ನಮ್ಮ ಅರೋಪಗಳಿಗೆ ಸಾಕ್ಷಿ ಕೇಳುತ್ತಿದ್ದ ಅಶ್ವಥ್ ನಾರಾಯಣ ತಾವು ಮಾಡುತ್ತಿರುವ ಆಪಾದನೆಗಳಿಗೆ ಸಾಕ್ಷಿ ಒದಗಿಸುತ್ತಾರೆಯೇ? ಎಂಬಿ ಪಾಟೀಲ್, ಸಚಿವ

ನಮ್ಮ ಅರೋಪಗಳಿಗೆ ಸಾಕ್ಷಿ ಕೇಳುತ್ತಿದ್ದ ಅಶ್ವಥ್ ನಾರಾಯಣ ತಾವು ಮಾಡುತ್ತಿರುವ ಆಪಾದನೆಗಳಿಗೆ ಸಾಕ್ಷಿ ಒದಗಿಸುತ್ತಾರೆಯೇ? ಎಂಬಿ ಪಾಟೀಲ್, ಸಚಿವ

ಅರುಣ್​ ಕುಮಾರ್​ ಬೆಳ್ಳಿ
|

Updated on: Aug 11, 2023 | 5:26 PM

ವಿರೋಧ ಪಕ್ಷದ ನಾಯಕನಾಗಲು ಯೋಗ್ಯರಿರುವ ಆರ್ ಅಶೋಕ, ಬಸವರಾಜ ಬೊಮ್ಮಾಯಿ, ಮತ್ತು ತಮ್ಮ ಜಿಲ್ಲೆಯವರೇ ಆಗಿರುವ ಬಸನಗೌಡ ಪಾಟೀಲ್ ಯತ್ನಾಳ್ ಮೊದಲಾದವರೆಲ್ಲ ತನ್ನ ಆತ್ಮೀಯರೇ ಎಂದು ಪಾಟೀಲ್ ಹೇಳಿದರು.

ಬೆಂಗಳೂರು: ನಗರದಲ್ಲಿಂದು ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತಾಡಿದ ಸಚಿವ ಎಂಬಿ ಪಾಟೀಲ್ (MB Patil), ಗುತ್ತಿಗೆ ದಾರರ ಆರೋಪಗಲ ಹಿನ್ನೆಲೆಯಲ್ಲಿ ಡಿಕೆ ಶಿವಕುಮಾರ್ (DK Shivakumar) ರಾಜೀನಾಮೆ ನೀಡಬೇಕು ಎಂದಿರುವ ಬಿಜೆಪಿ ಶಾಸಕ ಡಾ ಸಿಎನ್ ಅಶ್ವಥ್ ನಾರಾಯಣ (Dr CN Ashwath Narayan) ಅವರನ್ನು ತರಾಟೆಗೆ ತೆಗೆದುಕೊಂಡರು. ಕಾಂಗ್ರೆಸ್ ನಾಯಕರು ಬಿಜೆಪಿ ಸರ್ಕಾರವನ್ನು 40 ಪರ್ಸೆಂಟ್ ಸರ್ಕಾರ ಅಂತ ಹೇಳಿದಾಗ ಅಶ್ವಥ್ ನಾರಾಯಣ ಸಾಕ್ಷಿ ಕೊಡಿ ಸಾಕ್ಷಿ ಕೊಡಿ ಅನ್ನುತ್ತಿದ್ದರು, ಈಗ ಅವರು ಮಾಡುತ್ತಿರುವ ಅರೋಪಗಳಿಗೆ ಸಾಕ್ಷಿ ಇದೆಯೇ ಅಂತ ಪಾಟೀಲ್ ಕೇಳಿದರು. ಒಬ್ಬ ವಿರೋಧ ಪಕ್ಷದ ನಾಯಕನನ್ನು ಆಯ್ಕೆ ಮಾಡಲು ಅಸಮರ್ಥರಾಗಿರುವ ಬಿಜೆಪಿ ನಾಯಕರು ತಮ್ಮ ಅಸಾಮರ್ಥ್ಯವನ್ನು ಮುಚ್ಚಿಕೊಳ್ಳಲು ಹೀಗೇ ವೃಥಾ ಅರೋಪ ಮಾಡುತ್ತಿದ್ದಾರೆ ಎಂದು ಪಾಟೀಲ್ ಹೇಳಿದರು. ಅಶ್ವಥ್ ನಾರಾಯಣರಿಗೆ ವಿರೋಧ ಪಕ್ಷದ ನಾಯಕನಾಗುವಂತೆ ಸವಾಲೆಸೆದ ಪಾಡೀಲ್, ಅದಕ್ಕೆ ಯೋಗ್ಯರಿರುವ ಆರ್ ಅಶೋಕ, ಬಸವರಾಜ ಬೊಮ್ಮಾಯಿ, ಮತ್ತು ತಮ್ಮ ಜಿಲ್ಲೆಯವರೇ ಆಗಿರುವ ಬಸನಗೌಡ ಪಾಟೀಲ್ ಯತ್ನಾಳ್ ಮೊದಲಾದವರೆಲ್ಲ ತನಗೆ ಆತ್ಮೀಯರೇ ಎಂದರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ