Pen Drive: ನನ್ನ ಬಳಿಯೂ ಪೆನ್​ ಡ್ರೈವ್ ಇದೆ ಅಂದ್ರು ಕಾಂಗ್ರೆಸ್ ಶಾಸಕ ಲಕ್ಷಣ್ ಸವದಿ!

Pen Drive: ನನ್ನ ಬಳಿಯೂ ಪೆನ್​ ಡ್ರೈವ್ ಇದೆ ಅಂದ್ರು ಕಾಂಗ್ರೆಸ್ ಶಾಸಕ ಲಕ್ಷಣ್ ಸವದಿ!

ಸಾಧು ಶ್ರೀನಾಥ್​
|

Updated on:Aug 11, 2023 | 4:41 PM

Laxman Savadi: ಪೆನ್​ಡ್ರೈವ್ ಇರುವ ಸುಳಿವು ನೀಡಿರುವ ಲಕ್ಷ್ಮಣ್ ಸವದಿ, ಆ ಪೆನ್​ಡ್ರೈವ್ ಯಾರಿಗೆ ಸಂಬಂಧಸಿದ್ದೋ ಅನ್ನೋದನ್ನ ಮಾತ್ರ ಬಿಟ್ಟುಕೊಟ್ಟಿಲ್ಲ. ಪದೇ ಪದೇ ಸುದ್ದಿಯಾಗುತ್ತಿರವ ಪೆನ್​ಡ್ರೈವ್​ನೊಳಗಿರುವ ಸತ್ಯ, ಅದ್ಯಾವಾಗ ಸ್ಫೋಟಗೊಳ್ಳುತ್ತೋ ಕಾದು ನೋಡಬೇಕಿದೆ.

ಅಥಣಿ (ಬೆಳಗಾವಿ) ಆಗಸ್ಟ್​ 11: ರಾಜ್ಯ ರಾಜಕೀಯದಲ್ಲಿ ಮತ್ತೆ ಪೆನ್​ಡ್ರೈವ್ ಸದ್ದು ಮಾಡ್ತಿದೆ. ಕೆಲ ದಿನಗಳ ಹಿಂದೆ ಕುಮಾರಸ್ವಾಮಿ ಪೆನ್​ಡ್ರೈವ್ ತೋರಿಸಿ ಸಂಚಲನ ಸೃಷ್ಟಿಸಿದ್ರೆ, ಈಗ ಕಾಂಗ್ರೆಸ್ ಶಾಸಕ ಲಕ್ಷಣ್ ಸವದಿಯೂ (Congress MLA Laxman Savadi) ಪೆನ್​ಡ್ರೈವ್ ಬಾಂಬ್ ಹಾಕಿದ್ದಾರೆ. ರಾಜ್ಯ ರಾಜಕಾರಣದಲ್ಲಿ ಪೆನ್​ಡ್ರೈವ್ ಮತ್ತೆ ಮುನ್ನೆಲೆಗೆ ಬಂದಿದೆ. ಜೆಡಿಎಸ್​ನ ಕುಮಾರಸ್ವಾಮಿಯವರ ಪೆನ್​ಡ್ರೈವ್​ಗೆ ಪ್ರತಿಯಾಗಿ ಕಾಂಗ್ರೆಸ್​ನ ಲಕ್ಷ್ಮಣ ಸವದಿ ಪೆನ್​ಡ್ರೈವ್ (Pen Drive) ಪ್ರತ್ಯಸ್ತ್ರ ಪ್ರಯೋಗಿಸಿದ್ದಾರೆ. ನನ್ನ ಬಳಿಯೂ ಪೆನ್​ಡ್ರೈವ್ ಇರೋದು ಸತ್ಯ ಎಂದು ಬೆಳಗಾವಿಯ (Belagavi) ಅಥಣಿಯಲ್ಲಿ (Athani) ಸವದಿ ಹೊಸ ಬಾಂಬ್ ಸಿಡಿಸಿದ್ದಾರೆ. ಜೊತೆಗೆ ನನ್ನ ಬಳಿ ಇರುವ ಪೆನ್​ಡ್ರೈವ್​​ನಲ್ಲಿ ಯಾರು ಏನೇನು ಕುತಂತ್ರ ಮಾಡ್ತಿದ್ರು ಅನ್ನೋ ವಿವರವಿದೆ ಎಂದಿದ್ದಾರೆ.

ಪೆನ್​ಡ್ರೈವ್ ಇರುವ ಸುಳಿವು ನೀಡಿರುವ ಲಕ್ಷ್ಮಣ್ ಸವದಿ, ಆ ಪೆನ್​ಡ್ರೈವ್ ಯಾರಿಗೆ ಸಂಬಂಧಸಿದ್ದೋ ಅನ್ನೋದನ್ನ ಮಾತ್ರ ಬಿಟ್ಟುಕೊಟ್ಟಿಲ್ಲ. ಪದೇ ಪದೇ ಸುದ್ದಿಯಾಗುತ್ತಿರವ ಪೆನ್​ಡ್ರೈವ್​ನೊಳಗಿರುವ ಸತ್ಯ, ಅದ್ಯಾವಾಗ ಸ್ಫೋಟಗೊಳ್ಳುತ್ತೋ ಕಾದು ನೋಡಬೇಕಿದೆ.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published on: Aug 11, 2023 04:39 PM