ಚೀಟಿ ವ್ಯವಹಾರ: ವಿಕೆಟ್​ಗಳಿಂದ ಬಡಿದಾಡಿಕೊಂಡ ಯೂತ್ ಕಾಂಗ್ರೆಸ್ ನಾಯಕರು

|

Updated on: Nov 26, 2019 | 4:40 PM

ಬೆಂಗಳೂರು: ಹಣ ವಿಚಾರವಾಗಿ ಕಾಂಗ್ರೆಸ್ ಪಕ್ಷದ ರಾಜ್ಯ ಯೂತ್ ಕಾರ್ಯದರ್ಶಿ ಹಾಗೂ ಬಾಗಲಗುಂಟೆ ವಾರ್ಡ್ ಅಧ್ಯಕ್ಷರು ಕ್ರಿಕೆಟ್ ವಿಕೆಟ್​ಗಳಿಂದ ಹೊಡೆದಾಡಿಕೊಂಡಿದ್ದಾರೆ. ರಾಜಗೋಪಾಲ್ ನಗರ ಪೊಲೀಸ್ ಠಾಣೆ ವ್ಯಾಪ್ತಿಯ ಹೆಗ್ಗನಹಳ್ಳಿಯಲ್ಲಿರುವ ಅಕ್ಷಯ ಶ್ರೀ ಫೈನಾನ್ಸ್​ನಲ್ಲಿ ಘಟನೆ ನಡೆದಿದೆ. ಬಾಗಲಗುಂಟೆ ವಾರ್ಡ್ ಅಧ್ಯಕ್ಷ ಜಗದೀಶ್ ಮೇಲೆ ರಾಜ್ಯ ಯೂತ್ ಕಾರ್ಯದರ್ಶಿ ಉಮೇಶ್ ಭೈರೇಗೌಡ ಹಲ್ಲೆ ನಡೆಸಿದ್ದಾರೆ. ಹಲ್ಲೆಗೊಳಗಾದ ಜಗದೀಶ್​ಗೆ ಸಪ್ತಗಿರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಉಮೇಶ್ ಭೈರೇಗೌಡ ಅಕ್ಷಯ ಶ್ರೀ ಫೈನಾನ್ಸ್ ನಡೆಸುತ್ತಿದ್ದರು. ಈ ಫೈನಾನ್ಸ್ ಕಂಪನಿಯಲ್ಲಿ ವಾರ್ಡ್ ಅಧ್ಯಕ್ಷ […]

ಚೀಟಿ ವ್ಯವಹಾರ: ವಿಕೆಟ್​ಗಳಿಂದ ಬಡಿದಾಡಿಕೊಂಡ  ಯೂತ್ ಕಾಂಗ್ರೆಸ್ ನಾಯಕರು
Follow us on

ಬೆಂಗಳೂರು: ಹಣ ವಿಚಾರವಾಗಿ ಕಾಂಗ್ರೆಸ್ ಪಕ್ಷದ ರಾಜ್ಯ ಯೂತ್ ಕಾರ್ಯದರ್ಶಿ ಹಾಗೂ ಬಾಗಲಗುಂಟೆ ವಾರ್ಡ್ ಅಧ್ಯಕ್ಷರು ಕ್ರಿಕೆಟ್ ವಿಕೆಟ್​ಗಳಿಂದ ಹೊಡೆದಾಡಿಕೊಂಡಿದ್ದಾರೆ. ರಾಜಗೋಪಾಲ್ ನಗರ ಪೊಲೀಸ್ ಠಾಣೆ ವ್ಯಾಪ್ತಿಯ ಹೆಗ್ಗನಹಳ್ಳಿಯಲ್ಲಿರುವ ಅಕ್ಷಯ ಶ್ರೀ ಫೈನಾನ್ಸ್​ನಲ್ಲಿ ಘಟನೆ ನಡೆದಿದೆ.

ಬಾಗಲಗುಂಟೆ ವಾರ್ಡ್ ಅಧ್ಯಕ್ಷ ಜಗದೀಶ್ ಮೇಲೆ ರಾಜ್ಯ ಯೂತ್ ಕಾರ್ಯದರ್ಶಿ ಉಮೇಶ್ ಭೈರೇಗೌಡ ಹಲ್ಲೆ ನಡೆಸಿದ್ದಾರೆ. ಹಲ್ಲೆಗೊಳಗಾದ ಜಗದೀಶ್​ಗೆ ಸಪ್ತಗಿರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

ಉಮೇಶ್ ಭೈರೇಗೌಡ ಅಕ್ಷಯ ಶ್ರೀ ಫೈನಾನ್ಸ್ ನಡೆಸುತ್ತಿದ್ದರು. ಈ ಫೈನಾನ್ಸ್ ಕಂಪನಿಯಲ್ಲಿ ವಾರ್ಡ್ ಅಧ್ಯಕ್ಷ ಜಗದೀಶ್ ಚೀಟಿ ರೂಪದಲ್ಲಿ ಪ್ರತಿ ತಿಂಗಳು 30ಸಾವಿರದಂತೆ ಹಣ ಹೂಡಿಕೆ ಮಾಡಿದ್ದಾರೆ. 3ವರ್ಷಗಳಿಂದ 30ಸಾವಿರ ಪಾವತಿಸಿ ಚೀಟಿ ಮುಗಿದ ಬಳಿಕ 9ಲಕ್ಷ ಹಣ ಕೊಡುವಂತೆ ಫೈನಾನ್ಸ್ ಕಚೇರಿ ಬಳಿ ತೆರಳಿದ್ದಾರೆ. ಚೀಟಿ ಕೊನೆಗೊಂಡು ಒಂದು ವರ್ಷ ಕಳೆದರೂ ಹಣ ಕೊಡದಿದ್ದಕ್ಕೆ ಮಾತಿನ ಸಮರ ಶುರುವಾಗಿದೆ. ಈ ವೇಳೆ ಮಾತು ತಾರಕಕ್ಕೇರಿ ವಿಕೆಟ್​ಗಳಿಂದ ಬಡಿದಾಟವಾಗಿದೆ.

Published On - 3:56 pm, Tue, 26 November 19