NIA: ಬೆಳ್ಳಂದೂರಿನಲ್ಲಿ ಪತ್ತೆಯಾಗಿರುವುದು 43 ಅಕ್ರಮ ಬಾಂಗ್ಲಾ ವಲಸಿಗರು, ಏನಿದರ ಹಕೀಕತ್ತು?

Bangladeshi immigrants: ಬೆಳ್ಳಂದೂರಿನಲ್ಲಿ ಒಟ್ಟು 43 ಅಕ್ರಮ ಬಾಂಗ್ಲಾ ವಲಸಿಗರು ಪತ್ತೆಯಾಗಿರುವ ಬಗ್ಗೆ ಎನ್​ಐಎ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಈ ಮೊದಲು ಕೇವಲ ಮೂವರು ಬಾಂಗ್ಲಾದೇಶಿ ಅಕ್ರಮ ವಲಸಿಗರು ಇದ್ದಾರೆ ಎಂಬ ಮಾಹಿತಿ ಇತ್ತು.

NIA: ಬೆಳ್ಳಂದೂರಿನಲ್ಲಿ ಪತ್ತೆಯಾಗಿರುವುದು 43 ಅಕ್ರಮ ಬಾಂಗ್ಲಾ ವಲಸಿಗರು, ಏನಿದರ ಹಕೀಕತ್ತು?
ಬೆಳ್ಳಂದೂರಿನಲ್ಲಿ ಪತ್ತೆಯಾಗಿರುವುದು 24 ಅಕ್ರಮ ಬಾಂಗ್ಲಾ ವಲಸಿಗರು
Follow us
| Updated By: ಸಾಧು ಶ್ರೀನಾಥ್​

Updated on:Aug 11, 2023 | 2:16 PM

ಬೆಂಗಳೂರು, ಆಗಸ್ಟ್​ 11: ಇತ್ತೀಚೆಗೆ ಬೆಂಗಳೂರಿನಲ್ಲಿ ಅಕ್ರಮ ಬಾಂಗ್ಲಾ ವಲಸಿಗರು (illegal Bangladeshi immigrants) ಪತ್ತೆಯಾಗಿದ್ದು, ಆ ಪ್ರಕರಣದ ಪರಿಶೀಲನೆ ವೇಳೆ ಪತ್ತೆಯಾಗಿದ್ದು ಮೂವರಲ್ಲ 43 ಬಾಂಗ್ಲಾ ವಲಸಿಗರು ಎಂದು ತಿಳಿದುಬಂದಿದೆ. ಬೆಳ್ಳಂದೂರಿನಲ್ಲಿ ಒಟ್ಟು 43 ಅಕ್ರಮ ಬಾಂಗ್ಲಾ ವಲಸಿಗರು ಪತ್ತೆಯಾಗಿರುವ ಬಗ್ಗೆ ಎನ್​ಐಎ (National Investigation Agency -NIA) ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಈ ಮೊದಲು ಕೇವಲ ಮೂವರು ಬಾಂಗ್ಲಾದೇಶಿ ಅಕ್ರಮ ವಲಸಿಗರು ಇದ್ದಾರೆ ಎಂಬ ಮಾಹಿತಿ ಇತ್ತು.

ಬಾಂಗ್ಲಾ ಪ್ರಜೆಗಳು ದೇಶದಲ್ಲಿ 2011ರಿಂದ ಅಕ್ರಮವಾಗಿ ನೆಲೆಸಿರುವ ಮಾಹಿತಿಯಿದೆ. ಇವರೆಲ್ಲ ಬ್ರೋಕರ್​​ ಒಬ್ಬನಿಗೆ ಹಣ ನೀಡಿ ಭಾರತಕ್ಕೆ ಅಕ್ರಮವಾಗಿ ಪ್ರವೇಶಿಸಿರುವ ಮಾಹಿತಿಯಿದೆ. ತಲಾ 20 ಸಾವಿರ ರೂ ಹಣ ನೀಡಿ ಭಾರತಕ್ಕೆ ಅಕ್ರಮವಾಗಿ ಪ್ರವೇಶಿಸಿದ್ದಾರೆ.

ಇದನ್ನೂ ಓದಿ: ಕಲಬುರಗಿ: ಅಪ್ಪನ ಕೆರೆಯಲ್ಲಿ ಈಜಾಡಿದ ಎಮ್ಮೆಗಳು, ಮಾಲೀಕರ ವಿರುದ್ಧ ದೂರು ದಾಖಲು

ಈ ಬಾಂಗ್ಲಾದೇಶಿಯರು ಭಾರತದ ಆಧಾರ್ ಸೇರಿದಂತೆ ಹಲವು ಐಡಿ ಕಾರ್ಡ್​ ಮಾಡಿಸಿಕೊಂಡಿದ್ದಾರೆ. ಪ್ರಕರಣ ಸಂಬಂಧ ಬೆಳ್ಳಂದೂರು ಪೊಲೀಸ್​ ಠಾಣೆಯಲ್ಲಿ (Bellandur, Bangalore) ಪ್ರಕರಣ ದಾಖಲಾಗಿದೆ. ಎನ್ಐಎ ಅಧಿಕಾರಿಗಳ ದೂರಿನ ಅನ್ವಯ ಫಾರಿನರ್ ಆಕ್ಟ್​, ಪಾಸ್‌ಪೋರ್ಟ್ ಆಕ್ಟ್ ಅಡಿ ಕೇಸ್ ದಾಖಲಾಗಿದೆ.

ಬಿಟ್ ಕಾಯಿನ್ ಪ್ರಕರಣ -ಎಸ್ಐಟಿ ಯಿಂದ ತನಿಖೆ ಚುರುಕು

ಬೆಂಗಳೂರು: ಬಿಟ್ ಕಾಯಿನ್ ಪ್ರಕರಣವನ್ನು (Bitcoin case) ಎಸ್ಐಟಿ (SIT) ತನಿಖೆಗೆ ಒಳಪಡಿಸಲಾಗಿದ್ದು, ತನಿಖೆ ಚುರುಕುಗೊಂಡಿದೆ. ತಾಜಾ ಆಗಿ ಹಿಂದಿನ ಸಿಸಿಬಿ ಅಧಿಕಾರಿಗಳ ವಿರುದ್ಧ ಎಫ್ ಐ ಆರ್ ದಾಖಲಾಗಿದೆ. ಎಸ್ ಐ ಟಿ ಡಿವೈ ಎಸ್ ಪಿ ಕೆ ರವಿಶಂಕರ್ ಅವರು ಬೆಂಗಳೂರು (Bengaluru) ಕಾಟನ್ ಪೇಟೆ ಪೊಲೀಸ್ ಠಾಣೆಯಲ್ಲಿ ಎಫ್ ಐ ಆರ್ ದಾಖಲಿಸಿದ್ದಾರೆ. 2 ಪೆನ್ ಡ್ರೈವ್, ಹಾರ್ಡ್ ಡಿಸ್ಕ್ , ಹಾಗೂ ಆ್ಯಪ್ ಮ್ಯಾಕ್ ಬುಕ್ ನಲ್ಲಿ ಮೂಲ ಫೈಲ್ ಗಳನ್ನ ಅಳಿಸಲಾಗಿದೆ. ಅದೇ ಸ್ಥಳದಲ್ಲಿ ಹೆಚ್ಚುವರಿಯಾಗಿ ಫೈಲ್ ಗಳನ್ನ ಸೃಷ್ಟಿಸಲಾಗಿದೆ.

ಗಮನಾರ್ಹವೆಂದರೆ ಪ್ರಕರಣದ ತನಿಖೆಯನ್ನ ಸಿಸಿಬಿ ಕೈಗೆತ್ತಿಕೊಂಡ ಬಳಿಕವೇ ಸಾಕ್ಷ್ಯಗಳನ್ನ ತಿರುಚಲಾಗಿದೆ. ಸೆಪ್ಬಂಬರ್ 9 – 2020 ರಿಂದ ಡಿಸೆಂಬರ್ 16 – 2020 ರ ಅವಧಿಯಲ್ಲಿ ಸಿಸಿಬಿ ಕಚೇರಿ ಹಾಗು ಇತರೆಡೆ ಈ ಅಕ್ರಮ ನಡೆದಿದೆ. ಸಿಸಿಬಿ ತನಿಖಾಧಿಕಾರಿಗಳು ಹಾಗು ಇತರೆ ಅಧಿಕಾರಿಗಳು ಒಳಸಂಚು ರೂಪಿಸಿ ಅಧಿಕಾರ ದುರುಪಯೋಗಪಡಿಸಿಕೊಂಡಿದ್ದಾರೆ. ಡಿಜಿಟಲ್ ಉಪಕರಣಗಳಲ್ಲಿ ಹೆಚ್ಚುವರಿಯಾಗಿ ಫೈಲ್ ಸೃಷ್ಟಿಸಿದ್ದಾರೆ ಅಂತಾ ಎಸ್ ಐಟಿ ಡಿವೈ ಎಸ್ ಪಿ ಯಿಂದ ದೂರು ದಾಖಲಾಗಿದೆ. ಹಿಂದಿನ ಸಿಸಿಬಿ ತನಿಖಾಧಿಕಾರಿಗಳು ಹಾಗು ಇತರರಿಗೆ ನೋಟಿಸ್ ನೀಡಲು ಸಿದ್ಧತೆ ನಡೆದಿದೆ.

ಬೆಂಗಳೂರು ಕ್ರೈಂ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 9:32 am, Fri, 11 August 23

ಶ್ರೀರಂಗಪಟ್ಟಣ ದಸರಾ ವೇದಿಕೆಗೆ ಶಿವಣ್ಣ ಎಂಟ್ರಿ; ಅಭಿಮಾನಿಗಳಿಗೆ ಭಾರಿ ಖುಷಿ
ಶ್ರೀರಂಗಪಟ್ಟಣ ದಸರಾ ವೇದಿಕೆಗೆ ಶಿವಣ್ಣ ಎಂಟ್ರಿ; ಅಭಿಮಾನಿಗಳಿಗೆ ಭಾರಿ ಖುಷಿ
ಮನೆಯೆದುರು ಇಟ್ಟಿದ್ದ ಚಪ್ಪಲಿಯೇ ಮಾಯ; ಈ ಕಳ್ಳನ ಕೆಲಸ ನೋಡಿ
ಮನೆಯೆದುರು ಇಟ್ಟಿದ್ದ ಚಪ್ಪಲಿಯೇ ಮಾಯ; ಈ ಕಳ್ಳನ ಕೆಲಸ ನೋಡಿ
ಜಮ್ಮುವಿನ ಕತ್ರಾದಲ್ಲಿ ಭಾರೀ ಬಸ್‌ ಬೆಂಕಿ ದುರಂತ
ಜಮ್ಮುವಿನ ಕತ್ರಾದಲ್ಲಿ ಭಾರೀ ಬಸ್‌ ಬೆಂಕಿ ದುರಂತ
ಬೆಂಗಳೂರು: ಭೂಮಿ ಪೂಜೆಗೂ ಮುನ್ನ ಜಮೀರ್ ಪ್ರಾರ್ಥನೆ ಹೇಗಿತ್ತು ನೋಡಿ
ಬೆಂಗಳೂರು: ಭೂಮಿ ಪೂಜೆಗೂ ಮುನ್ನ ಜಮೀರ್ ಪ್ರಾರ್ಥನೆ ಹೇಗಿತ್ತು ನೋಡಿ
ಕೀ ವಿಚಾರಕ್ಕೆ ಸ್ವರ್ಗದ ಮಂದಿ ಜತೆ ನರಕದವರ ಕಿರಿಕ್; ದೊಡ್ಡ ಜಗಳದ ಮುನ್ಸೂಚನೆ
ಕೀ ವಿಚಾರಕ್ಕೆ ಸ್ವರ್ಗದ ಮಂದಿ ಜತೆ ನರಕದವರ ಕಿರಿಕ್; ದೊಡ್ಡ ಜಗಳದ ಮುನ್ಸೂಚನೆ
ಕೆಳಗೆ ಬಿದ್ದ ಹಣವನ್ನು ಡಿಕೆ ಶಿವಕುಮಾರ್​ ಏನು ಮಾಡಿದರು ನೋಡಿ
ಕೆಳಗೆ ಬಿದ್ದ ಹಣವನ್ನು ಡಿಕೆ ಶಿವಕುಮಾರ್​ ಏನು ಮಾಡಿದರು ನೋಡಿ
ಬಿಗ್​ಬಾಸ್​ ಮನೆಯಲ್ಲಿ ‘ಮುಂಗಾರು ಮಳೆ’ ಧನರಾಜ್​ ಡೈಲಾಗ್​ಗೆ ಚಪ್ಪಾಳೆ
ಬಿಗ್​ಬಾಸ್​ ಮನೆಯಲ್ಲಿ ‘ಮುಂಗಾರು ಮಳೆ’ ಧನರಾಜ್​ ಡೈಲಾಗ್​ಗೆ ಚಪ್ಪಾಳೆ
ಬೀದರ್​ನಲ್ಲಿ ರೌಡಿಶೀಟರ್​ಗಳ ಬೆವರಿಳಿಸಿದ ಎಸ್​ಪಿ; ವಿಡಿಯೋ ನೋಡಿ
ಬೀದರ್​ನಲ್ಲಿ ರೌಡಿಶೀಟರ್​ಗಳ ಬೆವರಿಳಿಸಿದ ಎಸ್​ಪಿ; ವಿಡಿಯೋ ನೋಡಿ
ಆ್ಯಪಲ್ ಐಫೋನ್ 15 ಜತೆ ₹6,900 ಮೌಲ್ಯದ ಬೀಟ್ಸ್ ಬಡ್ಸ್ ಫ್ರೀ!
ಆ್ಯಪಲ್ ಐಫೋನ್ 15 ಜತೆ ₹6,900 ಮೌಲ್ಯದ ಬೀಟ್ಸ್ ಬಡ್ಸ್ ಫ್ರೀ!
ಮೈಸೂರು ದಸರಾ 2024: ಬಗೆ ಬಗೆಯ ರಂಗೋಲಿಗಳಿಂದ ಶೃಂಗಾರಗೊಂಡ ಅರಮನೆ ಆವರಣ
ಮೈಸೂರು ದಸರಾ 2024: ಬಗೆ ಬಗೆಯ ರಂಗೋಲಿಗಳಿಂದ ಶೃಂಗಾರಗೊಂಡ ಅರಮನೆ ಆವರಣ