ದಾವಣಗೆರೆ: ಜಗದ್ಗುರುಗಳು ಎಂಬ ಶಬ್ದ ಕಲುಷಿತವಾಗಿದೆ. ಚಿಂತಕರು ಹೇಳುತ್ತಿರುವುದು ಸತ್ಯವಾಗಿದೆ ಎಂದು ನಗರದಲ್ಲಿ ಡಾ.ಶಿವಮೂರ್ತಿ ಮುರುಘಾಶ್ರೀ ಹೇಳಿದ್ದಾರೆ. ಯಾವುದೋ ಒಂದು ಜಾತಿಯ ಗುರುಗಳು ಅಥವಾ ಉಪ ಜಾತಿಯ ಗುರುಗಳು ಅಂತಾ ಕರೆಸಿಕೊಳ್ಳುತ್ತಾರೆ. ಇವರು ಜಗದ್ಗುರು ಎಂದು ಕರೆಸಿಕೊಳ್ಳುವುದು ಎಷ್ಟು ಸರಿ? ಎಂದು ಶ್ರೀಗಳು ಪ್ರಶ್ನಿಸಿದ್ದಾರೆ. ನಗರದಲ್ಲಿ ಆಯೋಜಿಸಲಾಗಿದ್ದ ಶರಣ ಸಂಸ್ಕೃತಿ ಉತ್ಸವದಲ್ಲಿ ಪಾಲ್ಗೊಂಡ ವೇಳೆ ಸ್ವಾಮೀಜಿಗಳು ಮಾತನಾಡಿದರು.
ಜಗದ್ಗುರುಗಳು ಎಂಬ ಈ ಶಬ್ದ ಎಷ್ಟು ಕಲುಷಿತವಾಗಿದೆ. ಬಸವಣ್ಣರವರ ಕಾಲ ಜೋಡಣೆಯ ಕಾಲ. 21ನೇ ಶತಮಾನ ವಿಭಜನೆಯ ಕಾಲವಾಗಿದೆ. ಜಾತಿ, ಮೀಸಲಾತಿ ಹೆಸರಿನಲ್ಲಿ ವಿಭಜನೆ ಮಾಡಲಾಗುತ್ತಿದೆ ಎಂದು ಚಿತ್ರದುರ್ಗದ ಮುರುಘಾ ಮಠದ ಸ್ವಾಮೀಜಿ ಹೇಳಿದರು.
Published On - 10:58 pm, Sun, 28 February 21