AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬೆಂಗಳೂರು: ಆನೆದಂತ ಮಾರಾಟ ಮಾಡಲು ಯತ್ನಿಸುತ್ತಿದ್ದ ಆರೋಪಿಯ ಬಂಧನ

ಆನೆದಂತ ಮಾರಾಟ ಮಾಡಲು ಯತ್ನಿಸುತ್ತಿದ್ದ ಆರೋಪಿಯನ್ನು ಆರ್​ಎಂಸಿ ಯ‍ಾರ್ಡ್ ಪೊಲೀಸರು ಬಂಧಿಸಿದ್ದಾರೆ.

ಬೆಂಗಳೂರು: ಆನೆದಂತ ಮಾರಾಟ ಮಾಡಲು ಯತ್ನಿಸುತ್ತಿದ್ದ ಆರೋಪಿಯ ಬಂಧನ
ಆನೆದಂತ ಮಾರಲು ಯತ್ನ
ಪ್ರಜ್ವಲ್​ ಕುಮಾರ್ ಎನ್​ ವೈ
| Edited By: |

Updated on: Aug 11, 2023 | 3:07 PM

Share

ಬೆಂಗಳೂರು: ಆನೆದಂತ (Elephant Ivory) ಮಾರಾಟ ಮಾಡಲು ಯತ್ನಿಸುತ್ತಿದ್ದ ಆರೋಪಿಯನ್ನು ಆರ್​ಎಂಸಿ ಯ‍ಾರ್ಡ್ ಪೊಲೀಸರು (Police) ಬಂಧಿಸಿದ್ದಾರೆ. ಶ್ರೀಶೈಲ ಬಂಧಿತ ಆರೋಪಿ. ಆರೋಪಿ ಶ್ರೀಶೈಲ್​ ಗುರುವಾರ ಸಂಜೆ 6.30 ರ ಸುಮಾರಿಗೆ ಆರ್​ಎಂಸಿ ಯಾರ್ಡ್ ಠಾಣಾ ವ್ಯಾಪ್ತಿಯ ಕೈಗಾರಿಕಾ ಪ್ರದೇಶದಲ್ಲಿ ಆನೆ ದಂತ ಮಾರಾಟಕ್ಕೆ ಯತ್ನಿಸುತ್ತಿದ್ದನು. ಈ ಬಗ್ಗೆ ಆರ್​ಎಂಸಿ ಯಾರ್ಡ್ ಪೊಲೀಸರಿಗೆ ಮಾಹಿತಿ ಸಿಕ್ಕಿತ್ತು. ಕೂಡಲೆ ಪೊಲೀಸರು ಸ್ಥಳಕ್ಕೆ ತೆರಳಿ ಆರೋಪಿಯನ್ನು ಬಂಧಿಸಿದ್ದಾರೆ.

ಬಂಧಿತನಿಂದ 7.42 ಕೆಜಿ ತೂಕದ 5 ಆನೆ ದಂತಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಇನ್ನು ಪ್ರಕರಣದಲ್ಲಿ ತಲೆ ಮರೆಸಿಕೊಂಡಿರುವ ಮತ್ತೊಬ್ಬ ಆರೋಪಿಗಾಗಿ ಪೊಲೀಸರು ಹುಡುಕಾಟ ನಡೆಸಿದ್ದಾರೆ. ಆರ್​ಎಂಸಿ ಯಾರ್ಡ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ: ಬಿಟ್ ಕಾಯಿನ್ ಪ್ರಕರಣ -ಎಸ್ಐಟಿ ಯಿಂದ ತನಿಖೆ ಚುರುಕು

ಚಿನ್ನದ ವ್ಯಾಪಾರಿ ಬಳಿ ಇದ್ದ 40 ಲಕ್ಷ ಹಣ ದೋಚಿದ್ದ ನಾಲ್ವರ ಸೆರೆ

ಚಾಮರಾಜನಗರ: ಚಿನ್ನದ ವ್ಯಾಪಾರಿ ಬಳಿ ಇದ್ದ 40 ಲಕ್ಷ ರೂ. ಹಣವನ್ನು ದೋಚಿ ಕಾರಿನಲ್ಲಿ ಪರಾರಿಯಾಗುತ್ತಿದ್ದ ನಾಲ್ವರನ್ನು ಜಿಲ್ಲೆಯ ಗುಂಡ್ಲುಪೇಟೆ ತಾಲೂಕಿನ ಸೋಮಹಳ್ಳಿ ಗ್ರಾಮಸ್ಥರು ಸೆರೆ ಹಿಡಿದಿದ್ದಾರೆ.

ಮೂರು ಕಾರುಗಳಲ್ಲಿ ಬಂದಿದ್ದ ಕೇರಳ ಮೂಲದ ದರೋಡೆ ಗ್ಯಾಂಗ್​ ಚಿನ್ನದ ವ್ಯಾಪಾರಿ ಬಳಿ ಇದ್ದ 40 ಲಕ್ಷ ರೂ. ಹಣವನ್ನು ದೋಚಿ ಪರಾರಿಯಾಗಲು ಯತ್ನಿಸಿದ್ದರು. ಈ ವೇಳೆ ಅಲರ್ಟ್​ ಆದ ಗ್ರಾಮಸ್ಥರು ಖದೀಮರನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ.

ಅನುಮಾನಾಸ್ಪದ ಸಾವು ಪ್ರಕರಣ ಭೇದಿಸಿದ ಪೊಲೀಸರು

ನೆಲಮಂಗಲ: ಆಗಸ್ಟ್ 5ರಂದು ಹೆದ್ದಾರಿ4ರ ಬ್ರಿಡ್ಜ್ ಬಳಿ ಅಪರಿಚಿತ ಶವವೊಂದು ಪತ್ತೆಯಾಗಿತ್ತು. ನೆಲಮಂಗಲ ಟೌನ್ ಪೊಲೀಸರು ಅನುಮಾನಾಸ್ಪದ ಸಾವೆಂದು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದ್ದರು. ಇದೀಗ ಪೊಲೀಸರು ಪ್ರಕರಣವನ್ನು ಭೇದಿಸಿದ್ದು, ನಾಲ್ವರನ್ನು ಬಂಧಿಸಿದ್ದಾರೆ. ಬೆಂಗಳೂರಿನ ಲಗ್ಗೆರೆ ಮಂಜುನಾಥ್ (31), ಅರಿಶಿನಕುಂಟೆಯ ಅಬ್ದುಲ್ ಸಲಾಂ(34), ಸುನೀಲ್(26),ಶರಣ್ ಗೌಡ(27) ಬಂಧಿತ ಆರೋಪಿಗಳು.ಸಂತೋಷ್(32) ಮೃತ ದುರ್ದೈವಿ.

ನಾಲ್ವರು ಆರೋಪಿಗಳು ಆ.5 ರಂದು ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲ ಚಂದು ಡಾಬಾದಲ್ಲಿ ಕಂಠಪೂರ್ತಿ ಕುಡಿದಿದ್ದರು. ಮದ್ಯದ ಅಮಲಿನಲ್ಲಿ ಕಾರು ಚಾಲನೆ ಮಾಡಿ ನೆಲಮಂಗಲ ಟೌನ್ ದಾನೋಜಿಪಾಳ್ಯ ಬಳಿ ಪಾದಚಾರಿ ಸಂತೋಷ್​ಗೆ ಕಾರಿನಿಂದ ಗುದ್ದಿ ಪರಾರಿಯಾಗಿದ್ದರು.

ಸಂತೋಷ್​ ಮೃತ ದೇಹ ಹೆದ್ದಾರಿ4ರ ಬ್ರಿಡ್ಜ್ ಬಳಿ ಪತ್ತೆಯಾಗಿತ್ತು. ವಿಷಯ ತಿಳಿದ ನೆಲಮಂಗಲ ಟೌನ್​ ಪೊಲೀಸರು ಸ್ಥಳ ಪರಿಶೀಲಿಸಿ ಪ್ರಕರಣ ದಾಖಲಿಸಿಕೊಂಡಿದ್ದರು. ಈ ಕುರಿತು ತಿನಿಖೆ ನಡೆಸುವಾಗ ಪೊಲೀಸರಿಗೆ ಮೃತ ಸಂತೋಷ್ ರಸ್ತೆ ಪಕ್ಕದಲ್ಲಿ ನಡೆದು ಬರುತ್ತಿದ್ದ ಸಿಸಿಟಿವಿ ದೃಶ್ಯ ಲಭ್ಯವಾಗಿದೆ. ಇದರ ಅಧಾರದ ಮೇಲೆ ಪ್ರಕರಣ ಭೇದಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ. ಇದೀಗ ತನಿಖೆ ಪೂರ್ಣಗೊಳಿಸಿ ನೆಲಮಂಗಲ ಸಂಚಾರಿ ಪೊಲೀಸ್ ಠಾಣೆಗೆ ಪ್ರಕರಣ ವರ್ಗಾವಣೆ ಮಾಡಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಸಚಿವ ಜಮೀರ್ 2ನೇ ಟಿಪ್ಪು ಸುಲ್ತಾನ್ ಎಂದ ಪ್ರಮೋದ್ ಮುತಾಲಿಕ್
ಸಚಿವ ಜಮೀರ್ 2ನೇ ಟಿಪ್ಪು ಸುಲ್ತಾನ್ ಎಂದ ಪ್ರಮೋದ್ ಮುತಾಲಿಕ್
ಬ್ಯಾನರ್​​ ಗಲಾಟೆ ವೇಳೆ ಫೈರಿಂಗ್​: ಸ್ಫೋಟಕ ಸಾಕ್ಷಿಕೊಟ್ಟ ಶ್ರೀರಾಮುಲು
ಬ್ಯಾನರ್​​ ಗಲಾಟೆ ವೇಳೆ ಫೈರಿಂಗ್​: ಸ್ಫೋಟಕ ಸಾಕ್ಷಿಕೊಟ್ಟ ಶ್ರೀರಾಮುಲು
ಗುಂಡೇಟಿಗೆ ಕಾಂಗ್ರೆಸ್ ಕಾರ್ಯಕರ್ತ ಸಾವು: ಸಿಎಂ ಫಸ್ಟ್ ರಿಯಾಕ್ಷನ್
ಗುಂಡೇಟಿಗೆ ಕಾಂಗ್ರೆಸ್ ಕಾರ್ಯಕರ್ತ ಸಾವು: ಸಿಎಂ ಫಸ್ಟ್ ರಿಯಾಕ್ಷನ್
ಬೈಕ್‌ನಲ್ಲಿ ಬಂದು ಕ್ಷಣಾರ್ಧದಲ್ಲಿ ಮೊಬೈಲ್ ಕಿತ್ತು ಪರಾರಿ!
ಬೈಕ್‌ನಲ್ಲಿ ಬಂದು ಕ್ಷಣಾರ್ಧದಲ್ಲಿ ಮೊಬೈಲ್ ಕಿತ್ತು ಪರಾರಿ!
ಗಣಿದಣಿಗೆ ಭರತ್​​ ರೆಡ್ಡಿ ಓಪನ್​ ಚಾಲೆಂಜ್​​: 'ಕೈ​​' ಶಾಸಕ ಹೇಳಿದ್ದೇನು?
ಗಣಿದಣಿಗೆ ಭರತ್​​ ರೆಡ್ಡಿ ಓಪನ್​ ಚಾಲೆಂಜ್​​: 'ಕೈ​​' ಶಾಸಕ ಹೇಳಿದ್ದೇನು?
ಸೋನಲ್-ತರುಣ್ ಗೃಹಪ್ರವೇಶ; ಇಲ್ಲಿದೆ ಸುಂದರ ವಿಡಿಯೋ
ಸೋನಲ್-ತರುಣ್ ಗೃಹಪ್ರವೇಶ; ಇಲ್ಲಿದೆ ಸುಂದರ ವಿಡಿಯೋ
ವೇಗವಾಗಿ ಬಂದು ಟೋಲ್ ಬೂತ್​ಗೆ ಗುದ್ದಿದ ಬಸ್, ಭೀಕರ ದೃಶ್ಯ ಸಿಸಿಟಿವಿಲಿ ಸೆರೆ
ವೇಗವಾಗಿ ಬಂದು ಟೋಲ್ ಬೂತ್​ಗೆ ಗುದ್ದಿದ ಬಸ್, ಭೀಕರ ದೃಶ್ಯ ಸಿಸಿಟಿವಿಲಿ ಸೆರೆ
ಜನಾರ್ದನ ರೆಡ್ಡಿ ಮನೆ ಮುಂದಿನ ಸಂಘರ್ಷದ ಭೀಕರತೆ ಬಿಚ್ಚಿಟ್ಟ ವಿಡಿಯೋ
ಜನಾರ್ದನ ರೆಡ್ಡಿ ಮನೆ ಮುಂದಿನ ಸಂಘರ್ಷದ ಭೀಕರತೆ ಬಿಚ್ಚಿಟ್ಟ ವಿಡಿಯೋ
ಮೋಸದಿಂದ ಕೊನೆಯ ಕ್ಯಾಪ್ಟನ್ ಆದ್ರಾ ಧನುಷ್? ಬಿಗ್ ಬಾಸ್ ಪ್ರಶ್ನೆ
ಮೋಸದಿಂದ ಕೊನೆಯ ಕ್ಯಾಪ್ಟನ್ ಆದ್ರಾ ಧನುಷ್? ಬಿಗ್ ಬಾಸ್ ಪ್ರಶ್ನೆ
ಗಿಲ್ಲಿ ನಟ ಬರೆದು ಹಾಡಿದ ರ್ಯಾಪ್ ಸಾಂಗ್ ಪೂರ್ಣ ವಿಡಿಯೋ ಇಲ್ಲಿದೆ
ಗಿಲ್ಲಿ ನಟ ಬರೆದು ಹಾಡಿದ ರ್ಯಾಪ್ ಸಾಂಗ್ ಪೂರ್ಣ ವಿಡಿಯೋ ಇಲ್ಲಿದೆ