತಾಯಿಸಿದ್ದಾರೆ. ಶೃಂಗೇರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ

Published On - 2:41 pm, Sat, 24 December 22