ಗೃಹ ಪ್ರವೇಶದ ಸಂಭ್ರಮ ಮಾಸುವ ಮುನ್ನವೇ ಕುಟುಂಬಕ್ಕೆ ಆಘಾತ: ಆನೆ ದಾಳಿಗೆ ರೈತ ಬಲಿ; ರಸ್ತೆ ತಡೆದು ಪ್ರತಿಭಟನೆ

ಚಿಕ್ಕಮಗಳೂರಿನ ಎನ್.ಆರ್.ಪುರ ತಾಲೂಕಿನ ಹೆನ್ನಂಗಿ ಗ್ರಾಮದಲ್ಲಿ ಗೃಹಪ್ರವೇಶದ ಸಂಭ್ರಮ ಮಾಸುವ ಮುನ್ನವೇ ಕಾಡಾನೆ ದಾಳಿಗೆ ರೈತ ಕೃಷ್ಣಮೂರ್ತಿ ಬಲಿಯಾಗಿದ್ದಾರೆ. ಮತ್ತೊಂದೆಡೆ ಭದ್ರಾ ಅಭಯಾರಣ್ಯಕ್ಕೆ ಆನೆ ಸ್ಥಳಾಂತರ ವಿರೋಧಿಸಿ ರೈತರು ತೀವ್ರ ಪ್ರತಿಭಟನೆ ನಡೆಸಿದ್ದು, ನ.25ರವರೆಗೆ ಕಾಡಾನೆಗಳನ್ನು ಭದ್ರಾ ಅಭಯಾರಣ್ಯಕ್ಕೆ ಬಿಡುವುದಿಲ್ಲ ಎಂದು ಶೃಂಗೇರಿ ಶಾಸಕ ರಾಜೇಗೌಡ ಭರವಸೆ ನೀಡಿದ ಬಳಿಕ ಪ್ರತಿಭಟನೆ ಕೈಬಿಡಲಾಗಿದೆ.

ಗೃಹ ಪ್ರವೇಶದ ಸಂಭ್ರಮ ಮಾಸುವ ಮುನ್ನವೇ ಕುಟುಂಬಕ್ಕೆ ಆಘಾತ: ಆನೆ ದಾಳಿಗೆ ರೈತ ಬಲಿ; ರಸ್ತೆ ತಡೆದು ಪ್ರತಿಭಟನೆ
ಆನೆ ದಾಳಿಗೆ ರೈತ ಬಲಿ; ತೀವ್ರ ಪ್ರತಿಭಟನೆ
Edited By:

Updated on: Nov 19, 2026 | 3:18 PM

ಚಿಕ್ಕಮಗಳೂರು, ನವೆಂಬರ್​​ 19: ಜಿಲ್ಲೆಯ ಎನ್​​.ಆರ್​​.ಪುರ ತಾಲೂಕಿನ ಹೆನ್ನಂಗಿ ಗ್ರಾಮದಲ್ಲಿ ಕಾಡಾನೆ ದಾಳಿಗೆ ರೈತ ಸಾವನ್ನಪ್ಪಿದ್ದು, ಅರಣ್ಯ ಇಲಾಖೆ ವಿರುದ್ಧ ಸ್ಥಳೀಯರ ಆಕ್ರೋಶದ ಕಟ್ಟೆ ಒಡೆದಿದೆ. ಮೃತರನ್ನು ಕೃಷ್ಣಮೂರ್ತಿ(45) ಎಂದು ಗುರುತಿಸಲಾಗಿದ್ದು, 18 ದಿನಗಳ ಹಿಂದೆಯಷ್ಟೇ ಇವರ ಗೃಹಪ್ರವೇಶ ಕಾರ್ಯಕ್ರಮ ನಡೆದಿತ್ತು. ಕುಟುಂಬಸ್ಥರು ಇನ್ನೂ ಆ ಗುಂಗಿನಿಂದ ಹೊರವರುವ ಮೊದಲೇ ಆಘಾತವಾಗಿದ್ದು, ಸಂಬಂಧಿಕರ ಆಕ್ರಂದನ ಮುಗಿಲು ಮುಟ್ಟಿದೆ. ಕಳೆದ ಕೆಲ ದಿನಗಳಿಂದ ಸಂಭ್ರಮದ ವಾತಾವರಣದಲ್ಲಿದ್ದ ಮನೆಯನ್ನೀಗ ನೀರವ ಮೌನ ಆವರಿಸಿದೆ.

ಕೂದಲೆಳೆ ಅಂತದರದಲ್ಲಿ ಮತ್ತೋರ್ವ ರೈತ ಬಚಾವ್

ಇನ್ನು ಕಾಡಾನೆ ದಾಳಿ ವೇಳೆ ಮತ್ತೊಬ್ಬ ರೈತ ಶ್ರೀನಿವಾಸ್‌ ಎಂಬವರು ಕೂದಲೆಳೆ ಅಂತದರದಲ್ಲಿ ಬಚಾವ್​​ ಆಗಿದ್ದಾರೆ. ತನ್ನ ಕಣ್ಣೆದುರೇ ಕೃಷ್ಣಮೂರ್ತಿ ಮೇಲೆ ಕಾಡಾನೆ ದಾಳಿ ಮಾಡಿತು. ನಾನು ಓಡಿ ಬಂದೆ ಎಂದ ಹೆನ್ನಂಗಿ ಗ್ರಾಮದ ರೈತ ಶ್ರೀನಿವಾಸ್ ಘಟನೆಯ ಇಂಚಿಂಚು ಮಾಹಿತಿಯನ್ನು ಬಿಚ್ಚಿಟ್ಟಿದ್ದಾರೆ. ಇಷ್ಟು ದಿನ ಕಾಡಾನೆ ಕಾಣಿಸಿರಲಿಲ್ಲ ಎಂದೂ ಅವರು ಮಾಹಿತಿ ನೀಡಿದ್ದಾರೆ.

Loading...

ಇದನ್ನೂ ಓದಿ: ಕಾಡಾನೆ ದಾಳಿಗೆ ರೈತ ಬಲಿ: ಅರಣ್ಯಾಧಿಕಾರಿಗಳ ವಿರುದ್ಧ ಸಿಡಿದ ಅನ್ನದಾತರು; ಎನ್‌.ಆರ್‌.ಪುರ ಪಟ್ಟಣ ಸ್ತಬ್ಧ

ರಸ್ತೆ ತಡೆದು ರೈತರ ಪ್ರತಿಭಟನೆ

ಹಾಸನ ಜಿಲ್ಲೆಯಿಂದ ಭದ್ರಾ ಅಭಯಾರಣ್ಯಕ್ಕೆ ಕಾಡಾನೆಗಳ ಸ್ಥಳಾಂತರ ಮತ್ತು ರೈತ ಕೃಷ್ಣಮೂರ್ತಿ ಮೃತಪಟ್ಟಿರುವ ವಿಚಾರವಾಗಿ ಅರಣ್ಯ ಇಲಾಖೆ ವಿರುದ್ದ ರೈತರ ಪ್ರತಿಭಟನೆ ತೀವ್ರಗೊಂಡಿದೆ. ಎನ್​​.ಆರ್​.ಪುರ-ಬಾಳೆಹೊನ್ನೂರು ರಸ್ತೆ ತಡೆದು ಹೋರಾಟ ನಡೆಸಲಾಗಿದ್ದು, ನ.25ರವರೆಗೆ ಕಾಡಾನೆಗಳನ್ನು ಭದ್ರಾ ಅಭಯಾರಣ್ಯಕ್ಕೆ ಬಿಡುವುದಿಲ್ಲ ಎಂದು ಶೃಂಗೇರಿ ಶಾಸಕ ರಾಜೇಗೌಡ ಭರವಸೆ ನೀಡಿದ ಬಳಿಕ ಪ್ರತಿಭಟನೆ ಕೈಬಿಡಲಾಗಿದೆ. ಹಾಸನ ಜಿಲ್ಲೆಯಲ್ಲಿ ಹಿಡಿಯುವ ಕಾಡಾನೆಗಳನ್ನು ಇಲ್ಲಿಗೆ ಬಿಡಲ್ಲ. ಆನೆ ಸೆರೆಯಾದರೆ ಆನೆ ಕ್ಯಾಂಪ್​ ಅಥವಾ ಬಂಡೀಪುರಕ್ಕೆ ಶಿಫ್ಟ್ ಮಾಡುವ ಬಗ್ಗೆ ಅರಣ್ಯ ಸಚಿವ ರಾಮಲಿಂಗಾರೆಡ್ಡಿ ಜೊತೆ ಚರ್ಚಿಸಿದ್ದೇವೆ ಎಂದವರು ತಿಳಿಸಿದ್ದಾರೆ. ಮುಂದಿನ ಸಭೆಯವರೆಗೂ ಯಾವುದೇ ಕಾಡಾನೆ ಸ್ಥಳಾಂತರ ಇಲ್ಲ ಎಂದು ಭದ್ರಾ ಹುಲಿ ಸಂರಕ್ಷಿತ ಪ್ರದೇಶದ ಡಿಎಫ್ಒ​​ ಪುಲಕೀತ್ ಮೀನಾ ಕೂಡ ಹೇಳಿದ್ದಾರೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Published On - 3:17 pm, Thu, 19 November 26

ಅಶ್ವಿತ್ ಮಾವಿನಗುಣಿ, ಚಿಕ್ಕಮಗಳೂರು

ಕಾಫಿನಾಡು ಚಿಕ್ಕಮಗಳೂರಿನ ಮಲೆನಾಡಿನ ಮಾವಿನಗುಣಿ ಗ್ರಾಮದಿಂದ ಬೆಂಗಳೂರಿಗೆ ಬಂದು ಪತ್ರಿಕೋದ್ಯಮ ವೃತ್ತಿ ಆರಂಭಿಸಿ, ಹಾಯ್ ಬೆಂಗಳೂರು, ಜನಶ್ರೀ, ಕಸ್ತೂರಿ, ಟೈಮ್ಸ್ ನೌ ನಲ್ಲಿ ಕೆಲಸ ಮಾಡಿದ್ದು. ಸದ್ಯ ಟಿವಿ9 ಕನ್ನಡದಲ್ಲಿ ಚಿಕ್ಕಮಗಳೂರು ಜಿಲ್ಲಾ ವರದಿಗಾರನಾಗಿ ಕೆಲಸ ನಿರ್ವಹಿಸುತ್ತಿದ್ದು. 8 ವರ್ಷಗಳ ಕಾಲ ರಾಜಕೀಯ, ಕ್ರೈಮ್ ಸೇರಿದಂತೆ ಚಿಕ್ಕಮಗಳೂರು ಜಿಲ್ಲಾ ವರದಿಗಾರನಾಗಿ ಕೆಲಸ ಮಾಡಿದ ಅನುಭವ ಹೊಂದಿದ್ದು. ಉತ್ತಮ ಸಮಾಜಕ್ಕಾಗಿ ಟಿವಿ9 ಜೊತೆ ವೃತ್ತಿ ಜೀವನ ಸಾಗಿದೆ.

Read More
Loading...
Unable to load recommendations.
Follow Us