ಚಿಕ್ಕಮಗಳೂರಲ್ಲಿ ವಿನಯ ಗುರೂಜಿಯನ್ನು ಭೇಟಿಯಾಗಲಿರುವ ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್

| Updated By: ವಿವೇಕ ಬಿರಾದಾರ

Updated on: Feb 05, 2023 | 9:47 AM

ಬೆಳಗಾವಿ ಗ್ರಾಮಾಂತರ ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್ ಇಂದು ಕೊಪ್ಪ ತಾಲೂಕಿನ ಗೌರಿ ಗದ್ದೆ ಆಶ್ರಮ ಅವಧೂತ ವಿನಯ್ ಗುರೂಜಿಯವರನ್ನು ಭೇಟಿಯಾಗಲಿದ್ದಾರೆ

ಚಿಕ್ಕಮಗಳೂರು: ಬೆಳಗಾವಿ ಗ್ರಾಮಾಂತರ ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್ (Lakshmi Hebbalkar) ವಿರುದ್ಧ ಗೋಕಾಕ್​ ಬಿಜೆಪಿ ಶಾಸಕ ರಮೇಶ್​ ಜಾರಕಿಹೊಳಿ (Ramesh Jarkiholi) ವಿಷಕನ್ಯೆ ಎಂದು ಗಂಭೀರ ಆರೋಪ ಮಾಡಿದ್ದಾರೆ. ಆದರೆ ಈ ಬಗ್ಗೆ ಲಕ್ಷ್ಮಿ ಹೆಬ್ಬಾಳ್ಕರ್​ ಇನ್ನು ಪ್ರತಿಕ್ರಿಯೆ ನೀಡದೆ ಮೌನವಾಗಿದ್ದಾರೆ. ಈ ಮಧ್ಯೆ ಹೆಬ್ಬಾಳ್ಕರ್​ ಇಂದು (ಫೆ.05) ಕೊಪ್ಪ ತಾಲೂಕಿನ ಗೌರಿ ಗದ್ದೆ ಆಶ್ರಮ ಅವಧೂತ ವಿನಯ್ ಗುರೂಜಿಯವರನ್ನು (Vinay Guruji) ಭೇಟಿಯಾಗಲಿದ್ದಾರೆ. ಲಕ್ಷ್ಮೀ ಹೆಬ್ಬಾಳ್ಕರ್ ವಿನಯ್​ ಗುರುಜಿ ಭೇಟಿಗೆ ಸಮಯಾವಕಾಶ ಕೇಳಿದ್ದಾರೆ. ಈ ಭೇಟಿ ತೀರ್ವ ಕುತೂಹಲ ಮೂಡಿಸಿದ್ದು, ರಮೇಶ್ ಜಾರಕಿಹೊಳಿಯ ಗಂಭೀರ ಆರೋಪ, ರಾಜಕಾರಣದ ಬಗ್ಗೆ ಚರ್ಚೆ ಮಾಡುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.

ಲಕ್ಷ್ಮೀ ಹೆಬ್ಬಾಳ್ಕರ್ ನಿನ್ನೆ (ಫೆ.4) ಸಂಜೆಯೇ ಚಿಕ್ಕಮಗಳೂರಿಗೆ ಆಗಮಿಸಿದ್ದು, ಇಂದು ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿ ನಯನ ಮೋಟಮ್ಮ ಆಯೋಜನೆ ಮಾಡಿರುವ ಆಶಾಕಿರಣ ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದಾರೆ. ಈ ಕಾರ್ಯಕ್ರಮದಲ್ಲಿ ಅತಿಥಿಯಾಗಿ ವಿನಯ್ ಗುರೂಜಿ, ಲಕ್ಷ್ಮಿ ಹೆಬ್ಬಾಳ್ಕರ್ ಭಾಗಿಯಾಗಲಿದ್ದಾರೆ. ಕಾರ್ಯಕ್ರಮ ಮುಗಿದ ಬಳಿಕ ಭೇಟಿಯಟಗುವುದಾಗಿ ವಿನಯ್ ಗುರೂಜಿ ಹೇಳಿದ್ದಾರೆ. ಹೆಬ್ಬಾಳ್ಕರ್ ವಿನಯ್ ಗುರೂಜಿ ಜೊತೆ 30 ನಿಮಿಷಗಳ ಮಾತುಕತೆಗೆ ಸಮಯ ಕೇಳಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 9:04 am, Sun, 5 February 23