ಚಿತ್ರದುರ್ಗ ಪೊಲೀಸರ ದಾಳಿ: ಅಕ್ರಮವಾಗಿ ಸಂಗ್ರಹಿಸಿದ್ದ 3 ಕೋಟಿ ಮೌಲ್ಯದ ಆನೆದಂತ, ಶ್ರೀಗಂಧ, ರಕ್ತಚಂದನ ವಶ; ಇಬ್ಬರು ಅರೆಸ್ಟ್​

ಚಿತ್ರದುರ್ಗ ಜಿಲ್ಲೆಯ ಹಿರಿಯೂರು ತಾಲೂಕಿನ ಬಬ್ಬೂರು ಗ್ರಾಮದ ಬಳಿಯ ಮನೆಯೊಂದರ ಮೇಲೆ ಪೊಲೀಸರು ದಾಳಿ ಮಾಡಿದ್ದು, 3 ಕೋಟಿ ಮೌಲ್ಯದ ಆನೆದಂತ, ಶ್ರೀಗಂಧ ಮತ್ತು ರಕ್ತಚಂದನ ವಶಪಡಿಸಿಕೊಂಡಿದ್ದಾರೆ.

ಚಿತ್ರದುರ್ಗ ಪೊಲೀಸರ ದಾಳಿ: ಅಕ್ರಮವಾಗಿ ಸಂಗ್ರಹಿಸಿದ್ದ 3 ಕೋಟಿ ಮೌಲ್ಯದ ಆನೆದಂತ, ಶ್ರೀಗಂಧ, ರಕ್ತಚಂದನ ವಶ; ಇಬ್ಬರು ಅರೆಸ್ಟ್​
ಅಕ್ರಮವಾಗಿ ಆನೆದಂತ ಸಂಗ್ರಹಿಸಿದ್ದವನ ಮನೆ ಮೇಲೆ ಚಿತ್ರದುರ್ಗ ಪೊಲೀಸರ ದಾಳಿ
Follow us
TV9 Web
| Updated By: ವಿವೇಕ ಬಿರಾದಾರ

Updated on: Nov 11, 2023 | 10:30 AM

ಚಿತ್ರದುರ್ಗ ನ.11: ಹಿರಿಯೂರು ತಾಲೂಕಿನ ಬಬ್ಬೂರು ಗ್ರಾಮದ ಬಳಿಯ ಮನೆಯೊಂದರ ಮೇಲೆ ಪೊಲೀಸರು (Police) ದಾಳಿ ಮಾಡಿದ್ದು, 3 ಕೋಟಿ ಮೌಲ್ಯದ ಆನೆದಂತ, ಶ್ರೀಗಂಧ ಮತ್ತು ರಕ್ತಚಂದನ ವಶಪಡಿಸಿಕೊಂಡಿದ್ದಾರೆ. ಪ್ರಕರಣ ಸಂಬಂಧ ಚಿಕ್ಕಮಗಳೂರು (Chikkamagaluru) ಜಿಲ್ಲೆಯ ತರೀಕೆರೆ ಮೂಲದ ಚಂದ್ರಶೇಖರ್ ಹಾಗೂ ತಮಿಳುನಾಡು ಮೂಲದ ಖಲೀಲ್‌ ಎಂಬುವರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಆರೋಪಿಗಳು ಸೌದೆ ವ್ಯಾಪಾರ ಮಾಡುವುದಾಗಿ ಹೇಳಿ‌ ಬಬ್ಬೂರು ಗ್ರಾಮದ ಬಳಿ ನಾರಾಯಣಪ್ಪ ಎಂಬುವರ ಮನೆಯನ್ನು ಲೀಸ್​​​​​ಗೆ ಪಡೆದ್ದರು.

ಮನೆಯಲ್ಲಿ ಅಕ್ರಮವಾಗಿ ಆನೆದಂತ, ಶ್ರೀಗಂಧ ಮತ್ತು ರಕ್ತಚಂದನ ಸಂಗ್ರಹಿಸಿದ್ದರು. ಖಚಿತ ಮಾಹಿತಿ ಮೇರೆಗೆ ಹೊಳಲ್ಕೆರೆ ತಾಲೂಕಿನ ಚಿತ್ರಹಳ್ಳಿ ಠಾಣೆ ಪೊಲೀಸರು ದಾಳಿ ಮಾಡಿ ಆರೋಪಿಗಳನ್ನು ವಶಕ್ಕೆ ಪಡೆದು 3 ಕೋಟಿ ಮೌಲ್ಯದ ವಸ್ತು ಜಪ್ತಿ ಮಾಡಿದ್ದಾರೆ. ಚಿತ್ರದುರ್ಗ ಎಸ್​​​ಪಿ ಧರ್ಮೇಂದರ್ ಕುಮಾರ್ ಮೀನಾ ಮಾಹಿತಿ ನೀಡಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ