Foxconn: ದೊಡ್ಡಬಳ್ಳಾಪುರದಲ್ಲಿ ಐಫೋನ್ ಫ್ಯಾಕ್ಟರಿಗೆ 300 ಎಕರೆ ಜಾಗ: ಕಾನೂನು ತೊಡಕು ನಿವಾರಣೆ- ಸಚಿವ ಎಂಬಿ ಪಾಟೀಲ್ ಸ್ಪಷ್ಟನೆ

Minister MB Patil Clarification: ದೊಡ್ಡಬಳ್ಳಾಪುರದಲ್ಲಿ ಐಫೋನ್ ಘಟಕ ಸ್ಥಾಪಿಸಲು ಫಾಕ್ಸ್​ಕಾನ್ 300 ಎಕರೆ ಭೂಮಿ ಮಂಜೂರಾತಿಗೆ ಇದ್ದ ಕಾನೂನು ತೊಡಕು ನಿವಾರಣೆಯಾಗಿದೆ ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಸಚಿವ ಎಂಬಿ ಪಾಟೀಲ್ ಹೇಳಿದ್ದಾರೆ.

Foxconn: ದೊಡ್ಡಬಳ್ಳಾಪುರದಲ್ಲಿ ಐಫೋನ್ ಫ್ಯಾಕ್ಟರಿಗೆ 300 ಎಕರೆ ಜಾಗ: ಕಾನೂನು ತೊಡಕು ನಿವಾರಣೆ- ಸಚಿವ ಎಂಬಿ ಪಾಟೀಲ್ ಸ್ಪಷ್ಟನೆ
ಫಾಕ್ಸ್​ಕಾನ್
Follow us
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Jul 14, 2023 | 6:42 PM

ಬೆಂಗಳೂರು, ಜುಲೈ 14: ಐಫೋನ್ ಅಸೆಂಬಲ್ ಮಾಡುವ ಫಾಕ್ಸ್​ಕಾನ್ (Foxconn) ಸಂಸ್ಥೆಗೆ ದೊಡ್ಡಬಳ್ಳಾಪುರದಲ್ಲಿ 300 ಎಕರೆ ಭೂಮಿ ಮಂಜೂರು ಮಾಡುವ ಸಂಬಂಧ ಇದ್ದ ಕಾನೂನು ತೊಡಕನ್ನು ನಿವಾರಿಸಲಾಗಿದೆ. ಜಮೀನನ್ನು ಶೀಘ್ರದಲ್ಲೇ ಫಾಕ್ಸ್​ಕಾನ್​ಗೆ ಹಸ್ತಾಂತರಿಸಲಾಗುವುದು ಎಂದು ಬೃಹತ್ ಹಾಗೂ ಮಧ್ಯಮ ಕೈಗಾರಿಕೆ ಸಚಿವ ಎಂಬಿ ಪಾಟೀಲ್ (MB Patil) ಶುಕ್ರವಾರ (ಜುಲೈ 14) ಹೇಳಿದ್ದಾರೆ. ವಿಧಾನಸಭೆಯಲ್ಲಿ ಶಾಸಕ ಡಿ ಮುನಿರಾಜು ಎತ್ತಿದ ಪ್ರಶ್ನೆಗೆ ಎಂಬಿ ಪಾಟೀಲ್ ಉತ್ತರಿಸುತ್ತಾ ಈ ವಿಚಾರವನ್ನು ಸ್ಪಷ್ಟಪಡಿಸಿದ್ದಾರೆ.

‘ದೇವನಹಳ್ಳಿ ಮತ್ತು ದೊಡ್ಡಬಳ್ಳಾಪುರ ವ್ಯಾಪ್ತಿಯಲ್ಲಿರುವ ಐಟಿಐಆರ್​ನಲ್ಲಿ ಒಟ್ಟು 300 ಎಕರೆ ಜಾಗವನ್ನು ಫಾಕ್ಸ್​ಕಾನ್​ಗೆ ಕೊಡಲಾಗುತ್ತದೆ. ಅಲ್ಲಿ ಆ ಸಂಸ್ಥೆ 8,500 ಕೋಟಿ ರೂ ಹೂಡಿಕೆಯಲ್ಲಿ ತಯಾರಿಕಾ ಘಟಕ ಸ್ಥಾಪಿಸಲಿದೆ. ಜಮೀನು ಹಸ್ತಾಂತರಿಸಿದ ಕೂಡಲೇ ಕಟ್ಟಡ ನಿರ್ಮಾಣ ಕಾರ್ಯವನ್ನು ಆರಂಭಿಸಬಹುದು’ ಎಂದು ಎಂಬಿ ಪಾಟೀಲ್ ಹೇಳಿದ್ದಾರೆ.

ಫಾಕ್ಸ್​ಕಾನ್ ಈ ಹಿಂದೆ ನೀಡಿರುವ ಸುಳಿವಿನ ಪ್ರಕಾರ ಮುಂದಿನ ಏಪ್ರಿಲ್ ತಿಂಗಳಲ್ಲಿ ದೊಡ್ಡಬಳ್ಳಾಪುರದ ಘಟಕದಲ್ಲಿ ಉತ್ಪಾದನೆಯ ಗುರಿ ಇಟ್ಟುಕೊಂಡಿದೆ.

ಇದನ್ನೂ ಓದಿChinese Apps: ಬೆಂಗಳೂರಿನಲ್ಲಿ ದಾಖಲಾದ 25 ಎಫ್​ಐಆರ್​ಗಳ ಜಾಡು ಹಿಡಿದ ಇಡಿ; ಚೀನೀ ಜಾಲದ ಕರ್ಮಕಾಂಡ ಬಯಲು

ದೊಡ್ಡಬಳ್ಳಾಪುರದ ಐಟಿ ಪಾರ್ಕ್​ನಲ್ಲಿ ಸ್ಥಾಪನೆಯಾಗಲಿರುವ ಘಟಕಗಳಲ್ಲಿ ಫಾಕ್ಸ್​ಕಾನ್ ಐಫೋನ್​ಗಳನ್ನು ಅಸೆಂಬಲ್ ಮಾಡಲಿದೆ. 8,500 ಕೋಟಿ ರೂ ಹೂಡಿಕೆಯ ಈ ಘಟಕದಿಂದ 50,000 ಉದ್ಯೋಗಾವಕಾಶ ಸೃಷ್ಟಿಯಾಗುವ ನಿರೀಕ್ಷೆ ಇದೆ.

ಕಳೆದ ಮೂರು ವರ್ಷಗಳಲ್ಲಿ ದೊಡ್ಡಬಳ್ಳಾಪುರ ತಾಲೂಕಿನಲ್ಲಿ 3 ದೊಡ್ಡ ಹಾಗೂ ಮಧ್ಯಮ ಗಾತ್ರ ಕೈಗಾರಿಕೆಗಳು ಸ್ಥಾಪನೆಯಾಗಿವೆ. ಇವುಗಳಿಂದ 110 ಕೋಟಿ ರೂನಷ್ಟು ಹೂಡಿಕೆಯಾಗಿದ್ದು 1,450 ಉದ್ಯೋಗಗಳು ಸೃಷ್ಟಿಯಾಗಿವೆ ಎಂದು ವಿಧಾನಸಭೆಯಲ್ಲಿ ಸಚಿವ ಎಂಬಿ ಪಾಟೀಲ್ ಮಾಹಿತಿ ನೀಡಿದ್ದಾರೆ.

ಇದನ್ನೂ ಓದಿRuPay Card: ಮಾಸ್ಟರ್ ಕಾರ್ಡ್, ವೀಸಾಗಿಂತ ರುಪೇ ಕ್ರೆಡಿಟ್ ಕಾರ್ಡ್ ಯಾಕೆ ಉತ್ತಮ? ಇಲ್ಲಿವೆ ರುಪೇ ಕಾರ್ಡ್​ನ ಅನುಕೂಲತೆಗಳು

ಆದರೆ, ಫಾಕ್ಸ್​ಕಾನ್ ಸಂಸ್ಥೆ ಐಫೋನ್ ಫ್ಯಾಕ್ಟರಿ ಸ್ಥಾಪಿಸಲಿರುವುದು ಬಹಳ ಮಹತ್ವದ ಸಂಗತಿಯಾಗಿದೆ. ಕೋಲಾರದಲ್ಲಿ ಹಲವು ವರ್ಷಗಳಿಂದ ವಿಸ್ಟ್ರಾನ್ ಸಂಸ್ಥೆ ಐಫೋನ್ ಫ್ಯಾಕ್ಟರಿ ನಡೆಸುತ್ತಿದೆ. ವಿಸ್ಟ್ರಾನ್​ನ ಆ ಘಟಕವನ್ನು ಟಾಟಾ ಗ್ರೂಪ್ ಖರೀದಿ ಮಾಡುತ್ತಿದೆ. ರಾಜ್ಯದಲ್ಲಿ, ಅದರಲ್ಲೂ ಬೆಂಗಳೂರಿನ ಸಮೀಪದಲ್ಲೇ ಎರಡು ಐಫೋನ್ ಫ್ಯಾಕ್ಟರಿಗಳು ನಡೆಯುವಂತಾಗುತ್ತದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

‘ನಾನು ಕರ್ನಾಟಕದ ಹುಡುಗಿ’; ಪ್ರೀತಿಯಿಂದ ಕನ್ನಡದಲ್ಲೇ ಮಾತನಾಡಿದ ಶಿಲ್ಪಾ
‘ನಾನು ಕರ್ನಾಟಕದ ಹುಡುಗಿ’; ಪ್ರೀತಿಯಿಂದ ಕನ್ನಡದಲ್ಲೇ ಮಾತನಾಡಿದ ಶಿಲ್ಪಾ
ಅಜ್ಜನ ಜಾತ್ರೆ ಸಂಪನ್ನ: ಭಕ್ತರಲ್ಲಿ ಮೂರು ವಚನ ಕೇಳಿದ ಕೊಪ್ಪಳದ ಗವಿಶ್ರೀ
ಅಜ್ಜನ ಜಾತ್ರೆ ಸಂಪನ್ನ: ಭಕ್ತರಲ್ಲಿ ಮೂರು ವಚನ ಕೇಳಿದ ಕೊಪ್ಪಳದ ಗವಿಶ್ರೀ
ಚಿಟ್ಟಾಣಿ ಆಸೆ ಈಡೇರಿಸಲು ಯಕ್ಷಗಾನದಲ್ಲಿ ಅಭಿನಯಿಸಿದ ನಟಿ ಉಮಾಶ್ರೀ
ಚಿಟ್ಟಾಣಿ ಆಸೆ ಈಡೇರಿಸಲು ಯಕ್ಷಗಾನದಲ್ಲಿ ಅಭಿನಯಿಸಿದ ನಟಿ ಉಮಾಶ್ರೀ
Daily Devotional: ಮಾಘ ಸ್ನಾನದ ಹಿಂದಿನ ರಹಸ್ಯ ಹಾಗೂ ಮಹತ್ವ ತಿಳಿಯಿರಿ
Daily Devotional: ಮಾಘ ಸ್ನಾನದ ಹಿಂದಿನ ರಹಸ್ಯ ಹಾಗೂ ಮಹತ್ವ ತಿಳಿಯಿರಿ
Daily Horoscope: ಈ ರಾಶಿಯವರಿಗೆ ಇಂದು ಆರ್ಥಿಕವಾಗಿ ಲಾಭವಾಗಲಿದೆ
Daily Horoscope: ಈ ರಾಶಿಯವರಿಗೆ ಇಂದು ಆರ್ಥಿಕವಾಗಿ ಲಾಭವಾಗಲಿದೆ
ಪ್ರಿಯಕರನೊಂದಿಗೆ ಹೆಂಡತಿ ಹೋಗುತ್ತಿದ್ದ ಕಾರಿನ ಮೇಲೆ ಹತ್ತಿ ಕುಳಿತ ಗಂಡ!
ಪ್ರಿಯಕರನೊಂದಿಗೆ ಹೆಂಡತಿ ಹೋಗುತ್ತಿದ್ದ ಕಾರಿನ ಮೇಲೆ ಹತ್ತಿ ಕುಳಿತ ಗಂಡ!
ಅಯ್ಯೋ.. ಸಿಸಿಟಿವಿ ರಿಪೇರಿ ಮಾಡಲು ಬಂದಿದ್ದವನ ವಜ್ರದ ಉಂಗುರ ಬಿಡದ ಖದೀಮರು
ಅಯ್ಯೋ.. ಸಿಸಿಟಿವಿ ರಿಪೇರಿ ಮಾಡಲು ಬಂದಿದ್ದವನ ವಜ್ರದ ಉಂಗುರ ಬಿಡದ ಖದೀಮರು
ಗಾಂಧಿ ಭಾರತ ಒಂದು ಸರ್ಕಾರೀ ಕಾರ್ಯಕ್ರಮ, ಎಲ್ಲರೂ ಭಾಗವಹಿಸಬಹುದು: ಶಿವಕುಮಾರ್
ಗಾಂಧಿ ಭಾರತ ಒಂದು ಸರ್ಕಾರೀ ಕಾರ್ಯಕ್ರಮ, ಎಲ್ಲರೂ ಭಾಗವಹಿಸಬಹುದು: ಶಿವಕುಮಾರ್
ಮಹಾಕುಂಭದಲ್ಲಿ ಹೂವಿನ ಹಾರ ಮಾರುವ ಯುವತಿ ಸೌಂದರ್ಯಕ್ಕೆ ಫ್ಯಾನ್ ಆಗದವರೇ ಇಲ್ಲ
ಮಹಾಕುಂಭದಲ್ಲಿ ಹೂವಿನ ಹಾರ ಮಾರುವ ಯುವತಿ ಸೌಂದರ್ಯಕ್ಕೆ ಫ್ಯಾನ್ ಆಗದವರೇ ಇಲ್ಲ
ನಾನು ನಿಷ್ಠಾವಂತ ಕಾರ್ಯಕರ್ತ, ಸತೀಶ್ ಜಾರಕಿಹೊಳಿ ಹಿಂಬಾಲಕನಲ್ಲ: ಕಾರ್ಯಕರ್ತ
ನಾನು ನಿಷ್ಠಾವಂತ ಕಾರ್ಯಕರ್ತ, ಸತೀಶ್ ಜಾರಕಿಹೊಳಿ ಹಿಂಬಾಲಕನಲ್ಲ: ಕಾರ್ಯಕರ್ತ