ಬೇವಿನ ಮರದ ಬೊಡ್ಡೆಯಿಂದ ಹಾಲಿನಂಥ ದ್ರವ ಸ್ರವಿಸುವುದನ್ನು ನೋಡಿದ್ದೀರಾ? ಇಲ್ಲ ಅಂತಾದ್ರೆ ಇಳಕಲ್ ಗೆ ಬನ್ನಿ!
ಗ್ರಾಮದ ಸುತ್ತಮುತ್ತಲಿನ ಜನಕ್ಕೆ ಇದು ವಿಸ್ಮಯಕ್ಕಿಂತ ಹೆಚ್ಚು ಪವಾಡವಾಗಿ ಗೋಚರಿಸುತ್ತಿದೆ. ಅದರಲ್ಲಿ ದೈವಾಂಶವನ್ನು ಕಂಡುಕೊಂಡಿರುವ ಜನ ಕೈ ದೇವಸ್ಥಾನಗಳಲ್ಲಿ ದೇವರ ಮುಂದೆ ಕೈ ಮುಗಿಯುವ ಹಾಗೆ ಇಲ್ಲೂ ಮಾಡುತ್ತಿದ್ದಾರೆ.
ಬಾಗಲಕೋಟೆ: ಇದೊಂದು ವಿಸ್ಮಯವಲ್ಲದೆ ಮತ್ತೇನೂ ಅಲ್ಲ ಮಾರಾಯ್ರೇ. ನೀವು ಅನೇಕ ಬೇವಿನ ಮರಗಳನ್ನಿ ನೋಡಿರುತ್ತೀರಿ ಆದರೆ ಇಲ್ಲಿ ಕಾಣುತ್ತಿರುವಂಥದನ್ನು ನೋಡಿರಲಾರಿರಿ. ಬೇವಿನ ಮರದಿಂದ (neem tree) ಅಂಟಿನ ರೂಪದ ದ್ರವ ಸುರಿದು ನಂತರ ಘನರೂಪ ತಳೆಯುವುದು ನಮಗೆ ಗೊತ್ತು. ಆದರೆ ಜಿಲ್ಲೆಯ ಇಳಕಲ್ ತಾಲ್ಲೂಕಿನ ಹಿರೇಓತಗೇರಿ ಹೆಸರಿನ ಗ್ರಾಮದ ಶೇಖರಯ್ಯ ಎನ್ನುವವರ ಜಮೀನಲ್ಲಿರುವ ಬೇವಿನ ಮರದಿಂದ ಹಾಲಿನಂಥ ದ್ರವ (milk like substance) ಹಿರಬರಿತ್ತಿದೆ. ಬೇವು ಕಹಿ, ಆದರೆ ಮರದಿಂದ ಸ್ರವಿಸುತ್ತಿರುವ ದ್ರವ ಕಹಿ ಇದ್ದಂತಿಲ್ಲ. ಕಾರಣವನ್ನು ನೀವು ನೋಡಬಹುದು. ಜೇನ್ನೊಣ (bees) ಮತ್ತು ಇತರ ಕೀಟಗಳು ಅದನ್ನು ಹೀರಿಕೊಳ್ಳುತ್ತಿವೆ. ಗ್ರಾಮದ ಸುತ್ತಮುತ್ತಲಿನ ಜನಕ್ಕೆ ಇದು ವಿಸ್ಮಯಕ್ಕಿಂತ ಹೆಚ್ಚು ಪವಾಡವಾಗಿ ಗೋಚರಿಸುತ್ತಿದೆ. ಅದರಲ್ಲಿ ದೈವಾಂಶವನ್ನು ಕಂಡುಕೊಂಡಿರುವ ಜನ ಕೈ ದೇವಸ್ಥಾನಗಳಲ್ಲಿ ದೇವರ ಮುಂದೆ ಕೈ ಮುಗಿಯುವ ಹಾಗೆ ಇಲ್ಲೂ ಮಾಡುತ್ತಿದ್ದಾರೆ. ಸಸ್ಯಶಾಸ್ತ್ರಜ್ಞರೇ (botanist) ಇದು ಏನು, ಯಾಕೆ ಅನ್ನೋದನ್ನು ನಮಗೆ ವಿವರಿಸಬೇಕು.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ