ಪೋರ್ನೋಗ್ರಫಿಗಾಗಿ ಮಕ್ಕಳ ದುರ್ಬಳಕೆ ಅತಿಹೆಚ್ಚು, ಆದ್ರೆ ಒಂದೂ FIR ಇಲ್ಲ!

|

Updated on: Nov 26, 2019 | 5:47 PM

ಬೆಂಗಳೂರು: ರಾಜ್ಯದಲ್ಲಿ ನೀಲಿಚಿತ್ರಕ್ಕೆ ಮಕ್ಕಳ ದುರ್ಬಳಕೆ ಯಥೇಚ್ಛವಾಗಿ ನಡೆಯುತ್ತಿದೆ. ಆದ್ರೆ ಅದಕ್ಕೆ ಕಡಿವಾಣ ಹಾಕುವವರೇ ಇಲ್ಲವಾಗಿದೆ ಎಂಬ ವಿಷಾದ ಇಂದು ಹೈಕೋರ್ಟ್​ನಲ್ಲಿ ವ್ಯಕ್ತವಾಗಿದೆ. ಹೈಕೋರ್ಟ್ ವಿಭಾಗೀಯ ಪೀಠದಲ್ಲಿ ಈ ಕುರಿತು ಪಿಐಎಲ್ ವಿಚಾರಣೆ ನಡೆಯಿತು. 2018ರ ಕೇಂದ್ರ ಸರಕಾರದ ವರದಿಯಂತೆ 113 ಪ್ರಕರಣವಾಗಿದೆ. ಇದರಿಂದ ಕರ್ನಾಟಕದಲ್ಲಿ ಅತಿ ಹೆಚ್ಚು ಮಕ್ಕಳ ದುರ್ಬಳಕೆಯಾಗುತ್ತಿದೆ ಎಂಬುದು ಗೊತ್ತಾಗುತ್ತದೆ. 113 ಮಕ್ಕಳನ್ನು ಪೋರ್ನೋಗ್ರಫಿಗೆ ಬಳಸಿಕೊಳ್ಳಲಾಗಿದೆ. ಆದರೆ ಈವರೆಗೂ ಒಂದೇ‌ ಒಂದು ಎಫ್ ಐ ಆರ್ ದಾಖಲಿಸಿಲ್ಲ ಎಂದು ‘ಬಚ್ಪನ್ ಬಚಾವೋ’ ಆಂದೋಲನ […]

ಪೋರ್ನೋಗ್ರಫಿಗಾಗಿ ಮಕ್ಕಳ ದುರ್ಬಳಕೆ ಅತಿಹೆಚ್ಚು, ಆದ್ರೆ ಒಂದೂ FIR ಇಲ್ಲ!
ಕರ್ನಾಟಕ ಹೈಕೋರ್ಟ್​
Follow us on

ಬೆಂಗಳೂರು: ರಾಜ್ಯದಲ್ಲಿ ನೀಲಿಚಿತ್ರಕ್ಕೆ ಮಕ್ಕಳ ದುರ್ಬಳಕೆ ಯಥೇಚ್ಛವಾಗಿ ನಡೆಯುತ್ತಿದೆ. ಆದ್ರೆ ಅದಕ್ಕೆ ಕಡಿವಾಣ ಹಾಕುವವರೇ ಇಲ್ಲವಾಗಿದೆ ಎಂಬ ವಿಷಾದ ಇಂದು ಹೈಕೋರ್ಟ್​ನಲ್ಲಿ ವ್ಯಕ್ತವಾಗಿದೆ.

ಹೈಕೋರ್ಟ್ ವಿಭಾಗೀಯ ಪೀಠದಲ್ಲಿ ಈ ಕುರಿತು ಪಿಐಎಲ್ ವಿಚಾರಣೆ ನಡೆಯಿತು. 2018ರ ಕೇಂದ್ರ ಸರಕಾರದ ವರದಿಯಂತೆ 113 ಪ್ರಕರಣವಾಗಿದೆ. ಇದರಿಂದ ಕರ್ನಾಟಕದಲ್ಲಿ ಅತಿ ಹೆಚ್ಚು ಮಕ್ಕಳ ದುರ್ಬಳಕೆಯಾಗುತ್ತಿದೆ ಎಂಬುದು ಗೊತ್ತಾಗುತ್ತದೆ. 113 ಮಕ್ಕಳನ್ನು ಪೋರ್ನೋಗ್ರಫಿಗೆ ಬಳಸಿಕೊಳ್ಳಲಾಗಿದೆ. ಆದರೆ ಈವರೆಗೂ ಒಂದೇ‌ ಒಂದು ಎಫ್ ಐ ಆರ್ ದಾಖಲಿಸಿಲ್ಲ ಎಂದು ‘ಬಚ್ಪನ್ ಬಚಾವೋ’ ಆಂದೋಲನ ಸಂಸ್ಥೆಯ ವಕೀಲರು ತಮ್ಮ ವಾದ ಮಂಡಿಸಿದ್ದಾರೆ. ತನಿಖೆ ನಡೆಸಿ ಕ್ರಮಕೈಗೊಳ್ಳಲು ನಿರ್ದೇಶನ ನೀಡಬೇಕು ಎಂದು ಅವರು ಕೋರ್ಟ್​ಗೆ ಮನವಿ ಮಾಡಿದರು.

ಅದರಂತೆ, ಎಫ್ಐ ಆರ್ ದಾಖಲಿಸಿ ತನಿಖೆ ನಡೆಸುವ ಬಗ್ಗೆ ನಿಲುವು ತಿಳಿಸಿ. ಜೊತೆಗೆ ವಿಶೇಷ ತಂಡ ರಚನೆ ಬಗ್ಗೆ ತನ್ನ ನಿಲುವು ತಿಳಿಸಲು ಸರಕಾರಕ್ಕೆ ಹೈಕೋರ್ಟ್​ ಸೂಚನೆ ನೀಡಿತು.

Published On - 5:44 pm, Tue, 26 November 19