ATMನಲ್ಲಿ ಹಣ ವಿತ್​ ಡ್ರಾ ಮಾಡುವಾಗ ಎಚ್ಚರ… ಎಚ್ಚರ: ಯಾಮಾರಿದ್ರೆ ಬಕ್ರಾ ಆಗೋದು ಫಿಕ್ಸ್​!

Edited By:

Updated on: Oct 31, 2025 | 11:22 AM

ಚಳ್ಳಕೆರೆಯ ಕೆನರಾ ಬ್ಯಾಂಕ್ ATMನಲ್ಲಿ ವಂಚನೆ ನಡೆದಿದೆ. ಹಣ ವಿತ್‌ಡ್ರಾ ಮಾಡಲು ಬಂದವರಿಗೆ ನೆರವಾಗುವ ನೆಪದಲ್ಲಿ, ಖದೀಮ ಪಾಸ್‌ವರ್ಡ್ ನೋಡಿ ಕ್ಷಣಾರ್ಧದಲ್ಲಿ ATM ಕಾರ್ಡ್ ಬದಲಾಯಿಸಿದ್ದಾನೆ. ಬೇರೊಂದು ATMನಲ್ಲಿ ಹಣ ಡ್ರಾ ಮಾಡಿ ವಂಚಕ ಎಸ್ಕೇಪ್ ಆಗಿದ್ದು, ಈ ಕೃತ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.

ಚಿತ್ರದುರ್ಗ, ಅಕ್ಟೋಬರ್​ 31: ಕ್ಯಾಶ್ ಡ್ರಾ ಮಾಡಲು ಬಂದವರಿಗೆ ನೆರವಾಗುವ ನೆಪದಲ್ಲಿ ATM ಕಾರ್ಡ್ ಬದಲಾಯಿಸಿ ವಂಚನೆ ಮಾಡಿರುವ ಘಟನೆ ಚಿತ್ರದುರ್ಗ (Chitradurga) ಜಿಲ್ಲೆ ಚಳ್ಳಕೆರೆಯ ಕೆನರಾ ಬ್ಯಾಂಕ್ ATMನಲ್ಲಿ ನಡೆದಿದೆ. ಪಾಸ್ ವರ್ಡ್ ನೋಡಿ ಕ್ಷಣಾರ್ಧದಲ್ಲಿ ATM ಕಾರ್ಡ್ ಎಕ್ಸ್ ಚೇಂಜ್ ಮಾಡಿರುವ ವಂಚಕ ಬೇರೊಂದು ATMನಲ್ಲಿ ಹಣ ಡ್ರಾ ಮಾಡಿಕೊಂಡು ಎಸ್ಕೇಪ್​ ಆಗಿದ್ದಾನೆ. ATMನಲ್ಲಿ ಕಾರ್ಡ್ ಬದಲಿಸಿದ ವಂಚಕನ ಕೃತ್ಯ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ವಿಡಿಯೋ ವೈರಲ್ ಆಗಿದೆ.

ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್​ ಮಾಡಿ.

Loading...
Unable to load recommendations.
Follow Us
ಬಸವರಾಜ ಮುದನೂರ್

ಆದ್ಯ ವಚನಕಾರ ದೇವರ ದಾಸಿಮಯ್ಯನ 'ಮುದನೂರು' ನಮ್ಮ ಮೂಲ ಊರು. ಸಂತಗುಣದ ತಾತ ಕಿರಿ ವಯಸ್ಸಿನಲ್ಲೇ ಊರು-ಮನೆ ತೊರೆದು ಬರಿಗೈಲಿ ಬಂದು ಯಾದಗಿರಿ ಜಿಲ್ಲೆಯ ಶಹಾಪುರದಲ್ಲಿ ಸ್ವಾಭಿಮಾನದ ಬದುಕು ಕಟ್ಟಿಕೊಂಡರು. ಅಪ್ಪ ಶಿಕ್ಷಕರಾಗಿ ಬದುಕು ರೂಪಿಸಿಕೊಂಡರು. ನನಗೂ ಜೀವನ ಪಾಠ ಕಲಿಸಿದ 'ಗುರು' & 'ಗಾಡ್ ಫಾದರ್' ನನ್ನಪ್ಪ. ಓದು ಮತ್ತು ಬರವಣಿಗೆ ನನ್ನ ಹವ್ಯಾಸ. ಕೋಟೆ-ಕೊತ್ತಲು‌, ಕಾಡು-ಮೇಡು‌‌‌ ಸುತ್ತಾಟ, ಚಾರಣವೆಂದರೆ ಪ್ರಾಣಪ್ರೀತಿ. ಹಳೇ ಹಿಂದಿ ಹಾಡು, ಗಝಲ್, ಜನಪದ, ಭಾವಗೀತೆಗಳು ಮತ್ತು ಭಜನೆ ನನಗಿಷ್ಟ. ಕಾಲೇಜು ದಿನಗಳಲ್ಲಿದ್ದ ಕ್ರಿಕೆಟ್ ಹುಚ್ಚು ಕಡಿಮೆ ಆಗಿದೆ. ಕೋಟೆನಾಡು‌ ಚಿತ್ರದುರ್ಗ ಜಿಲ್ಲೆಯ ಟಿವಿ9 ಪ್ರತಿನಿಧಿಯಾಗಿ ಒಂದೂವರೆ ದಶಕದಿಂದ ಕಾರ್ಯ ನಿರ್ವಹಿಸುತ್ತಿದ್ದೇನೆ. 'ಹೆಣ್ಣಾಗಿದ್ದೇ ತಪ್ಪಾ?' ಅಭಿಯಾನದ ಮೂಲಕ ಮೌಢ್ಯದ ವಿರುದ್ಧ ಜಾಗೃತಿ, 'ವಿಷಾಮೃತ' ಅಭಿಯಾನದ ಮೂಲಕ ನೀರಿನ ಕುರಿತು ಸರ್ಕಾರದ ಕಣ್ತೆರೆಸುವ ಕಾರ್ಯ, 'ಕೆರೆ ಉಳಿಸಿ' ಅಭಿಯಾನದ ಮೂಲಕ ಜಲಮೂಲಗಳ ಸಂರಕ್ಷಣೆ, 'ಆಪರೇಷನ್ ಚಿನ್ನ' ಸರಣಿ ವರದಿ ಮೂಲಕ ವಂಚಕರ ಜಾಲ ಬೇಧಿಸುವ ಕರ್ತವ್ಯ, ಬುಡಕಟ್ಟು ಸಮುದಾಯಗಳ ಜೀವನ, ಸಂಸ್ಕೃತಿ, ಆಚರಣೆಗಳ ಅನಾವರಣ, ಬಯಲುಸೀಮೆಯ ರೈತರ ಸಂಕಷ್ಟ, ಭದ್ರಾ ಮೇಲ್ದಂಡೆ ಯೋಜನೆ ಅಗತ್ಯತೆ ಕುರಿತು ವರದಿ, ಭ್ರಷ್ಟರ ಮುಖವಾಡ ಬಯಲು, ಕಾವಿಧಾರಿಗಳ ಕಪಟತನ ತೆರೆದಿಡುವುದು ಸೇರಿ ಅನೇಕ ಜೀವಪರ, ಜನಪರ ವರದಿಗಾರಿಕೆಗೆ ಟಿವಿ9 ವಾಹಿನಿಯಲ್ಲಿ ಅವಕಾಶ ಸಿಕ್ಕಿದ್ದು ಹೆಮ್ಮೆಯ ಸಂಗತಿ.

Read More