ದ್ವೇಷಕ್ಕೆ ಬಲಿಯಾದ ಅಡಿಕೆ ಗಿಡಗಳು: ಹಗಲಿರುಳು ಬೆಳೆಸಿದ್ದ ಬೆಳೆ ಬೆಂಕಿಗಾಹುತಿ: ಕಂಗಾಲಾದ ರೈತ

ಬೆಳವಣಿಗೆ ಸಹಿಸದೆ ದ್ವೇಷದಿಂದ ರಾತೋರಾತ್ರಿ 400 ಕ್ಕೂ ಹೆಚ್ಚು ಅಡಿಕೆ ಗಿಡಗಳಿಗೆ ಬೆಂಕಿ ಹಚ್ಚಿರುವಂತಹ ಘಟನೆ ಚಿತ್ರದುರ್ಗ ಜಿಲ್ಲೆಯ ಹಿರಿಯೂರು ತಾಲೂಕಿನ ಸಲಬೊಮ್ಮನಹಳ್ಳಿ ಗ್ರಾಮದ ನಡೆದಿದೆ. 15 ಲಕ್ಷ ರೂ. ಸಾಲ ಮಾಡಿ ಎರಡು ಎಕರೆಯಲ್ಲಿ 1800 ಅಡಿಕೆ ಗಿಡ ನೆಟ್ಟು ಬೆಳೆದಿದ್ದ ರೈತರು ಇದೀಗ ಕಂಗಾಲಾಗಿದ್ದಾರೆ.

ದ್ವೇಷಕ್ಕೆ ಬಲಿಯಾದ ಅಡಿಕೆ ಗಿಡಗಳು: ಹಗಲಿರುಳು ಬೆಳೆಸಿದ್ದ ಬೆಳೆ ಬೆಂಕಿಗಾಹುತಿ: ಕಂಗಾಲಾದ ರೈತ
ಬೆಂಕಿಗಾಹುತಿಯಾದ ಅಡಿಕೆ
Edited By:

Updated on: Nov 13, 2023 | 8:58 PM

ಚಿತ್ರದುರ್ಗ, ನವೆಂಬರ್​​​ 13: ಜಿಲ್ಲೆಯ ಹಿರಿಯೂರು ತಾಲೂಕಿನ ಸಲಬೊಮ್ಮನಹಳ್ಳಿ ಗ್ರಾಮದ ಸರೋಜಮ್ಮ ಮತ್ತು ತಿಪ್ಪೇಸ್ವಾಮಿ ದಂಪತಿ ಕೃಷಿಯನ್ನೇ ಬದುಕಾಗಿಸಿಕೊಂಡಿದ್ದರು. ಎರಡು ಎಕರೆ ಜಮೀನಿನಲ್ಲಿ ಕಳೆದೆರಡು ವರ್ಷದಿಂದ ಅಡಿಕೆ (Areca Nut) ಬೆಳೆ ಬೆಳೆಸಲು ಶ್ರಮಿಸುತ್ತಿದ್ದರು. 15 ಲಕ್ಷ ರೂ. ಸಾಲ ಮಾಡಿ ಎರಡು ಎಕರೆಯಲ್ಲಿ 1800 ಅಡಿಕೆ ಗಿಡ ನೆಟ್ಟು ಬೆಳೆದಿದ್ದರು. ಉತ್ತಮ ಬೆಳೆಯೂ ಬಂದಿದ್ದು, ಇನ್ನೊಂದು ವರ್ಷದಲ್ಲಿ ಫಸಲು ಕೈಗೆ ಬರುತ್ತದೆಂದು ಕನಸು ಕಟ್ಟಿಕೊಂಡಿದ್ದೆವು. ಆದರೆ ಬೆಳವಣಿಗೆ ಸಹಿಸದೆ ದ್ವೇಷದಿಂದ ರಾತೋರಾತ್ರಿ ಅಡಿಕೆಗೆ ಬೆಂಕಿಯಿಟ್ಟಿದ್ದಾರೆ. ಅಲ್ಲದೆ ಡ್ರಿಪ್ ವೈರ್ ಗಳನ್ನು ಸಹ ಕಿತ್ತು ಬಿಸಾಡಿದ್ದು ಸುಮಾರು 400 ಕ್ಕೂ ಹೆಚ್ಚು ಗಿಡಗಳು ಬೆಂಕಿಗಾಹುತಿ ಆಗಿರುವಂತಹ ಘಟನೆ ನಡೆದಿದೆ.

ಸಾಲ ತೀರಿಸುವುದು ಹೇಗೆಂಬ ಚಿಂತೆ ಶುರುವಾಗಿದ್ದು ಪರಿಸ್ಥಿತಿ ಹೇಳತೀರದು ಎಂದು ಅಳಲು ತೋಡಿಕೊಳ್ಳುತ್ತಾರೆ. ಇನ್ನು ಐಮಂಗಲ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಪ್ರಕರಣ ನಡೆದಿದೆ. ಪೊಲೀಸರು ಮತ್ತು ತೋಟಗಾರಿಕೆ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಇದನ್ನೂ ಓದಿ: ಚಿತ್ರದುರ್ಗ ಪೊಲೀಸರ ದಾಳಿ: ಅಕ್ರಮವಾಗಿ ಸಂಗ್ರಹಿಸಿದ್ದ 3 ಕೋಟಿ ಮೌಲ್ಯದ ಆನೆದಂತ, ಶ್ರೀಗಂಧ, ರಕ್ತಚಂದನ ವಶ; ಇಬ್ಬರು ಅರೆಸ್ಟ್​

ದ್ವೇಷದಿಂದಲೇ ಕಿಡಿಗೇಡಿಗಳು ಅಡಿಕೆ ಬೆಳೆಗೆ ಬೆಂಕಿಯಿಟ್ಟು ಎಸ್ಕೇಪ್ ಆಗಿದ್ದಾರೆ. ಹೀಗಾಗಿ, ಸರ್ಕಾರ ಕೂಡಲೇ ನೊಂದ ರೈತ ಕುಟುಂಬಕ್ಕೆ ಸೂಕ್ತ ಪರಿಹಾರ ಹಣ ನೀಡಬೇಕು. ಕೃತ್ಯ ಎಸಗಿದವರ ವಿರುದ್ಧ ಕಾನೂನು ಕ್ರಮ ಜರುಗಿಸಬೇಕೆಂಬುದು ಆಗ್ರಹಿಸಿದ್ದಾರೆ.

ಇದನ್ನೂ ಓದಿ: ಆರು ಕಳ್ಳರನ್ನು ಖೆಡ್ಡಾಕ್ಕೆ ಕೆಡವಿದ ಚಿತ್ರಹಳ್ಳಿ ಪೊಲೀಸರು; ಶ್ರೀಗಂಧ, ರಕ್ತ ಚಂದನ, ಆನೆ ದಂತ, ಪೆಂಗೋಲಿನ್ ಚಿಪ್ಪುಗಳು ವಶಕ್ಕೆ

ರೈತರು ಬೆವರು ಸುರಿಸಿ ಬೆಳೆಸಿದ್ದ ಅಡಿಕೆ ಗಿಡಗಳಿಗೆ ದುಷ್ಕರ್ಮಿಗಳು ಬೆಂಕಿಯಿಟ್ಟು ಎಸ್ಕೇಪ್​ ಆಗಿದ್ದಾರೆ. ಅಲ್ಲದೆ ಹನಿನೀರಾವರಿಯ ಪೈಪ್ ಲೈನ್ ಸಹ ಕಿತ್ತು ಬಿಸಾಡಿದ್ದು ನೋಡಿದ್ರೆ ಇದು ದ್ವೇಷದ ಜ್ವಾಲೆ ಎಂಬುದು
ಗೊತ್ತಾಗುತ್ತದೆ. ಹೀಗಾಗಿ, ಪೊಲೀಸ್ ಇಲಾಖೆ ಪ್ರಕರಣದ ತನಿಖೆ ನಡೆಸಿ ಆರೋಪಿಗಳನ್ನು ಪತ್ತೆ ಹಚ್ಚಿ ಕಾನೂನು ಕ್ರಮ ಜರುಗಿಸಬೇಕಿದೆ.

ಜಿಲ್ಲಾ ಉಸ್ತುವಾರಿ ಸಚಿವರೂ ಹಾಗೂ ಹಿರಿಯೂರು ಶಾಸಕರೂ ಆಗಿರುವ ಡಿ.ಸುಧಾಕರ್ ಈ ಬಗ್ಗೆ ಗಮನಹರಿಸಿ ರೈತರಿಗೆ ಪರಿಹಾರ ಒದಗಿಸುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಬೇಕಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 8:58 pm, Mon, 13 November 23

ಬಸವರಾಜ ಮುದನೂರ್

ಆದ್ಯ ವಚನಕಾರ ದೇವರ ದಾಸಿಮಯ್ಯನ 'ಮುದನೂರು' ನಮ್ಮ ಮೂಲ ಊರು. ಸಂತಗುಣದ ತಾತ ಕಿರಿ ವಯಸ್ಸಿನಲ್ಲೇ ಊರು-ಮನೆ ತೊರೆದು ಬರಿಗೈಲಿ ಬಂದು ಯಾದಗಿರಿ ಜಿಲ್ಲೆಯ ಶಹಾಪುರದಲ್ಲಿ ಸ್ವಾಭಿಮಾನದ ಬದುಕು ಕಟ್ಟಿಕೊಂಡರು. ಅಪ್ಪ ಶಿಕ್ಷಕರಾಗಿ ಬದುಕು ರೂಪಿಸಿಕೊಂಡರು. ನನಗೂ ಜೀವನ ಪಾಠ ಕಲಿಸಿದ 'ಗುರು' & 'ಗಾಡ್ ಫಾದರ್' ನನ್ನಪ್ಪ. ಓದು ಮತ್ತು ಬರವಣಿಗೆ ನನ್ನ ಹವ್ಯಾಸ. ಕೋಟೆ-ಕೊತ್ತಲು‌, ಕಾಡು-ಮೇಡು‌‌‌ ಸುತ್ತಾಟ, ಚಾರಣವೆಂದರೆ ಪ್ರಾಣಪ್ರೀತಿ. ಹಳೇ ಹಿಂದಿ ಹಾಡು, ಗಝಲ್, ಜನಪದ, ಭಾವಗೀತೆಗಳು ಮತ್ತು ಭಜನೆ ನನಗಿಷ್ಟ. ಕಾಲೇಜು ದಿನಗಳಲ್ಲಿದ್ದ ಕ್ರಿಕೆಟ್ ಹುಚ್ಚು ಕಡಿಮೆ ಆಗಿದೆ. ಕೋಟೆನಾಡು‌ ಚಿತ್ರದುರ್ಗ ಜಿಲ್ಲೆಯ ಟಿವಿ9 ಪ್ರತಿನಿಧಿಯಾಗಿ ಒಂದೂವರೆ ದಶಕದಿಂದ ಕಾರ್ಯ ನಿರ್ವಹಿಸುತ್ತಿದ್ದೇನೆ. 'ಹೆಣ್ಣಾಗಿದ್ದೇ ತಪ್ಪಾ?' ಅಭಿಯಾನದ ಮೂಲಕ ಮೌಢ್ಯದ ವಿರುದ್ಧ ಜಾಗೃತಿ, 'ವಿಷಾಮೃತ' ಅಭಿಯಾನದ ಮೂಲಕ ನೀರಿನ ಕುರಿತು ಸರ್ಕಾರದ ಕಣ್ತೆರೆಸುವ ಕಾರ್ಯ, 'ಕೆರೆ ಉಳಿಸಿ' ಅಭಿಯಾನದ ಮೂಲಕ ಜಲಮೂಲಗಳ ಸಂರಕ್ಷಣೆ, 'ಆಪರೇಷನ್ ಚಿನ್ನ' ಸರಣಿ ವರದಿ ಮೂಲಕ ವಂಚಕರ ಜಾಲ ಬೇಧಿಸುವ ಕರ್ತವ್ಯ, ಬುಡಕಟ್ಟು ಸಮುದಾಯಗಳ ಜೀವನ, ಸಂಸ್ಕೃತಿ, ಆಚರಣೆಗಳ ಅನಾವರಣ, ಬಯಲುಸೀಮೆಯ ರೈತರ ಸಂಕಷ್ಟ, ಭದ್ರಾ ಮೇಲ್ದಂಡೆ ಯೋಜನೆ ಅಗತ್ಯತೆ ಕುರಿತು ವರದಿ, ಭ್ರಷ್ಟರ ಮುಖವಾಡ ಬಯಲು, ಕಾವಿಧಾರಿಗಳ ಕಪಟತನ ತೆರೆದಿಡುವುದು ಸೇರಿ ಅನೇಕ ಜೀವಪರ, ಜನಪರ ವರದಿಗಾರಿಕೆಗೆ ಟಿವಿ9 ವಾಹಿನಿಯಲ್ಲಿ ಅವಕಾಶ ಸಿಕ್ಕಿದ್ದು ಹೆಮ್ಮೆಯ ಸಂಗತಿ.

Read More
Loading...
Unable to load recommendations.
Follow Us