ಬಿಜೆಪಿ ಸಂಸದ ಕಾರು ಚಾಲಕನ ಕಿರುಕುಳ ಆರೋಪ, ಚಾಲಕನ ಅತ್ತಿಗೆ ಆತ್ಮಹತ್ಯೆ
ಚಿತ್ರದುರ್ಗ: ಮೈದುನನ ದೌರ್ಜನ್ಯದಿಂದ ಬೇಸತ್ತು ಅತ್ತಿಗೆ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಸಿದ್ದಾಪುರ ಗ್ರಾಮದಲ್ಲಿ ನಡೆದಿದೆ. ಡೆತ್ ನೋಟ್ ಬರೆದಿಟ್ಟು ಜ್ಯೋತಿ (40) ಮನೆಯಲ್ಲೇ ನೇಣಿಗೆ ಶರಣಾಗಿದ್ದಾರೆ. ಬಿಜೆಪಿ ಸಂಸದ ಜಿ.ಎಂ.ಸಿದ್ದೇಶ್ವರ್ ಕಾರು ಚಾಲಕನೆಂದು ಮನೆಗೆ ವಿದ್ಯುತ್, ನೀರು ಸರಬರಾಜು ಕಡಿತಗೊಳಿಸಿ ಕಿರುಕುಳ ನೀಡಿದ್ದಾನೆ. ಅಲ್ಲದೆ ಅತ್ತಿಗೆ ಮೇಲೆ ಆರೋಪಿ ಪ್ರಭುಲಿಂಗ ದರ್ಪ, ದೌರ್ಜನ್ಯ ತೋರಿದ್ದಾನೆ ಎನ್ನಲಾಗಿದೆ. ಹೀಗಾಗಿ ಪ್ರಭುಲಿಂಗನನ್ನು ಬಂಧಿಸಬೇಕೆಂದು ಮೃತ ಜ್ಯೋತಿ ಸಂಬಂಧಿಕರು ಆಗ್ರಹಿಸಿದ್ದಾರೆ. ಈ ಸಂಬಂಧ ಚಿತ್ರದುರ್ಗ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Follow us on
ಚಿತ್ರದುರ್ಗ: ಮೈದುನನ ದೌರ್ಜನ್ಯದಿಂದ ಬೇಸತ್ತು ಅತ್ತಿಗೆ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಸಿದ್ದಾಪುರ ಗ್ರಾಮದಲ್ಲಿ ನಡೆದಿದೆ. ಡೆತ್ ನೋಟ್ ಬರೆದಿಟ್ಟು ಜ್ಯೋತಿ (40) ಮನೆಯಲ್ಲೇ ನೇಣಿಗೆ ಶರಣಾಗಿದ್ದಾರೆ.
ಬಿಜೆಪಿ ಸಂಸದ ಜಿ.ಎಂ.ಸಿದ್ದೇಶ್ವರ್ ಕಾರು ಚಾಲಕನೆಂದು ಮನೆಗೆ ವಿದ್ಯುತ್, ನೀರು ಸರಬರಾಜು ಕಡಿತಗೊಳಿಸಿ ಕಿರುಕುಳ ನೀಡಿದ್ದಾನೆ. ಅಲ್ಲದೆ ಅತ್ತಿಗೆ ಮೇಲೆ ಆರೋಪಿ ಪ್ರಭುಲಿಂಗ ದರ್ಪ, ದೌರ್ಜನ್ಯ ತೋರಿದ್ದಾನೆ ಎನ್ನಲಾಗಿದೆ. ಹೀಗಾಗಿ ಪ್ರಭುಲಿಂಗನನ್ನು ಬಂಧಿಸಬೇಕೆಂದು ಮೃತ ಜ್ಯೋತಿ ಸಂಬಂಧಿಕರು ಆಗ್ರಹಿಸಿದ್ದಾರೆ. ಈ ಸಂಬಂಧ ಚಿತ್ರದುರ್ಗ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.