Retirement: ಡಿಸಿಎಂ ಡಿ.ಕೆ. ಶಿವಕುಮಾರ್ ಇದ್ದಕ್ಕಿದ್ದಂತೆ ರಾಜಕೀಯ ನಿವೃತ್ತಿ ಮಾತನ್ನಾಡಿದ್ದೇಕೆ?
DCM D.K. Shivakumar: ತಮ್ಮ ವಿರುದ್ದದ ಕಮಿಷನ್ ಆರೋಪ ವಿಚಾರವಾಗಿ ಮಾತನಾಡಿದ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ತಮ್ಮ ಮೇಲಿನ ಆರೋಪ ಸಾಬೀತಾದ್ರೆ ರಾಜಕೀಯ ನಿವೃತ್ತಿಯಾಗುವೆ. ನಾನು 10-15 % ಕಮಿಷನ್ ಕೇಳಿದ್ದರೆ ಇವತ್ತೇ ರಾಜಕೀಯ ನಿವೃತ್ತಿ ತೆಗೆದುಕೊಳ್ಳುವೆ ಎಂದು ಮಾಜಿ ಸಿಎಂ ಬೊಮ್ಮಾಯಿ, ಆರ್.ಅಶೋಕ್ ನಿವೃತ್ತಿ ಆಗ್ತಾರಾ? ಎಂದು ಬೆಂಗಳೂರಿನಲ್ಲಿ ಸವಾಲ್ ಹಾಕಿದ್ದಾರೆ.
ತಮ್ಮ ವಿರುದ್ದದ ಕಮಿಷನ್ ಆರೋಪ (Contractor, Commission) ವಿಚಾರವಾಗಿ ಮಾತನಾಡಿದ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ (DCM D.K. Shivakumar) ಅವರು ತಮ್ಮ ಮೇಲಿನ ಆರೋಪ ಸಾಬೀತಾದ್ರೆ ರಾಜಕೀಯ ನಿವೃತ್ತಿಯಾಗುವೆ. ನಾನು 10-15 % ಕಮಿಷನ್ ಕೇಳಿದ್ದರೆ ಇವತ್ತೇ ರಾಜಕೀಯ ನಿವೃತ್ತಿ (Retirement) ತೆಗೆದುಕೊಳ್ಳುವೆ ಎಂದು ಮಾಜಿ ಸಿಎಂ ಬೊಮ್ಮಾಯಿ, ಆರ್.ಅಶೋಕ್ ನಿವೃತ್ತಿ ಆಗ್ತಾರಾ? ಎಂದು ಬೆಂಗಳೂರಿನಲ್ಲಿ ಸವಾಲ್ ಹಾಕಿದ್ದಾರೆ.
ಕಾಮಗಾರಿಗಳ ಬಗ್ಗೆ ತನಿಖೆ ಮಾಡಿ ಎಂದು ನಾನಾ ನಾಯಕರು ಮನವಿ ಮಾಡಿದ್ದರು. ಕೆಲಸ ಮಾಡಿದವರಿಗೆ ಈ ಹಿಂದೆ ಏಕೆ ಬಿಜೆಪಿಯವರು ಬಿಲ್ ಕೊಟ್ಟಿಲ್ಲ? ಗುತ್ತಿಗೆದಾರರು ಯಾರಿಗೆ ಎಷ್ಟು ಕೊಟ್ಟಿದ್ದಾರೆ ಎಂಬುದನ್ನೆಲ್ಲಾ ಈಗ ಚರ್ಚೆ ಮಾಡಲು ಹೋಗಲ್ಲ. ಆರ್ .ಅಶೋಕ್ ಮಾತನಾಡಿದ್ದನ್ನು ನೋಡಿದ್ದೇನೆ. ಒಂದೂ ಕಾಲು ಲಕ್ಷ ವೋಟ್ನಲ್ಲಿ ಸೋತಿದ್ದಾನೆ ಇನ್ನೇನು ಆಗಬೇಕು? ಎಂದು ಶಾಸಕ ಆರ್. ಅಶೋಕ್ ವಿರುದ್ಧ ಏಕವಚನದಲ್ಲೇ ಡಿಸಿಎಂ ಡಿಕೆ ಶಿವಕುಮಾರ್ ತೀವ್ರ ವಾಗ್ದಾಳಿ ನಡೆಸಿದರು.
ಅಜ್ಜಯ್ಯನ ಸನ್ನಿಧಿಯಲ್ಲಿ ಪ್ರಮಾಣ ಮಾಡುವಂತೆ ಡಿಕೆ ಶಿವಕುಮಾರ್ ಗೆ ಆಗ್ರಹ ಮಾಡಿರುವ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು ರಸ್ತೆಯಲ್ಲಿ ಹೋಗುವವರ ಪ್ರಶ್ನೆಗಳಿಗೆಲ್ಲ ನಾನು ಉತ್ತರ ಕೊಡುವುದಿಲ್ಲ. ಎಲ್ಲಿ ಉತ್ತರ ಕೊಡಬೇಕೋ ಅಲ್ಲಿ ಕೊಡುತ್ತೇನೆ ಎಂದು ಗುಡುಗಿದರು.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ