ಚಿಕ್ಕಮಗಳೂರು: ಚಾರ್ಮಾಡಿ ಘಾಟಿ (Charmadi Ghat)ಯ ಸೆಲ್ಫಿ, ಫೋಟೋಗಳಿಗಾಗಿ ರಸ್ತೆಯಲ್ಲೇ ಪ್ರವಾಸಿಗರು ತಮ್ಮ ವಾಹನಗಳನ್ನು ಪಾರ್ಕಿಂಗ್ ಮಾಡಿದ್ದರ ಪರಿಣಾಮ ಆ್ಯಂಬುಲೆನ್ಸ್ನಲ್ಲಿದ್ದ ರೋಗಿ ಪರದಾಡುವಂತಾಗಿದೆ. ಜಿಲ್ಲೆಯ ಮೂಡಿಗೆರೆ ತಾಲೂಕಿನ ಚಾರ್ಮಾಡಿ ಘಾಟ್ನಲ್ಲಿ ಘಟನೆ ಕಂಡುಬಂದಿದೆ. ಬಣಕಲ್ ಗ್ರಾಮದಿಂದ ಮಂಗಳೂರಿನ ಆಸ್ಪತ್ರೆಗೆ ರೋಗಿಯನ್ನು ಆ್ಯಂಬುಲೆನ್ಸ್ನಲ್ಲಿ ಕರೆದೊಯ್ಯುತ್ತಿದ್ದರು. ಈ ವೇಳೆ ದಕ್ಷಿಣ ಕನ್ನಡ- ಚಿಕ್ಕಮಗಳೂರು ಜಿಲ್ಲೆಗೆ ಸಂಪರ್ಕ ಕಲ್ಪಿಸುವ ರಸ್ತೆಯಲ್ಲಿ ವಾಹನಗಳ ಪಾರ್ಕಿಂಗ್ನಿಂದ ಚಾರ್ಮಾಡಿ ಘಾಟ್ನಲ್ಲಿ ಟ್ರಾಫಿಕ್ ಜಾಮ್ ಉಂಟಾಗಿದೆ.
ಕಾರವಾರ: ಸಮುದ್ರದಲ್ಲಿ ಮುಳಗುತ್ತಿದ್ದ ಪ್ರವಾಸಿಯೊಬ್ಬನನ್ನು ಕಾರವಾರದ ಕೋಸ್ಟ್ಗಾರ್ಡ್ ಬದುಕುಳಿಸಿರುವಂತಹ ಘಟನೆ ಇತ್ತೀಚೆಗೆ ನಡೆದಿತ್ತು. ರಕ್ಷಿಸಲ್ಪಟ್ಟ ವ್ಯಕ್ತಿಯನ್ನು ಬೋಟ್ನಲ್ಲಿ ಸಮುದ್ರ ತೀರಕ್ಕೆ ತರುತ್ತಿರುವ ದೃಶ್ಯವನ್ನು ತೀರದಲ್ಲಿದ್ದ ಪ್ರವಾಸಿಯೊಬ್ಬರು ತಮ್ಮ ಮೊಬೈಲ್ನಲ್ಲಿ ಸೆರೆಹಿಡಿದಿದ್ದರು. ಬದುಕುಳಿದ ವ್ಯಕ್ತಿ ಅಧೀರ ಮತ್ತು ವಿಚಲಿತನಾಗಿರುವುದನ್ನು ಗುರುತಿಸಬಹುದು.
ಇದನ್ನೂ ಓದಿ: ಉಡುಪಿ: ಮಲ್ಪೆ ಬೀಚ್ ದಡಕ್ಕೆ ತೇಲಿಬಂದ ನೂಡಲ್ ಮಾದರಿಯ ವಸ್ತು, ಹೆಚ್ಚಿನ ಅಧ್ಯಯನಕ್ಕಾಗಿ ಗೋವಾಕ್ಕೆ ರವಾನೆ
ಬೆಂಗಳೂರು ಗ್ರಾಮಾಂತರ: ಆ್ಯಂಬುಲೆನ್ಸ್ ಸಿಬ್ಬಂದಿ ಕಮಿಷನ್ ಆಸೆಗಾಗಿ ಬಡರೋಗಿಯನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸದೇ ಖಾಸಗಿ ಆಸ್ಪತ್ರೆಗೆ ದಾಖಲಿಸಿದ ಪರಿಣಾಮ ಒಂದೇ ದಿನಕ್ಕೆ 30 ಸಾವಿರ ರೂ. ಬಿಲ್ ಮಾಡಿರುವಂತಹ ಘಟನೆ ಜಿಲ್ಲೆಯ ದೇವನಹಳ್ಳಿಯಲ್ಲಿ ಇತ್ತೀಚೆಗೆ ಬೆಳಕಿಗೆ ಬಂದಿತ್ತು.
ಇದನ್ನೂ ಓದಿ: Hassan News: ಅಯ್ಯೋ ವಿಧಿಯೇ! ತೆಂಗಿನಕಾಯಿ ಗೊನೆ ಬಿದ್ದು ಬಾಲಕ ಸಾವು
ಖಾಸಗಿ ಆಸ್ಪತ್ರೆಯವರು ನೀಡುವ ಕಮಿಷನ್ ಆಸೆಗಾಗಿ ಪ್ರತಿ ಬಾರಿ ರೋಗಿಗಳನ್ನು ಖಾಸಗಿ ಆಸ್ಪತ್ರೆಗೆ 108 ಸಿಬ್ಬಂದಿ ದಾಖಲಿಸುತ್ತಿದ್ದ ಎನ್ನಲಾಗಿದೆ. ಕಮಿಷನ್ ಆಸೆಗಾಗಿ ರೋಗಿಗಳೊಂದಿಗೆ ಚೆಲ್ಲಾಟ ಮಾಡಿದ್ದು, ಬಡರೋಗಿಗಳು ಪರದಾಡಿದ್ದರು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 10:46 am, Fri, 23 June 23