Trade Deficit: ಹಣದುಬ್ಬರ ಬಳಿಕ, ಈಗ ವ್ಯಾಪಾರ ಕೊರತೆಯೂ ಜೂನ್​ನಲ್ಲಿ ಕಡಿಮೆ

Exports and Imports Down In June: ಭಾರತದ ರಫ್ತು ಮತ್ತು ಆಮದು ನಡುವಿನ ಅಂತರವಾದ ಟ್ರೇಡ್ ಡೆಫಿಸಿಟ್ 2023ರ ಜೂನ್ ತಿಂಗಳಲ್ಲಿ 20.13 ಬಿಲಿಯನ್ ಡಾಲರ್​ಗೆ ಇಳಿದಿರುವುದು ಸರ್ಕಾರ ಬಿಡುಗಡೆ ಮಾಡಿದ ಅಂಕಿ ಅಂಶಗಳಿದ ತಿಳಿದುಬಂದಿದೆ.

Trade Deficit: ಹಣದುಬ್ಬರ ಬಳಿಕ, ಈಗ ವ್ಯಾಪಾರ ಕೊರತೆಯೂ ಜೂನ್​ನಲ್ಲಿ ಕಡಿಮೆ
ವ್ಯಾಪಾರ ಕೊರತೆ
Follow us
ಸುಗ್ಗನಹಳ್ಳಿ ವಿಜಯಸಾರಥಿ
|

Updated on:Jul 14, 2023 | 6:14 PM

ನವದೆಹಲಿ, ಜುಲೈ 14: ಭಾರತದ ಸರಕು ವ್ಯಾಪಾರ ಅಂತರ ಅಥವಾ ವ್ಯಾಪಾರ ಕೊರತೆ (Merchandise Trade Deficit) ಕಡಿಮೆಗೊಂಡಿದೆ. ಮೇ ತಿಂಗಳಲ್ಲಿ 22.1 ಬಿಲಿಯನ್ ಡಾಲರ್ ಇದ್ದ ಮರ್ಚಾಂಡೈಸ್ ಟ್ರೇಡ್ ಡೆಫಿಸಿಟ್ ಜೂನ್ ತಿಂಗಳಲ್ಲಿ 20.13 ಬಿಲಿಯನ್ ಡಾಲರ್​ಗೆ ಇಳಿಮುಖವಾಗಿದೆ. ಮೇ ತಿಂಗಳಿಗೆ ಹೋಲಿಸಿದರೆ ಜೂನ್ ತಿಂಗಳಲ್ಲಿ ಸರಕುಗಳ ಆಮದು ಮತ್ತು ರಫ್ತು (Export and Import) ಎರಡೂ ಕಡಿಮೆ ಆಗಿವೆ. ಅದರೆ, ರಫ್ತಿಗಿಂತ ಆಮದು ಹೆಚ್ಚು ಇಳಿದಿದೆ. ಹೀಗಾಗಿ, ವ್ಯಾಪಾರ ಕೊರತೆ ಕಡಿಮೆ ಆಗಿದೆ. ಆದರೆ ಆರ್ಥಿಕ ತಜ್ಞರು ಜೂನ್ ತಿಂಗಳಲ್ಲಿ ಟ್ರೇಡ್ ಡೆಫಿಸಿಟ್ ಇನ್ನೂ ಹೆಚ್ಚು ಇಳಿಕೆಯಾಗಬಹುದು ಎಂದು ಎಣಿಸಿದ್ದರು.

ಟ್ರೇಡ್ ಡೆಫಿಸಿಟ್ ಎಂದರೇನು?

ವ್ಯಾಪಾರ ಕೊರತೆ ಎಂದರೆ ಹೊರಹೋಗುವ ಮತ್ತು ಒಳಬರುವ ವಸ್ತುಗಳ ಮೌಲ್ಯದಲ್ಲಿರುವ ಅಂತರ. ರಫ್ತಾದ ವಸ್ತುಗಳೆಷ್ಟು ಮತ್ತು ಆಮದಾದ ವಸ್ತುಗಳು ಎಷ್ಟು ಎಂಬ ಲೆಕ್ಕವೇ ಟ್ರೇಡ್ ಡೆಫಿಸಿಟ್. ರಫ್ತಿಗಿಂತ ಆಮದು ಹೆಚ್ಚಾದರೆ ಅದಕ್ಕೆ ಟ್ರೇಡ್ ಡೆಫಿಸಿಟ್ ಎನ್ನುವುದು.

ಮೇ, ಜೂನ್ ತಿಂಗಳಲ್ಲಿ ಆಮದು ರಫ್ತು ಎಷ್ಟು?

2023ರ ಜೂನ್ ತಿಂಗಳು: ರಫ್ತು 32.97 ಬಿಲಿಯನ್ ಡಾಲರ್; ಆಮದು 53.10 ಬಿಲಿಯನ್ ಡಾಲರ್

ಮೇ ತಿಂಗಳು: ರಫ್ತು 34.98 ಬಿಲಿಯನ್ ಡಾಲರ್; ಆಮದು 57.10 ಬಿಲಿಯನ್ ಡಾಲರ್

ಇದನ್ನೂ ಓದಿWholesale Inflation: ಸಗಟು ಹಣದುಬ್ಬರ ಮೈನಸ್ 4.12ಪ್ರತಿಶತ; 2015ರ ಬಳಿಕ ಅತಿಕಡಿಮೆ ಮಟ್ಟ

ಇನ್ನು ರಫ್ತಿನಲ್ಲಿ ಸರ್ವಿಸ್ ಸೆಕ್ಟರ್ ಅನ್ನೂ ಒಳಗೊಂಡರೆ ಜೂನ್ ತಿಂಗಳಲ್ಲಿ ಆದ ರಫ್ತು 60.09 ಬಿಲಿಯನ್ ಡಾಲರ್ ಇದೆ. ಜೂನ್ ತಿಂಗಳಲ್ಲಿ ರಫ್ತು ಹೆಚ್ಚಳ ಕಂಡ ಸರಕುಗಳಲ್ಲಿ ಎಲೆಕ್ಟ್ರಾನಿಕ್ ವಸ್ತುಗಳಿವೆ. ಇವುಗಳ ರಫ್ತು ಶೇ. 40ಕ್ಕಿಂತಲೂ ಹೆಚ್ಚಾಗಿದೆ. ಕಬ್ಬಿಣದ ಅದಿರು, ಕೃಷಿ ಉತ್ಪನ್ನಗಳು, ತೈಲ ಬೀಜ ಇತ್ಯಾದಿ ವಸ್ತುಗಳ ರಫ್ತು ಹೆಚ್ಚಳ ಕಂಡಿದೆ.

ರೀಟೇಲ್ ಹಣದುಬ್ಬರ ಇಳಿಕೆ

ಮೊನ್ನೆ (ಜುಲೈ 12) ಬಿಡುಗಡೆ ಆದ ವರದಿ ಪ್ರಕಾರ ಜೂನ್ ತಿಂಗಳಲ್ಲಿ ರೀಟೇಲ್ ಹಣದುಬ್ಬರ ತುಸು ಏರಿಕೆ ಕಂಡು ಶೇ. 4.81ಕ್ಕೆ ಹೋಗಿ ನಿಂತಿದೆ. ಮೇ ತಿಂಗಳಲ್ಲಿ ಇದು ಶೇ. 4.25ರಷ್ಟಿತ್ತು. ಇವತ್ತು (ಜುಲೈ 14) ಸಗಟು ಹಣದುಬ್ಬರ ವರದಿ ಬಂದಿದ್ದು, ಮೈನಸ್ 4.12 ಪ್ರತಿಶತಕ್ಕೆ ಕುಸಿದಿದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Published On - 6:12 pm, Fri, 14 July 23

ಜನರ ಭಾವನೆಗಳಿಗೆ ವಿರುದ್ಧವಾಗಿ ಸಿದ್ದರಾಮಯ್ಯ ಮಾತಾಡುತ್ತಾರೆ: ಸೋಮಣ್ಣ
ಜನರ ಭಾವನೆಗಳಿಗೆ ವಿರುದ್ಧವಾಗಿ ಸಿದ್ದರಾಮಯ್ಯ ಮಾತಾಡುತ್ತಾರೆ: ಸೋಮಣ್ಣ
"ನಾನಾಗಿದ್ದರೆ ಸಿದ್ದರಾಮಯ್ಯ ಕಪಾಳಕ್ಕೆ ಹೊಡೆಯುತ್ತಿದ್ದೆ": ಸ್ವಾಮೀಜಿ
ರೈತರಿಗೆ ನೀಡಿದ ನೋಟೀಸ್ ವಾಪಸ್ಸು ಪಡೆಯುವುದರಿಂದ ಏನೂ ಅಗಲ್ಲ: ಯತ್ನಾಳ್
ರೈತರಿಗೆ ನೀಡಿದ ನೋಟೀಸ್ ವಾಪಸ್ಸು ಪಡೆಯುವುದರಿಂದ ಏನೂ ಅಗಲ್ಲ: ಯತ್ನಾಳ್
ಸಚಿವರ ಆಪ್ತ ಕಾರ್ಯದರ್ಶಿ ನೀಡಿದ ದೂರಿನ ಮೇರೆಗೆ ಪುನೀತ್ ಪೊಲೀಸ್ ವಶಕ್ಕೆ
ಸಚಿವರ ಆಪ್ತ ಕಾರ್ಯದರ್ಶಿ ನೀಡಿದ ದೂರಿನ ಮೇರೆಗೆ ಪುನೀತ್ ಪೊಲೀಸ್ ವಶಕ್ಕೆ
ಬಿಜೆಪಿ ಶಾಸಕ ಬಸನಗೌಡ ಪಾಟೀಲ್​ ಯತ್ನಾಳ್​ ಸ್ಫೋಟಕ ಹೇಳಿಕೆ
ಬಿಜೆಪಿ ಶಾಸಕ ಬಸನಗೌಡ ಪಾಟೀಲ್​ ಯತ್ನಾಳ್​ ಸ್ಫೋಟಕ ಹೇಳಿಕೆ
ರೀಲ್ಸ್​ಗಾಗಿ ಪೆಟ್ರೋಲ್ ಬಾಂಬ್ ಸ್ಫೋಟಿಸಿ ವಿದ್ಯಾರ್ಥಿಗಳಿಂದ ಹುಚ್ಚಾಟ
ರೀಲ್ಸ್​ಗಾಗಿ ಪೆಟ್ರೋಲ್ ಬಾಂಬ್ ಸ್ಫೋಟಿಸಿ ವಿದ್ಯಾರ್ಥಿಗಳಿಂದ ಹುಚ್ಚಾಟ
ಮುಳ್ಳಯ್ಯನಗಿರಿ ಬೆಟ್ಟದಲ್ಲಿ ಮೆಸ್ಕಾಂ‌ ಸಿಬ್ಬಂದಿಯ ಎಣ್ಣೆ ಪಾರ್ಟಿ, ಧಮ್ಕಿ
ಮುಳ್ಳಯ್ಯನಗಿರಿ ಬೆಟ್ಟದಲ್ಲಿ ಮೆಸ್ಕಾಂ‌ ಸಿಬ್ಬಂದಿಯ ಎಣ್ಣೆ ಪಾರ್ಟಿ, ಧಮ್ಕಿ
ಬಿಗ್ ಬಾಸ್ ಮನೆಗೆ ‘ರಾಮಾಚಾರಿ’ ಜೋಡಿ; ಕುರಿನ ಕರೆದಂತೆ ಚಾರುನ ಕರೆದ ಹನುಮಂತ
ಬಿಗ್ ಬಾಸ್ ಮನೆಗೆ ‘ರಾಮಾಚಾರಿ’ ಜೋಡಿ; ಕುರಿನ ಕರೆದಂತೆ ಚಾರುನ ಕರೆದ ಹನುಮಂತ
ಪದೇ ಪದೇ ಹಾವುಗಳು ಕಣ್ಣಿಗೆ ಕಾಣಿಸುತ್ತಿದ್ದರೆ ಏನು ಅರ್ಥ? ವಿಡಿಯೋ ನೋಡಿ
ಪದೇ ಪದೇ ಹಾವುಗಳು ಕಣ್ಣಿಗೆ ಕಾಣಿಸುತ್ತಿದ್ದರೆ ಏನು ಅರ್ಥ? ವಿಡಿಯೋ ನೋಡಿ
Nithya Bhavishya: ಈ ರಾಶಿಯವರಿಗೆ ಇಂದು ನಿವೇಶನ ಕೊಂಡುಕೊಳ್ಳುವ ಯೋಗವಿದೆ
Nithya Bhavishya: ಈ ರಾಶಿಯವರಿಗೆ ಇಂದು ನಿವೇಶನ ಕೊಂಡುಕೊಳ್ಳುವ ಯೋಗವಿದೆ