AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Flipkart Axis Credit Card: ಫ್ಲಿಪ್‌ಕಾರ್ಟ್ ಆಕ್ಸಿಸ್ ಬ್ಯಾಂಕ್ ಕ್ರೆಡಿಟ್ ಕಾರ್ಡ್​ ಕ್ಯಾಷ್​​ಬ್ಯಾಕ್, ರಿವಾರ್ಡ್ಸ್​ಗೆ ಕತ್ತರಿ!

ಆಕ್ಸಿಸ್ ಬ್ಯಾಂಕ್ ರಿಸರ್ವ್, ಆಕ್ಸಿಸ್ ಬ್ಯಾಂಕ್ ಸೆಲೆಕ್ಟ್, ಆಕ್ಸಿಸ್ ಬ್ಯಾಂಕ್ ಪ್ರಿವಿಲೇಜ್ ಮತ್ತು ಆಕ್ಸಿಸ್ ಬ್ಯಾಂಕ್ ಮೈ ಝೋನ್ ಕಾರ್ಡ್‌ಗಳಂತಹ ಇತರ ಕ್ರೆಡಿಟ್ ಕಾರ್ಡ್‌ಗಳಿಗೆ ಕೂಡ ಕ್ಯಾಷ್​​​ಬ್ಯಾಕ್ ಮತ್ತು ಇತರ ಆಫರ್​​​ಗಳನ್ನು ಕಡಿಮೆ ಮಾಡಲಾಗಿದೆ ಎಂದು ವರದಿಯಾಗಿದೆ.

Flipkart Axis Credit Card: ಫ್ಲಿಪ್‌ಕಾರ್ಟ್ ಆಕ್ಸಿಸ್ ಬ್ಯಾಂಕ್ ಕ್ರೆಡಿಟ್ ಕಾರ್ಡ್​ ಕ್ಯಾಷ್​​ಬ್ಯಾಕ್, ರಿವಾರ್ಡ್ಸ್​ಗೆ ಕತ್ತರಿ!
ಸಾಂದರ್ಭಿಕ ಚಿತ್ರ
ಗಣಪತಿ ಶರ್ಮಾ
|

Updated on:Jul 14, 2023 | 10:45 PM

Share

ನವದೆಹಲಿ, ಜುಲೈ 14: ಫ್ಲಿಪ್‌ಕಾರ್ಟ್ ಆಕ್ಸಿಸ್ ಬ್ಯಾಂಕ್ ಕ್ರೆಡಿಟ್ ಕಾರ್ಡ್ (Flipkart Axis Credit Card) ಬಳಕೆದಾರರಿಗೆ ಬ್ಯಾಂಕ್​ನಿಂದ ಕಹಿ ಸುದ್ದಿ ಬಂದಿದೆ. ಆಗಸ್ಟ್​ನಿಂದ ಈ ಖಾಸಗಿ ವಲಯದ ಬ್ಯಾಂಕ್ ಫ್ಲಿಪ್‌ಕಾರ್ಟ್ ಆಕ್ಸಿಸ್ ಬ್ಯಾಂಕ್ ಕ್ರೆಡಿಟ್ ಕಾರ್ಡ್‌ನಲ್ಲಿ ಕ್ಯಾಶ್‌ಬ್ಯಾಕ್ ಮತ್ತು ರಿವಾರ್ಡ್ ಪಾಯಿಂಟ್‌ಗಳನ್ನು (Cashback and Reward Points) ಕಡಿಮೆ ಮಾಡುವುದಾಗಿ ಘೋಷಿಸಿದೆ. ಫ್ಲಿಪ್‌ಕಾರ್ಟ್ ಆಕ್ಸಿಸ್ ಬ್ಯಾಂಕ್ ಕ್ರೆಡಿಟ್ ಕಾರ್ಡ್‌ನ ನಿಯಮಗಳು ಮತ್ತು ಷರತ್ತುಗಳಲ್ಲಿನ ಪರಿಷ್ಕರಣೆಯು 2023 ರ ಆಗಸ್ಟ್ 12ರಿಂದ ಜಾರಿಗೆ ಬರಲಿದೆ ಎಂದು ಬ್ಯಾಂಕ್​ ತಿಳಿಸಿರುವುದಾಗಿ ವರದಿಯಾಗಿದೆ.

2023 ರ ಆಗಸ್ಟ್ 12ರಿಂದ ಫ್ಲಿಪ್‌ಕಾರ್ಟ್ ಆಕ್ಸಿಸ್ ಬ್ಯಾಂಕ್ ಕ್ರೆಡಿಟ್ ಕಾರ್ಡ್‌ ಮೂಲಕ ಮಿಂತ್ರಾ, ಫ್ಲೈಟ್ ಮತ್ತು ಹೋಟೆಲ್ ಪಾವತಿಗಳ ವಹಿವಾಟಿಗೆ ಶೇ 1.5 ರ ಕ್ಯಾಷ್​ಬ್ಯಾಕ್ ಮಾತ್ರ ಇರಲಿದೆ. ಆಕ್ಸಿಸ್ ಬ್ಯಾಂಕ್ ಹೇಳಿಕೆಯ ಪ್ರಕಾರ, ಈ ಹಿಂದೆ ಗ್ರಾಹಕರು ಫ್ಲಿಪ್‌ಕಾರ್ಟ್ ಘಟಕಗಳಲ್ಲಿ ಖರ್ಚು ಮಾಡಿದ ಮೊತ್ತದ ಮೇಲೆ ಶೇಕಡಾ 5 ರಷ್ಟು ಕ್ಯಾಷ್​​ಬ್ಯಾಕ್ ಪಡೆಯುತ್ತಿದ್ದರು ಎಂದು ಹಲವು ಮಾಧ್ಯಮಗಳು ವರದಿ ಮಾಡಿವೆ.

ಸರ್ಕಾರಿ ಸೇವೆಗಳಿಗೆ ಮಾಡಿದ ಪಾವತಿಗಿಲ್ಲ ಕ್ಯಾಷ್​​ಬ್ಯಾಕ್

ಸರ್ಕಾರಿ ಸೇವೆಗಳಿಗೆ (MCCs – 9399) ಮಾಡಿದ ಪಾವತಿಗಳು ಕ್ಯಾಶ್‌ಬ್ಯಾಕ್‌ಗೆ ಅರ್ಹವಾಗಿರುವುದಿಲ್ಲ ಎಂದು ಬ್ಯಾಂಕ್ ತಿಳಿಸಿದೆ. ಅದೇ ರೀತಿ ಇಂಧನ ವೆಚ್ಚಗಳು, ಫ್ಲಿಪ್‌ಕಾರ್ಟ್ ಮತ್ತು ಮಿಂತ್ರಾದಲ್ಲಿ ಉಡುಗೊರೆ ಕಾರ್ಡ್‌ಗಳ ಖರೀದಿ, ಇಎಂಐ ವಹಿವಾಟುಗಳು, ವಸ್ತುಗಳ ಖರೀದಿ ನಂತರ ಮೊತ್ತವನ್ನು ಇಎಂಐಗೆ ಪರಿವರ್ತಿಸುವುದು, ವ್ಯಾಲೆಟ್ ಲೋಡಿಂಗ್ ವಹಿವಾಟುಗಳು, ನಗದು ಮುಂಗಡಗಳು, ಬಾಡಿಗೆ ಪಾವತಿಗಳು, ಆಭರಣಗಳ ಖರೀದಿ, ವಿಮಾ ಸೇವೆಗಳು, ಉಪಯುಕ್ತತೆಗಳು, ಶೈಕ್ಷಣಿಕ ಸೇವೆಗಳ ಮೇಲೆ ಕ್ಯಾಷ್​​​ಬ್ಯಾಕ್ ಮುಂದೆ ಇಲ್ಲವಾಗಲಿದೆ. ಬಾಕಿಗಳ ಪಾವತಿ, ಕಾರ್ಡ್ ಶುಲ್ಕಗಳ ಪಾವತಿ ಮತ್ತು ಇತರ ಕಾರ್ಡ್ ಶುಲ್ಕಗಳು ಕೂಡ ಕ್ಯಾಷ್​​​ಬ್ಯಾಕ್​ ಸೌಲಭ್ಯದಿಂದ ವಂಚಿತವಾಗಲಿವೆ.

ಇದನ್ನೂ ಓದಿ: Financial Life Tips: ಖರ್ಚು, ಉಳಿತಾಯ, ಸಾಲಕ್ಕೆ ಹಣಕಾಸು ಸೂತ್ರ ತಿಳಿದಿರಿ; ಜೀವನಪೂರ್ತಿcashb ನಿಶ್ಚಿಂತೆಯಿಂದಿರಿ

ಕೆಳಗಿನ ಎಂಸಿಸಿಗಳನ್ನು (Merchant Category Codes) ಕ್ಯಾಷ್​​ಬ್ಯಾಕ್ ಅರ್ಹತೆಯಿಂದ ಹೊರಗಿಡಲಾಗಿದೆ: 4814, 4816, 4899, 4900, 5541, 5542, 5944, 5960, 5983, 6011, 6012, 6051, 6301, 623, 653, 653, 8241, 8244, 8249, 8299 ಮತ್ತು 9399.

ಗಮನಿಸಿ: ಪ್ರತಿ ವರ್ಗದ ವಹಿವಾಟುಗಳನ್ನು ಆಯಾ ನೆಟ್​ವರ್ಕ್​​​ಗಳಿಂದ ವ್ಯಾಖ್ಯಾನಿಸಲ್ಪಟ್ಟ (ಉದಾಹರಣೆಗೆ; ವೀಸಾ, ಮಾಸ್ಟರ್‌ಕಾರ್ಡ್ ಮತ್ತು ರುಪೇ) ಮರ್ಚೆಂಟ್ ಕೆಟಗರಿ ಕೋಡ್‌ಗಳ ಮೂಲಕ ಗುರುತಿಸಲಾಗುತ್ತದೆ.

ವಾರ್ಷಿಕ ಶುಲ್ಕ ವಿನಾಯಿತಿ ಷರತ್ತಿನಲ್ಲಿಯೂ ಬದಲಾವಣೆ

3,50,000 ರೂ.ಗಿಂತ ಹೆಚ್ಚಿನ ವಾರ್ಷಿಕ ಖರ್ಚಿನ ಮೇಲೆ ಕಾರ್ಡ್‌ನಲ್ಲಿ ವಿಧಿಸಲಾದ ವಾರ್ಷಿಕ ಶುಲ್ಕವನ್ನು ಮನ್ನಾ ಮಾಡಲಾಗುತ್ತದೆ. ಬಾಡಿಗೆ ವಹಿವಾಟುಗಳು (MCC 6513) ಮತ್ತು ವಾಲೆಟ್ ಲೋಡ್ ವಹಿವಾಟುಗಳು (MCC 6540) ವಾರ್ಷಿಕ ಶುಲ್ಕ ವಿನಾಯಿತಿಯನ್ನು ಪಡೆಯುವಲ್ಲಿ ಪರಿಗಣಿಸಲಾಗುವ ಖರ್ಚುಗಳಿಗೆ ಅರ್ಹವಾಗಿರುವುದಿಲ್ಲ. ಈ ಹಿಂದೆ, ಫ್ಲಿಪ್‌ಕಾರ್ಟ್ ಆಕ್ಸಿಸ್ ಬ್ಯಾಂಕ್ ಕ್ರೆಡಿಟ್ ಕಾರ್ಡ್‌ನ ವಾರ್ಷಿಕ ಶುಲ್ಕವನ್ನು ಮನ್ನಾ ಮಾಡುವ ಮಿತಿ 2 ಲಕ್ಷ ರೂ. ಇತ್ತು.

ಇತರ ಕ್ರೆಡಿಟ್​ ಕಾರ್ಡ್ ಆಫರ್​ಗಳಿಗೂ ಕತ್ತರಿ

ಆಕ್ಸಿಸ್ ಬ್ಯಾಂಕ್ ರಿಸರ್ವ್, ಆಕ್ಸಿಸ್ ಬ್ಯಾಂಕ್ ಸೆಲೆಕ್ಟ್, ಆಕ್ಸಿಸ್ ಬ್ಯಾಂಕ್ ಪ್ರಿವಿಲೇಜ್ ಮತ್ತು ಆಕ್ಸಿಸ್ ಬ್ಯಾಂಕ್ ಮೈ ಝೋನ್ ಕಾರ್ಡ್‌ಗಳಂತಹ ಇತರ ಕ್ರೆಡಿಟ್ ಕಾರ್ಡ್‌ಗಳಿಗೆ ಕೂಡ ಕ್ಯಾಷ್​​​ಬ್ಯಾಕ್ ಮತ್ತು ಇತರ ಆಫರ್​​​ಗಳನ್ನು ಕಡಿಮೆ ಮಾಡಲಾಗಿದೆ ಎಂದು ವರದಿಯಾಗಿದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Published On - 8:53 pm, Fri, 14 July 23

Follow Us
ಗಣಪತಿ ಶರ್ಮಾ
ಗಣಪತಿ ಶರ್ಮಾ

ಕೇರಳದ ಕಾಸರಗೋಡು ಮೂಲದ ಕನ್ನಡಿಗ, ಪ್ರಸ್ತುತ ಬೆಂಗಳೂರಿನಲ್ಲಿ ವಾಸ. 14 ವರ್ಷಗಳಿಂದ ಪತ್ರಕರ್ತನಾಗಿ ಕಾರ್ಯನಿರ್ವಹಿಸುತ್ತಿದ್ದು, ವರದಿಗಾರಿಕೆ ಅನುಭವದ ಜತೆಗೆ ಬರವಣಿಗೆ, ಅನುವಾದದಲ್ಲಿ ಆಸಕ್ತಿ ಮತ್ತು ಪರಿಣತಿ. ಪ್ರಚಲಿತ ವಿದ್ಯಮಾನಗಳು, ರಾಜ್ಯ-ರಾಷ್ಟ್ರ ರಾಜಕೀಯ, ಉದ್ಯಮ, ವೈಯಕ್ತಿಕ ಹಣಕಾಸು ವಿಚಾರಗಳ ಬರವಣಿಗೆಯ ಬಗ್ಗೆ ಹೆಚ್ಚಿನ ಆಸಕ್ತಿ, ಒಲವು. ವಿಜಯ ಕರ್ನಾಟಕ, ಸಮಯ ನ್ಯೂಸ್ ಟಿವಿ, ವಿಜಯವಾಣಿ, ಪ್ರಜಾವಾಣಿ ಪತ್ರಿಕೆಗಳು ಹಾಗೂ ಡಿಜಿಟಲ್ ಮೀಡಿಯಾದಲ್ಲಿ ಕೆಲಸ ಮಾಡಿದ ಅನುಭವ. 2022 ರಿಂದ ಟಿವಿ9 ಕನ್ನಡ ಡಿಜಿಟಲ್​ನಲ್ಲಿ ಕಾರ್ಯನಿರ್ವಹಣೆ.

Read More
ಕಬ್ಬು ಬೆಳಗಾರರ ಪ್ರತಿಭಟನೆ ಬೆನ್ನಲ್ಲೇ ಅ.12ರಂದು ದಿಲ್ಲಿಯಲ್ಲಿ ಸಭೆ
ಕಬ್ಬು ಬೆಳಗಾರರ ಪ್ರತಿಭಟನೆ ಬೆನ್ನಲ್ಲೇ ಅ.12ರಂದು ದಿಲ್ಲಿಯಲ್ಲಿ ಸಭೆ
ಮೂರೂ ಪಕ್ಷಗಳಿಂದ ಲಿಂಗಾಯತ ಸಮುದಾಯಕ್ಕೆ ಮಣೆ: 2028ಕ್ಕೆ ಮಾಸ್ಟರ್ ಪ್ಲಾನ್
ಮೂರೂ ಪಕ್ಷಗಳಿಂದ ಲಿಂಗಾಯತ ಸಮುದಾಯಕ್ಕೆ ಮಣೆ: 2028ಕ್ಕೆ ಮಾಸ್ಟರ್ ಪ್ಲಾನ್
‘ಪಟ್ಟ ಕಷ್ಟ ಅಷ್ಟಿಷ್ಟಲ್ಲ’, ‘ಪ್ರೇಮದ ಊರಲಿ’ ಯಶಸ್ಸಿನ ಬಗ್ಗೆ ನಾಯಕ ಶ್ರೀರಾಮ
‘ಪಟ್ಟ ಕಷ್ಟ ಅಷ್ಟಿಷ್ಟಲ್ಲ’, ‘ಪ್ರೇಮದ ಊರಲಿ’ ಯಶಸ್ಸಿನ ಬಗ್ಗೆ ನಾಯಕ ಶ್ರೀರಾಮ
ಬಿಗ್​​ಬಾಸ್ ಮನೆಯಲ್ಲಿ ಆಸಿಯಾ, ಯಶಸ್​​ ‘ಮಿಡ್ ನೈಟ್ ಆಫರೇಷನ್’
ಬಿಗ್​​ಬಾಸ್ ಮನೆಯಲ್ಲಿ ಆಸಿಯಾ, ಯಶಸ್​​ ‘ಮಿಡ್ ನೈಟ್ ಆಫರೇಷನ್’
ಎಸ್​​ಐಆರ್ ವೇಳೆ ಮೈಸೂರಿನಲ್ಲಿ ಫಾರ್ಮ್​​ 7 ದುರ್ಬಳಕೆ: ಕೇಸ್ ಬುಕ್
ಎಸ್​​ಐಆರ್ ವೇಳೆ ಮೈಸೂರಿನಲ್ಲಿ ಫಾರ್ಮ್​​ 7 ದುರ್ಬಳಕೆ: ಕೇಸ್ ಬುಕ್
ಕಡಿಮೆ ಬಜೆಟ್, ಸೂಪರ್ ಕಲೆಕ್ಷನ್: ಪ್ರೇಮದ ಊರಲಿ ಬಗ್ಗೆ ಚಿತ್ರಮಂದಿರದವರ ಮಾತು
ಕಡಿಮೆ ಬಜೆಟ್, ಸೂಪರ್ ಕಲೆಕ್ಷನ್: ಪ್ರೇಮದ ಊರಲಿ ಬಗ್ಗೆ ಚಿತ್ರಮಂದಿರದವರ ಮಾತು
ಚೆನಾಬ್- ಅಂಜಿ ಸೇತುವೆ ಮೇಲೆ 100 ಕಿ.ಮೀ. ವೇಗದಲ್ಲಿ ಚಲಿಸಿದ ವಂದೇ ಭಾರತ್
ಚೆನಾಬ್- ಅಂಜಿ ಸೇತುವೆ ಮೇಲೆ 100 ಕಿ.ಮೀ. ವೇಗದಲ್ಲಿ ಚಲಿಸಿದ ವಂದೇ ಭಾರತ್
ಅಲ್ಪಸಂಖ್ಯಾತ ಮತದಾರರ ವೋಟ್ ಡಿಲಿಟ್, BJP ಮುಖಂಡರ ಮೇಲೆ FIR ದಾಖಲು
ಅಲ್ಪಸಂಖ್ಯಾತ ಮತದಾರರ ವೋಟ್ ಡಿಲಿಟ್, BJP ಮುಖಂಡರ ಮೇಲೆ FIR ದಾಖಲು
ದರ್ಶನ್ ಕೇಸ್: ಮಾಫಿ ಸಾಕ್ಷಿ ವಿಡಿಯೋ ವೈರಲ್ ಮಾಡಿದವರಿಗೆ ಕೋರ್ಟ್ ಶಾಕ್
ದರ್ಶನ್ ಕೇಸ್: ಮಾಫಿ ಸಾಕ್ಷಿ ವಿಡಿಯೋ ವೈರಲ್ ಮಾಡಿದವರಿಗೆ ಕೋರ್ಟ್ ಶಾಕ್
RSS ಕಚೇರಿಯಲ್ಲೇ ಫಾರ್ಮ್-7 ಮುದ್ರಣ: ತನ್ವೀರ್ ಸೇಠ್ ಆರೋಪ
RSS ಕಚೇರಿಯಲ್ಲೇ ಫಾರ್ಮ್-7 ಮುದ್ರಣ: ತನ್ವೀರ್ ಸೇಠ್ ಆರೋಪ