ಪ್ರತ್ಯೇಕ ಲಿಂಗಾಯತ ಧರ್ಮದ ವಿಚಾರದಲ್ಲಿ ಸಿದ್ದರಾಮಯ್ಯಗೆ ಪಶ್ಚಾತ್ತಾಪವಾಗಿದೆ : ಶ್ರೀ ರೇಣುಕ ವೀರಸೋಮೇಶ್ವರ ಸ್ವಾಮೀಜಿ

| Updated By: ವಿವೇಕ ಬಿರಾದಾರ

Updated on: Aug 19, 2022 | 7:23 PM

ಪ್ರತ್ಯೇಕ ಲಿಂಗಾಯತ ಧರ್ಮದ ವಿಚಾರದಲ್ಲಿ ವಿಪಕ್ಷ ನಾಯಕ ಸಿದ್ದರಾಮಯ್ಯ ಅವರಿಗೆ ಪಶ್ಚಾತ್ತಾಪವಾಗಿದೆ ಎಂದು ಬಾಳೆಹೊನ್ನೂರಿನ ರಂಭಾಪುರಿ ಪೀಠದ ಜಗದ್ಗುರು ಪ್ರಸನ್ನ ವೀರಸೋಮೇಶ್ವರ ಶ್ರೀಗಳು ಹೇಳಿದ್ದಾರೆ.

ಪ್ರತ್ಯೇಕ ಲಿಂಗಾಯತ ಧರ್ಮದ ವಿಚಾರದಲ್ಲಿ ಸಿದ್ದರಾಮಯ್ಯಗೆ ಪಶ್ಚಾತ್ತಾಪವಾಗಿದೆ :  ಶ್ರೀ ರೇಣುಕ ವೀರಸೋಮೇಶ್ವರ ಸ್ವಾಮೀಜಿ
ಜಗದ್ಗುರು ಪ್ರಸನ್ನ ರೇಣುಕ ವೀರಸೋಮೇಶ್ವರ ಶಿವಾಚಾರ್ಯ ಸ್ವಾಮೀಜಿ
Follow us on

ಚಿಕ್ಕಮಗಳೂರು: ಪ್ರತ್ಯೇಕ ಲಿಂಗಾಯತ (Lingayat) ಧರ್ಮದ ವಿಚಾರದಲ್ಲಿ ವಿಪಕ್ಷ ನಾಯಕ ಸಿದ್ದರಾಮಯ್ಯ  (Siddaramaiah) ಅವರಿಗೆ ಪಶ್ಚಾತ್ತಾಪವಾಗಿದೆ ಎಂದು ಬಾಳೆಹೊನ್ನೂರಿನ ರಂಭಾಪುರಿ (Rambapuri) ಪೀಠದ ಜಗದ್ಗುರು ಪ್ರಸನ್ನ ರೇಣುಕ ವೀರಸೋಮೇಶ್ವರ ಶಿವಾಚಾರ್ಯ ಸ್ವಾಮೀಜಿ ಹೇಳಿದ್ದಾರೆ.  ಶ್ರೀಗಳ ಆಹ್ವಾನದ ಮೇರೆಗೆ ಇಂದು (ಆಗಸ್ಟ್ 19) ಮೊಟ್ಟ ಮೊದಲ ಬಾರಿಗೆ ಬಾಳೆಹೊನ್ನೂರಿನ ರಂಭಾಪುರಿ ಮಠಕ್ಕೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಭೇಟಿ ನೀಡಿ ಶ್ರೀಗಳ ಆಶಿರ್ವಾದ ಪಡೆದಿದ್ದಾರೆ.

ಮಠಕ್ಕೆ ಸಿದ್ದರಾಮಯ್ಯ ಬಂದು ಹೋದ ಬಳಿಕ ಬಾಳೆಹೊನ್ನೂರು ಶ್ರೀಗಳು ಮಾತನಾಡಿ ಲಿಂಗಾಯತ ಧರ್ಮದ ವಿಚಾರದಲ್ಲಿ ನನ್ನ ದಾರಿ ತಪ್ಪಿಸಿದ್ರು. ಪಶ್ಚಾತ್ತಾಪವಾಗಿದೆ ಅಂತಾ ಸಿದ್ದರಾಮಯ್ಯ ಒಪ್ಪಿಕೊಂಡಿದ್ದಾರೆ ಎಂದು ಶ್ರೀಗಳು ಹೇಳಿದ್ದಾರೆ.

ಮಾಜಿ ಸಿಎಂ ಸಿದ್ದರಾಮಯ್ಯ ಮೊಟ್ಟ ಮೊದಲ ಬಾರಿಗೆ ಮಠಕ್ಕೆ ಬಂದರು. ಪೀಠಕ್ಕೆ ಬಂದು ಆಶೀರ್ವಾದ ಪಡೆಯುವುದು ಅವರ ಬಯಕೆಯಾಗಿತ್ತು. ಅವರಿಗೆ ವೀರಶೈವ ಲಿಂಗಾಯತ ಧರ್ಮದ ಇತಿಹಾಸ, ಪರಂಪರೆ ಬಗ್ಗೆ ಮನವರಿಕೆ ಮಾಡಿ ಕೊಡಲಾಗಿದೆ ಎಂದು ಶ್ರೀಗಳು ತಿಳಿಸಿದರು.

ವೀರಶೈವ, ಲಿಂಗಾಯತ ಧರ್ಮ ಒಡೆಯಲು ಪ್ರಯತ್ನಿಸಿರಲಿಲ್ಲ ಅಂದರು. ಆದರೆ ಕೆಲವರು ನನ್ನದಾರಿ ತಪ್ಪಿಸಿದರೆಂದು ಹೇಳಿದರು ಎಂದು ಶ್ರೀಗಳು ತಿಳಿಸಿದ್ದಾರೆ.

ಧರ್ಮ ಒಡೆಯುವ ಉದ್ದೇಶ ಯಾರಿಗೂ ಇರಲಿಲ್ಲ ಎಂ.ಬಿ.ಪಾಟೀಲ್‌

ಕಲಬುರಗಿ: ಧರ್ಮ ಒಡೆಯುವ ಉದ್ದೇಶ ಯಾರಿಗೂ ಇರಲಿಲ್ಲ  ಎಂದು ಕಲಬುರಗಿಯಲ್ಲಿ ಮಾಜಿ ನಿರಾವರಿ ಸಚಿವ ಎಂ. ಬಿ. ಪಾಟೀಲ್​ ಹೇಳಿದ್ದಾರೆ. ಪ್ರತ್ಯೇಕ ಲಿಂಗಾಯ ಧರ್ಮ ವಿಚಾರಕ್ಕೆ ಸಿದ್ದರಾಮಯ್ಯ ಪಶ್ಚಾತ್ತಾಪ ವ್ಯಕ್ತಪಡಿಸಿರುವ ಕುರಿತು ಮಾತನಾಡಿದ ಅವರು ಸಮುದಾಯಕ್ಕೆ ಒಳ್ಳೆಯದಾಗಲಿ ಅಂತಾ ಪ್ರತ್ಯೇಕ ಧರ್ಮಕ್ಕೆ ಬೇಡಿಕೆ ಇಟ್ಟಿದ್ದೇವೆ.

ಲಿಂಗಾಯತ ಧರ್ಮ ಒಡೆಯುವ ಕೆಲಸಕ್ಕೆ ಯಾರೂ ಕೈಹಾಕಿರಲಿಲ್ಲ. ಪ್ರತ್ಯೇಕ ಧರ್ಮದ ಬಗ್ಗೆ ಚರ್ಚೆ ಸಂದರ್ಭದಲ್ಲಿ ಮನಸ್ತಾಪ ಉಂಟಾಗಿದೆ. ಪ್ರತ್ಯೇಕ ಧರ್ಮದ ಬಗ್ಗೆ ಚರ್ಚೆ ವೇಳೆ ತಪ್ಪು ಕಲ್ಪನೆಗಳು ಹುಟ್ಟಿಕೊಂಡಿವೆ. ಚುನಾವಣೆ ಬಳಿಕ ಪ್ರತ್ಯೇಕ ಲಿಂಗಾಯತ ಧರ್ಮ ಬಗ್ಗೆ ಮತ್ತೆ ಚರ್ಚಿಸುತ್ತೇವೆ. ಚುನಾವಣೆ ನಂತರ ಮತ್ತೆ ಎಲ್ಲರೂ ಒಟ್ಟಾಗಿ ಚರ್ಚಿಸಿ ಒಳ್ಳೇ ತೀರ್ಮಾನ ಕೈಗೊಳ್ಳುತ್ತೇವೆ ಎಂದು ಹೇಳಿದರು.

ಸಮಾಜಕ್ಕಾಗಿ ಎಲ್ಲರೂ ಒಗ್ಗಟ್ಟಾಗುತ್ತೇವೆ.  ನಾವು ಒಗ್ಗಟ್ಟಾಗಬೇಕಿದೆ, ಪಂಚಪೀಠಗಳು ಒಂದಾಗಬೇಕಿದೆ. ಅಖಿಲ ಭಾರತ ಅಥವಾ ಜಾಗತಿಕ ಲಿಂಗಾಯತ ಮಹಾಸಭಾ ಜೊತೆ ಚರ್ಚೆ ಮಾಡುತ್ತೇನೆ. ನಾನು ಬಾಳೆಹೊನ್ನುರು ಶ್ರೀಗಳನ್ನ ಭೇಟಿಯಾಗುತ್ತೇನೆ ಎಂದರು.

ಧರ್ಮ ಒಡೆಯಲು ಮುಂದಾಗಿದ್ದ ಬಗ್ಗೆ ಸಿದ್ದರಾಮಯ್ಯ ಪಶ್ಚಾತ್ತಾಮ ಪಟ್ಟಿದ್ದಾರೆ

ಬೆಂಗಳೂರು: ವೀರಶೈವ ಲಿಂಗಾಯತ ಧರ್ಮದ ಬಗ್ಗೆ ಸಿದ್ದರಾಮಯ್ಯರ ಪಶ್ಚಾತ್ತಾಪ ವಿಚಾರವಾಗಿ ಬಿಜೆಪಿ ಶಾಸಕ ಕುಡಚಿ ರಾಜೀವ್  ಮಾತನಾಡಿ ಧರ್ಮ ಒಡೆಯಲು ಮುಂದಾಗಿದ್ದ ಬಗ್ಗೆ ಸಿದ್ದರಾಮಯ್ಯ ಪಶ್ಚಾತ್ತಾಮ ಪಟ್ಟಿದ್ದಾರೆ. ಸಿದ್ದರಾಮಯ್ಯರ ಈ ದೋರಣೆಯನ್ನು ಸ್ವಾಗತಿಸುತ್ತೇನೆ. ಸಿದ್ದರಾಮಯ್ಯ ಮುಂದೆಯೂ ಹಲವು ವಿಚಾರಗಳಿಗೆ ಹೀಗೇ ಪಶ್ಚಾತ್ತಾಮ ಪಡುವ ದಿನಗಳು ಬರುತ್ತವೆ ಎಂದು ಹೇಳಿದರು.

ಹಿಂದೂ ಕಾರ್ಯಕರ್ತರ ಹತ್ಯೆಗಳನ್ನು ನಿರ್ಲಕ್ಷ್ಯ ಮಾಡಿದೆ ಅಂತ ಪಶ್ಚಾತ್ತಾಪ ಪಡುವ ದಿನ ಬರುತ್ತದೆ. ವೀರ ಸಾವರ್ಕರ್ ಬಗ್ಗೆ ತಪ್ಪು ಮಾತಾಡಿದ್ದೆ ಅಂತ ಪಶ್ಚಾತ್ತಾಪ ಪಡುವ ದಿನ ಬರುತ್ತದೆ ಎಂದು ವಾಗ್ದಾಳಿ ಮಾಡಿದರು.

Published On - 7:15 pm, Fri, 19 August 22