ವಿದ್ಯುತ್ ತಂತಿ ಕದ್ದು ಮಾರುತ್ತಿದ್ದ ಬೆಂಗಳೂರಿನ ಆರೋಪಿಗಳು ಅಂದರ್
ಹಾಸನ: ವಿದ್ಯುತ್ ತಂತಿ ಕದ್ದು ಗಟ್ಟಿಮಾಡಿ ಮಾರುತ್ತಿದ್ದ ಆರೋಪಿಗಳನ್ನು ಅರಸೀಕೆರೆ ಗ್ರಾಮಾಂತರ ಠಾಣೆ ಪೊಲೀಸರು ಅರೆಸ್ಟ್ ಮಾಡಿದ್ದಾರೆ. ಸೈಯದ್ ಗಫಾರ್, ರಿಯಾಜುಲ್ಲಾ ಖಾನ್ ಬಂಧಿತ ಆರೋಪಿಗಳು. ಇವರಿಬ್ಬರು ಬೆಂಗಳೂರು ಮೂಲದ ನಿವಾಸಿಗಳು. ರಾಜ್ಯದ ವಿವಿಧೆಡೆ ಲಕ್ಷಾಂತರ ರೂಪಾಯಿ ಮೌಲ್ಯದ ವಿದ್ಯುತ್ ತಂತಿಗಳನ್ನ ಕಳವು ಮಾಡಿದ್ದಾರೆ. ಆರೋಪಿಗಳಿಂದ 25 ಲಕ್ಷ ಮೌಲ್ಯದ 9 ಸಾವಿರ ಕೆಜಿ ಅಲ್ಯೂಮಿನಿಯಂ ತಂತಿಯ ಗಟ್ಟಿಯನ್ನು ವಶ ಪಡಿಸಿಕೊಳ್ಳಲಾಗಿದೆ. ಆರೋಪಿಗಳು ಹೊಸದಾಗಿ ಕಾಮಗಾರಿ ನಡೆಯೋ ವಿದ್ಯುತ್ ಮಾರ್ಗಗಳನ್ನು ಗುರಿತಿಸಿ. ಕಿಲೋಮೀಟರ್ ಗಟ್ಟಲೆ ಅಳವಡಿಸುತ್ತಿದ್ದ ತಂತಿಗಳನ್ನು […]
ಹಾಸನ: ವಿದ್ಯುತ್ ತಂತಿ ಕದ್ದು ಗಟ್ಟಿಮಾಡಿ ಮಾರುತ್ತಿದ್ದ ಆರೋಪಿಗಳನ್ನು ಅರಸೀಕೆರೆ ಗ್ರಾಮಾಂತರ ಠಾಣೆ ಪೊಲೀಸರು ಅರೆಸ್ಟ್ ಮಾಡಿದ್ದಾರೆ. ಸೈಯದ್ ಗಫಾರ್, ರಿಯಾಜುಲ್ಲಾ ಖಾನ್ ಬಂಧಿತ ಆರೋಪಿಗಳು. ಇವರಿಬ್ಬರು ಬೆಂಗಳೂರು ಮೂಲದ ನಿವಾಸಿಗಳು. ರಾಜ್ಯದ ವಿವಿಧೆಡೆ ಲಕ್ಷಾಂತರ ರೂಪಾಯಿ ಮೌಲ್ಯದ ವಿದ್ಯುತ್ ತಂತಿಗಳನ್ನ ಕಳವು ಮಾಡಿದ್ದಾರೆ. ಆರೋಪಿಗಳಿಂದ 25 ಲಕ್ಷ ಮೌಲ್ಯದ 9 ಸಾವಿರ ಕೆಜಿ ಅಲ್ಯೂಮಿನಿಯಂ ತಂತಿಯ ಗಟ್ಟಿಯನ್ನು ವಶ ಪಡಿಸಿಕೊಳ್ಳಲಾಗಿದೆ.
ಆರೋಪಿಗಳು ಹೊಸದಾಗಿ ಕಾಮಗಾರಿ ನಡೆಯೋ ವಿದ್ಯುತ್ ಮಾರ್ಗಗಳನ್ನು ಗುರಿತಿಸಿ. ಕಿಲೋಮೀಟರ್ ಗಟ್ಟಲೆ ಅಳವಡಿಸುತ್ತಿದ್ದ ತಂತಿಗಳನ್ನು ಕದ್ದು ಮಾರಾಟ ಮಾಡುತ್ತಿದ್ದರು. ಅರಸೀಕೆರೆ ಗ್ರಾಮಾಂತರ ಪೊಲೀಸರ ಕಾರ್ಯಾಚರಣೆ ಬಳಿಕ ಬೆಂಗಳೂರಿನ ರೋಷನ್ ನಗರದ ಗುಜರಿ ವ್ಯಾಪಾರಿ ಸೈಯದ್ ಗಫಾರ್ ಮತ್ತು ಹೊಸಕೋಟೆಯ ದರ್ಗಾ ಮೊಹಲ್ಲಾದ ಚಾಲಕ ರಿಯಾಜುಲ್ಲಾ ಖಾನ್ ಇಬ್ಬರನ್ನು ಪೊಲಿಸರು ಬಂಧಿಸಿದ್ದಾರೆ. ಇವರು ಹಾಸನ, ಸಾಲಿಗ್ರಾಮ, ತುಮಕೂರು ಸೇರಿದಂತೆ ರಾಜ್ಯದ 6 ಕಡೆ ತಂತಿ ಕಳವು ಮಾಡಿದ್ದಾರೆ.
Published On - 12:19 pm, Tue, 26 November 19