Sign In

By signing in or creating an account, you agree with Associated Broadcasting Company's Terms & Conditions and Privacy Policy.

Financial Life Tips: ಖರ್ಚು, ಉಳಿತಾಯ, ಸಾಲಕ್ಕೆ ಹಣಕಾಸು ಸೂತ್ರ ತಿಳಿದಿರಿ; ಜೀವನಪೂರ್ತಿ ನಿಶ್ಚಿಂತೆಯಿಂದಿರಿ

How To Save and Invest: ಜೀವನ ಸುಗಮವಾಗಿ ಸಾಗಬೇಕಾದರೆ ಹಣಕಾಸು ಪರಿಸ್ಥಿತಿ ಉತ್ತಮವಾಗಿರುವುದು ಬಹಳ ಮುಖ್ಯ. ಅನಗತ್ಯ ವೆಚ್ಚ ಕಡಿಮೆ ಮಾಡಿ, ಉಳಿತಾಯ ಯೋಜನೆಗಳನ್ನು ಹೆಚ್ಚು ಮಾಡಿದರೆ ಭವಿಷ್ಯದ ದಿನಗಳು ಸುಸೂತ್ರವಾಗಿರುತ್ತವೆ.

Financial Life Tips: ಖರ್ಚು, ಉಳಿತಾಯ, ಸಾಲಕ್ಕೆ ಹಣಕಾಸು ಸೂತ್ರ ತಿಳಿದಿರಿ; ಜೀವನಪೂರ್ತಿ ನಿಶ್ಚಿಂತೆಯಿಂದಿರಿ
ಉಳಿತಾಯ
Follow us
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Jul 14, 2023 | 4:05 PM

ನಮ್ಮ ಜೀವನದಲ್ಲಿ ಹಣಕಾಸು ಪರಿಸ್ಥಿತಿ (Financial Condition) ವಿವಿಧ ಹಂತಗಳಲ್ಲಿ ವಿವಿಧ ಸ್ತರಗಳಲ್ಲಿ ಇರುತ್ತದೆ. ಕೆಲ ಸಂದರ್ಭದಲ್ಲಿ ಯಾವ ತುರ್ತು ಸಂದರ್ಭವೂ ಎದುರಾಗದೇ ಎಲ್ಲವೂ ನಾವಂದುಕೊಂಡಂತೆ ಸುಸೂತ್ರವಾಗಿ ಸಾಗುತ್ತಾ ಹೋಗುತ್ತದೆ. ಕೆಲವೊಮ್ಮೆ ಒಂದರ ಹಿಂದೊಂದು ಎಮರ್ಜೆನ್ಸಿ ಖರ್ಚು ವೆಚ್ಚಗಳು ಉದ್ಭವಿಸಿ ನಮ್ಮ ಲೆಕ್ಕಾಚಾರಗಳೆಲ್ಲಾ ತಲೆಕೆಳಗು ಆಗಿ ಸಾಲದ ಸುಳಿಗೆ ಸಿಲುಕಿ ಹೋಗುತ್ತೇವೆ. ಅಂಥ ಸಂದರ್ಭದಲ್ಲಿ ನಮಗೆ ಅನಿಸುವುದು, ಈ ಆಪತ್ಕಾಲ ಎದುರಿಸಲು ಮೊದಲೇ ತಯಾರಿ ಮಾಡಿಕೊಳ್ಳಬೇಕಾಗಿತ್ತು ಎಂದು. ಈ ನಿಟ್ಟಿನಲ್ಲಿ ಬಹಳ ಉಪಯೋಗ ಎನಿಸಬಹುದಾದ ಒಂದಿಷ್ಟು ಟಿಪ್ಸ್ ಇಲ್ಲಿವೆ.

ಈ ಮೂರು ನಿಯಮ ಕಡ್ಡಾಯ

  1. ಖರ್ಚು ಮಾಡಿ ಉಳಿದ ಹಣವನ್ನು ಉಳಿತಾಯಕ್ಕೆ ಹಾಕುತ್ತೇನೆ ಎನ್ನುವ ಸ್ವಭಾವ ಬಿಡಿ; ಇಷ್ಟು ಉಳಿತಾಯ ಮಾಡಿ ಉಳಿದ ಹಣದಲ್ಲಿ ಖರ್ಚು ಮಾಡುತ್ತೇನೆ ಎನ್ನುವ ಧೋರಣೆ ನಿಮ್ಮದಾಗಲಿ
  2. ನಿಮ್ಮ ಎಲ್ಲಾ ಸಾಲಗಳ ಎಲ್ಲಾ ಕಂತುಗಳ ಒಟ್ಟು ಮೊತ್ತವು ನಿಮ್ಮ ಆದಾಯದಲ್ಲಿ ಶೇ. 40ಕ್ಕಿಂತ ಹೆಚ್ಚಿರಬಾರದು.
  3. ವರ್ಷದಿಂದ ವರ್ಷಕ್ಕೆ ಆದಾಯ ಹೆಚ್ಚುತ್ತಾ ಹೋಗಬೇಕು, ಉಳಿತಾಯ ಹೆಚ್ಚುತ್ತಾ ಹೋಗಬೇಕು

ಇಲ್ಲಿ ಸಾಲದ ವಿಷಯಕ್ಕೆ ಒಂದು ಮಾತು ಹೇಳಲೇಬೇಕು. ಸಾಲ ಎಂಬುದು ಶೂಲದಂತೆ. ಸಾಧ್ಯವಾದಷ್ಟೂ ಸಾಲದಿಂದ ದೂರ ಇರಿ. ಅನಿವಾರ್ಯ ಇದ್ದರೆ ಮಾತ್ರವೇ ಸಾಲ ಮಾಡಿ.

ಇದನ್ನೂ ಓದಿRuPay Card: ಮಾಸ್ಟರ್ ಕಾರ್ಡ್, ವೀಸಾಗಿಂತ ರುಪೇ ಕ್ರೆಡಿಟ್ ಕಾರ್ಡ್ ಯಾಕೆ ಉತ್ತಮ? ಇಲ್ಲಿವೆ ರುಪೇ ಕಾರ್ಡ್​ನ ಅನುಕೂಲತೆಗಳು

ಹಣ ಉಳಿತಾಯ ಕಡ್ಡಾಯ ಕಡ್ಡಾಯ

ನಿಮ್ಮ ಮೊದಲ ಕೆಲಸದ ಮೊದಲ ಸಂಬಳದಿಂದಲೇ ಹಣದ ಉಳಿತಾಯ ಆರಂಭಿಸಿದರೆ ಮಧ್ಯ ವಯಸ್ಸಿನಲ್ಲಿ ನಿಮಗೆ ನೀವೇ ಥ್ಯಾಂಕ್ಸ್ ಹೇಳುತ್ತೀರಿ. ಇದು ಸತ್ಯ. ಜೀವನದಲ್ಲಿ ಹಣದ ಉಳಿತಾಯ ಬಹಳ ಮುಖ್ಯ. ಉಳಿತಾಯದಷ್ಟೇ ಮುಖ್ಯವಾದುದು ವೆಚ್ಚಕಡಿತ.

ಈ ಕೆಳಗಿನ ಸೂತ್ರಗಳನ್ನು ನಿಮಗೆ ನೀವೇ ರೂಪಿಸಿಕೊಳ್ಳಿ

ಅಗತ್ಯ ವೆಚ್ಚ, ಸಹಜ ವೆಚ್ಚ, ತುರ್ತು ನಿಧಿ ಮತ್ತು ಉಳಿತಾಯ ಎಂದು ನಾಲ್ಕು ಭಾಗವಾಗಿ ನಮ್ಮ ಖರ್ಚನ್ನು ಬೇರ್ಪಡಿಸಬಹುದು.

50- 20- 10- 20

40- 25- 5- 30

40- 20- 10- 30

ಹೀಗೆ ವೆಚ್ಚದ ಸೂತ್ರ ಹೇಗೆ ಬೇಕಾದರೂ ಇರಬಹುದು. ಈ ಸೂತ್ರಕ್ಕೆ ಬರುವ ಮೊದಲು ನಿಮ್ಮ ಈಗಿನ ಆದಾಯ ಎಷ್ಟಿದೆ? ಖರ್ಚು ವೆಚ್ಚಗಳು ಎಷ್ಟಿವೆ ಇತ್ಯಾದಿಯನ್ನು ಸ್ಪಷ್ಟವಾಗಿ ಲೆಕ್ಕ ಹಾಕಬೇಕು. ನಿಮ್ಮ ಸಹಜ ದಿನಗಳಲ್ಲಿ ಒಂದು ತಿಂಗಳಿಗೆ ಪ್ರತೀ ದಿನ ಏನೇನು ಖರ್ಚು ಮಾಡುತ್ತೀರಿ ಎಂಬುದನ್ನು ಬರೆದಿಟ್ಟುಕೊಂಡರೆ ಆಗ ನಮ್ಮ ಹಣದ ಹರಿವು ಹೇಗೆ ಆಗುತ್ತಿದೆ ಎಂಬುದು ಗೊತ್ತಾಗುತ್ತದೆ.

ಇದನ್ನೂ ಓದಿInvestments: ನವವಿವಾಹಿತರು ಜಾಣರಾದರೆ ಈ 5 ಹೂಡಿಕೆಗಳನ್ನು ಮರೆಯಲ್ಲ; ತಪ್ಪದೇ ಅಳವಡಿಸಿ ಜೀವನದ ಭದ್ರತೆಗೆ ಅಡಿಪಾಯ ಹಾಕಿ

ಇನ್ಷೂರೆನ್ಸ್ ಕಡ್ಡಾಯ

ನಿಮ್ಮ ಆದಾಯದಲ್ಲಿ ಒಂದಷ್ಟು ಭಾಗವನ್ನು ಇನ್ಷೂರೆನ್ಸ್​ಗೆ ಮೀಸಲಿಡಲೇಬೇಕು. ಮೆಡಿಕಲ್ ಇನ್ಷೂರೆನ್ಸ್ ಮತ್ತು ಲೈಫ್ ಇನ್ಷೂರೆನ್ಸ್ ಎರಡೂ ಇರಬೇಕು. ನೀವು ವರ್ಷಕ್ಕೆ ಪ್ರೀಮಿಯಮ್ ಪಾವತಿಸುವುದಾದರೆ ಆ ಮೊತ್ತಕ್ಕೆ ಅನುಗುಣವಾಗಿ ತಿಂಗಳಿಗೆ ಕಟ್ಟುವಂತೆ ಆರ್​ಡಿ ಖಾತೆ ರಚಿಸಿ ಅದರಲ್ಲಿ ತುಂಬುತ್ತಾ ಹೋಗಿ. ಆಗ ಒಮ್ಮೆಲೇ ಹಣಕ್ಕಾಗಿ ತಡಕಾಡುವ ಪ್ರಮೇಯ ಎದುರಾಗುವುದಿಲ್ಲ.

ಬೇರೆ ಹೂಡಿಕೆ ಯೋಜನೆಗಳು

ಎಸ್​ಐಪಿ, ಚಿನ್ನ, ಅರ್​ಡಿ, ಚಿಟ್ ಫಂಡ್ ಇತ್ಯಾದಿ ಹೂಡಿಕೆ ಕಂ ಉಳಿತಾಯ ಯೋಜನೆಗಳಲ್ಲಿ ಯಾವುದಕ್ಕಾದರೂ ನಿಮ್ಮ ಆದಾಯದಲ್ಲಿ ಇಂತಿಷ್ಟು ಭಾಗವನ್ನು ಮೀಸಲಿಡಿ. ದೀರ್ಘಾವಧಿ ಯೋಜನೆಯೂ ಕಡ್ಡಾಯವಾಗಿರಬೇಕು. ಪಿಂಚಣಿ ಸ್ಕೀಮ್ ಆಗಲೀ, ಮ್ಯೂಚುವಲ್ ಫಂಡ್ ಎಸ್​ಐಪಿಯಾಗಲೀ ಇದಕ್ಕೆ ಸೂಕ್ತವಾದುದು.

ಇದನ್ನೂ ಓದಿMutual Fund SIP: 10,000 ರೂ ಎಸ್​ಐಪಿಯಿಂದ 24 ವರ್ಷದಲ್ಲಿ 4.87 ಕೋಟಿ ರೂ ಲಾಭ; ಇದು ಎಸ್​ಬಿಐ ಕಾಂಟ್ರಾ ಫಂಡ್ ಧಮಾಕ

ಅಗತ್ಯ ವೆಚ್ಚಗಳು ಯಾವುವು?

ಮನೆ ಬಾಡಿಗೆ, ಕರೆಂಟ್, ನೀರು, ಇಂಟರ್ನೆಟ್, ಡಿಟಿಎಚ್, ಪೆಟ್ರೋಲ್, ದಿನಸಿ ವಸ್ತುಗಳು ಇವೆಲ್ಲವೂ ಕೂಡ ನಮಗೆ ಅನಿವಾರ್ಯ ಖರ್ಚುಗಳು.

ಈಗ ಅಗತ್ಯತೆಗಳಿಗೆ ಎಷ್ಟು ಖರ್ಚಾಗುತ್ತದೆ, ಮತ್ತು ಇನ್ಷೂರೆನ್ಸ್, ಪಿಂಚಣಿ, ದೀರ್ಘಾವಧಿ ಯೋಜನೆಗಳಿಗೆ ಎಷ್ಟು ಹಣ ಬೇಕಾಗುತ್ತದೆ ಎಂಬುದನ್ನು ಲೆಕ್ಕ ಹಾಕಿ, ಉಳಿದ ಹಣದ ಪ್ರಮಾಣ ಎಷ್ಟು ಪ್ರತಿಶತ ಇರುತ್ತದೆ ಎಂದು ನೋಡಿ. ಈ ಹಣದಲ್ಲಿ ಸ್ವಲ್ಪ ಭಾಗವನ್ನು ತುರ್ತು ನಿಧಿಗೆಂದು ಎತ್ತಿ ಇಡಿ. ಉಳಿದ ಭಾಗವನ್ನು ನಮ್ಮ ಇತರ ವೆಚ್ಚಗಳಿಗೆ ಬಳಸಬಹುದು. ಇತರ ವೆಚ್ಚವೆಂದರೆ ಬೈಕು ಖರೀದಿ, ಕಾರು ಖರೀದಿ, ಫ್ರಿಡ್ಜ್, ವಾಷಿಂಗ್ ಮೆಷೀನ್ ಇತ್ಯಾದಿ ಸೇರುತ್ತವೆ.

ಇದನ್ನೂ ಓದಿInvestment Options: ಭೂಮಿ ಮತ್ತು ಚಿನ್ನ; ಯಾವುದರ ಮೇಲೆ ಹೂಡಿಕೆ ಉತ್ತಮ? ಸಾಧಕ, ಬಾಧಕ ತಿಳಿದಿರಿ

ಸಾಲವೆಂಬುದು ಶೂಲ, ಮರೆಯದಿರಿ

ಕಾರು, ಬೈಕು, ವಾಷಿಂಗ್ ಮೆಷಿನ್, ಫ್ರಿಜ್, ಟಿವಿ, ಪೀಠೋಪಕರಣ ಇತ್ಯಾದಿ ಎಲ್ಲವೂ ಇಎಂಐಗಳಲ್ಲಿ ಸಿಗುತ್ತವೆ. ಹೀಗಾಗಿ, ನಾವು ಬಹಳ ಬೇಗ ಇವುಗಳನ್ನು ಖರೀದಿಸುತ್ತೇವೆ. ಇದಕ್ಕೆ ತಿಂಗಳಿಗೆ ಇಟ್ಟುವ ಇಎಂಐ ನಮ್ಮ ಆದಾಯದಲ್ಲಿ ಅರ್ಧಕ್ಕಿಂತ ಹೆಚ್ಚು ಭಾಗವಾಗಿದ್ದಿರುತ್ತದೆ. ಈ ಇಎಂಐ ಆಗಲೀ, ಯಾವುದೇ ಸಾಲವಾಗಲೀ ನಾವು ತಿಂಗಳಿಗೆ ಕಟ್ಟುವ ಕಂತು ಶೇ. 40ಕ್ಕಿಂತ ಹೆಚ್ಚು ಇರದಂತೆ ನೋಡಿಕೊಳ್ಳಿ.

ಒಟ್ಟಾರೆ ನಿಮ್ಮ ಹಣಕಾಸಿನ ಗುರಿ ಏನು, ಖರ್ಚುಗಳೆಷ್ಟು ಇತ್ಯಾದಿ ಅಂಶಗಳು ನಿಮಗೆ ಸ್ಪಷ್ಟವಾಗಿ ಕಾಣುವಂತಿದ್ದರೆ ಹಣಕಾಸು ಪರಿಸ್ಥಿತಿ ನಿಭಾಯಿಸುವುದು ಬಹಳ ಸುಲಭ.

ಇನ್ನಷ್ಟು ಪರ್ಸನಲ್ ಫೈನಾನ್ಸ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಕಾರ್ ಮಂಚದ ಮೇಲೆ ಮಲಗಿ ಯುವಕನ ಸವಾರಿ; ಇದೆಂಥಾ ಶೋಕಿ ಎಂದ ನೆಟ್ಟಿಗರು
ಕಾರ್ ಮಂಚದ ಮೇಲೆ ಮಲಗಿ ಯುವಕನ ಸವಾರಿ; ಇದೆಂಥಾ ಶೋಕಿ ಎಂದ ನೆಟ್ಟಿಗರು
IAF ಪೈಲಟ್ ಸಿದ್ಧಾರ್ಥ್ ಯಾದವ್ ಶವದೆದುರು ಬಿಕ್ಕಿ ಬಿಕ್ಕಿ ಅತ್ತ ಭಾವಿ ಪತ್ನಿ
IAF ಪೈಲಟ್ ಸಿದ್ಧಾರ್ಥ್ ಯಾದವ್ ಶವದೆದುರು ಬಿಕ್ಕಿ ಬಿಕ್ಕಿ ಅತ್ತ ಭಾವಿ ಪತ್ನಿ
50 ಸಾವಿರ ರೂಪಾಯಿ ನೀಡಿದರು: ದರ್ಶನ್ ಸಹಾಯದ ಬಗ್ಗೆ ಶೈಲಶ್ರೀ ಮಾತು
50 ಸಾವಿರ ರೂಪಾಯಿ ನೀಡಿದರು: ದರ್ಶನ್ ಸಹಾಯದ ಬಗ್ಗೆ ಶೈಲಶ್ರೀ ಮಾತು
ಶ್ರೀಲಂಕಾದ ಕೊಲಂಬೋಗೆ ಆಗಮಿಸಿದ ಮೋದಿಗೆ ಮಳೆಯು ನಡುವೆಯೂ ವಿಶೇಷ ಸ್ವಾಗತ
ಶ್ರೀಲಂಕಾದ ಕೊಲಂಬೋಗೆ ಆಗಮಿಸಿದ ಮೋದಿಗೆ ಮಳೆಯು ನಡುವೆಯೂ ವಿಶೇಷ ಸ್ವಾಗತ
‘ಕುಲದಲ್ಲಿ ಕೀಳ್ಯಾವುದೋ’ ಚಿತ್ರದ ಹಾಡು ಬಿಡುಗಡೆ ಮಾಡಿದ ಆನೆ; ವಿಡಿಯೋ ಸೂಪರ್
‘ಕುಲದಲ್ಲಿ ಕೀಳ್ಯಾವುದೋ’ ಚಿತ್ರದ ಹಾಡು ಬಿಡುಗಡೆ ಮಾಡಿದ ಆನೆ; ವಿಡಿಯೋ ಸೂಪರ್
4 ಪಂದ್ಯಗಳಲ್ಲೂ ಮಾಲೀಕರಿಗೆ ನಿರಾಶೆ ಮೂಡಿಸಿದ ಪಂತ್
4 ಪಂದ್ಯಗಳಲ್ಲೂ ಮಾಲೀಕರಿಗೆ ನಿರಾಶೆ ಮೂಡಿಸಿದ ಪಂತ್
ಜಿಗಣಿಯಲ್ಲಿ ಮನೆಯೊಳಗೆ ನುಗ್ಗಿ ಬಿಂದಾಸಾಗಿ ಮಲಗಿದ ಚಿರತೆ; ಕಂಗಾಲಾದ ಮನೆಮಂದಿ
ಜಿಗಣಿಯಲ್ಲಿ ಮನೆಯೊಳಗೆ ನುಗ್ಗಿ ಬಿಂದಾಸಾಗಿ ಮಲಗಿದ ಚಿರತೆ; ಕಂಗಾಲಾದ ಮನೆಮಂದಿ
ಶಾಸಕರ ಹೆಸರು ಎಫ್​ಐಅರ್​ನಲ್ಲಿ ಬಂದ ನಂತರವೇ ವಿನಯ್ ಅಂತ್ಯ ಸಂಸ್ಕಾರ: ಪ್ರತಾಪ
ಶಾಸಕರ ಹೆಸರು ಎಫ್​ಐಅರ್​ನಲ್ಲಿ ಬಂದ ನಂತರವೇ ವಿನಯ್ ಅಂತ್ಯ ಸಂಸ್ಕಾರ: ಪ್ರತಾಪ
ಮೈಗೆ ದೂರಿನ ಪತ್ರ ಕಟ್ಟಿ ತೆವಳುತ್ತಾ ಸರ್ಕಾರಿ ಕಚೇರಿಗೆ ತೆರಳಿದ ವ್ಯಕ್ತಿ
ಮೈಗೆ ದೂರಿನ ಪತ್ರ ಕಟ್ಟಿ ತೆವಳುತ್ತಾ ಸರ್ಕಾರಿ ಕಚೇರಿಗೆ ತೆರಳಿದ ವ್ಯಕ್ತಿ
ಥೈಲ್ಯಾಂಡ್ ಪ್ರವಾಸ ಮುಗಿಸಿ, ಶ್ರೀಲಂಕಾಗೆ ತೆರಳಿದ ಪ್ರಧಾನಿ ಮೋದಿ
ಥೈಲ್ಯಾಂಡ್ ಪ್ರವಾಸ ಮುಗಿಸಿ, ಶ್ರೀಲಂಕಾಗೆ ತೆರಳಿದ ಪ್ರಧಾನಿ ಮೋದಿ