AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕಲಬುರಗಿ: ಅಪ್ಪನ ಕೆರೆಯಲ್ಲಿ ಈಜಾಡಿದ ಎಮ್ಮೆಗಳು, ಮಾಲೀಕರ ವಿರುದ್ಧ ದೂರು ದಾಖಲು

ಕಲಬುರಗಿ ನಗರದ ಅಪ್ಪಾ ಕೆರೆಯಲ್ಲಿ ಎಮ್ಮೆಗಳ ಮೈ ತೊಳದಿದ್ದ ಮಾಲೀಕರ ವಿರುದ್ಧ ದೂರು ದಾಖಲಾಗಿದೆ. ಎಮ್ಮೆ ಮಾಲೀಕರು ತಂತಿ ಬೇಲಿ ಕಟ್ ಮಾದುವುದರೊಂದಿಗೆ 5000 ರೂ ನಷ್ಟು ಪಾಲಿಕೆ ಆಸ್ತಿ ನಷ್ಟವನ್ನುಂಟು ಮಾಡಿದ್ದಾರೆ ಎಂದು ಪ್ರಕರಣ ದಾಖಲಾಗಿದೆ.

ಕಲಬುರಗಿ: ಅಪ್ಪನ ಕೆರೆಯಲ್ಲಿ ಈಜಾಡಿದ ಎಮ್ಮೆಗಳು, ಮಾಲೀಕರ ವಿರುದ್ಧ ದೂರು ದಾಖಲು
ಅಪ್ಪನ ಕೆರೆಯಲ್ಲಿ ಎಮ್ಮೆಗಳು
ಸಂಜಯ್ಯಾ ಚಿಕ್ಕಮಠ
| Edited By: |

Updated on: Aug 11, 2023 | 8:14 AM

Share

ಕಲಬುರಗಿ, (ಆಗಸ್ಟ್ 11): ಕಲಬುರಗಿ(Kalaburagi) ನಗರದ ಪ್ರಸಿದ್ಧ ಅಪ್ಪಾ ಕೆರೆಯಲ್ಲಿ ಇತ್ತೀಚೆಗೆ ಎಮ್ಮೆಗಳ (buffalo) ಮೈ ತೊಳದಿದ್ದ ಮಾಲೀಕರ ವಿರುದ್ಧ ದೂರು ದಾಖಲಾಗಿದೆ. ಕೆರೆ ಸುತ್ತ ಆಳವಡಿಸಿದ್ದ ಗ್ರಿಲ್ ಕಟ್ ಮಾಡಿ ಎಮ್ಮೆಗಳನ್ನ ಸ್ನಾನ ಮಾಡಿಸುವುದರಿಂದಿಗೆ ಅತಿಕ್ರಮ ಪ್ರವೇಶ ಮಾಡಿದ ಆರೋಪದ ಮೇಲೆ ಬ್ರಹ್ಮಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಕೆರೆ ಸುತ್ತ ಆಳವಡಿಸಿದ್ದ ಗ್ರಿಲ್ ಕಟ್ ಮಾಡಿ ಎಮ್ಮೆಗಳನ್ನ ಕರೆಯೊಳಗೆ ಬಿಡಲಾಗಿತ್ತು. ಅಲ್ಲದೇ ಕೆರೆಯಲ್ಲೇ ಎಮ್ಮೆಗಳ ತೊಳೆದಿದ್ದರು. ಕಲಬುರಗಿ ಮಹಾನಗರ ‌ಪಾಲಿಕೆ ಅಧಿಕಾರಿಗಳು ಖುದ್ದು ಭೇಟಿ ನೀಡಿದ್ದಾಗ ಎಮ್ಮೆಗಳನ್ನ ಕೆರೆ ಒಳಗೆ ಇದ್ದವು. ಇದರಿಂದ ತಂತಿ ಬೇಲಿ‌ ಕಟ್ ಮಾಡಿ ಅತಿಕ್ರಮ ಪ್ರವೇಶ ಮಾಡಿದ ಹಿನ್ನಲೆಯಲ್ಲಿ ಎಮ್ಮೆ ಮಾಲೀಕರ ವಿರುದ್ಧ ದೂರು ದಾಖಲಿಸಲಾಗಿದೆ. ಎಮ್ಮೆ ಮಾಲೀಕರು ತಂತಿ ಬೇಲಿ ಕಟ್ ಮಾದುವುದರೊಂದಿಗೆ 5000 ರೂ ನಷ್ಟು ಪಾಲಿಕೆ ಆಸ್ತಿ ನಷ್ಟವನ್ನುಂಟು ಮಾಡಿದ್ದಾರೆ.

ಇದನ್ನೂ ಓದಿ: ಕೆಕೆಆರ್​ಡಿಬಿ ಅಧ್ಯಕ್ಷರಾಗಿ ಅಜಯ್ ಸಿಂಗ್ ನೇಮಕ, ತನ್ನದೇ ವಾಗ್ದಾನಕ್ಕೆ ಎಳ್ಳುನೀರು ಬಿಟ್ಟ ಕಾಂಗ್ರೆಸ್​

ಅಪ್ಪನ ಕೆರೆಯ ಬೇಲಿ ಗ್ರಿಲ್‍ಗಳನ್ನು ಕಟ್ ಮಾಡಿ ಹಾಳು ಮಾಡಿದಲ್ಲದೇ ಕೆರೆಯ ಜಾಗೆಯಲ್ಲಿ ಅತಿಕ್ರಮ ಪ್ರವೇಶ ಮಾಡಿ ಎಮ್ಮೆಗಳನ್ನು ಒಳಗೆ ಬಿಟ್ಟಿದ್ದು, ಅವರ ಮೇಲೆ ಕಲಬುರಗಿ ನಗರದ ಬ್ರಹ್ಮಪೂರ ಪೊಲೀಸ್ ಠಾಣೆಯಲ್ಲಿ ಗುನ್ನೆ ಸಂಖ್ಯೆ: 175/2023, ಕಲಂ 447, 427 ಐಪಿಸಿ ಪ್ರಕಾರ ಪ್ರಕರಣ ದಾಖಲಿಸಲಾಗಿದೆ.

ಸಾರ್ವಜನಿಕರು ಹಾಗೂ ದನ/ ಎಮ್ಮೆ ಮೇಯಿಸುವವರು ಈ ಕೆರೆಯ ಸುತ್ತಮುತ್ತಲಿನ ಬೇಲಿ ದಾಟಿ ಅಕ್ರಮವಾಗಿ ಪ್ರವೇಶ ಮಾಡಬಾರದೆಂದು ತಿಳಿಸಿದೆ. ಈ ಕುರಿತು ಸುತ್ತಮುತ್ತಲಿನ‌ ಬೇಲಿಗೆ‌ ನಿಷೇಧಿತ ಪ್ರದೇಶವೆಂದು‌ ನಾಮಫಲಕ ಸಹ ಅಳವಡಿಸಿದೆ.

ಸರಿಯಾದ ನಿರ್ವಹಣೆಯಿಧಿಲ್ಲದೆ ಕೆರೆಯಲ್ಲಿ ಹೂಳು ತುಂಬಿದೆ. ಆಗಾಗ ಭೀಮಾ ನದಿ ನೀರು ಕೆರೆಗೆ ಬಂದು ಬೀಳುತ್ತದೆ. ಆದರೆ, ಇಡೀ ಕೆರೆಯಲ್ಲಿ ಹೂಳು ತುಂಬಿದೆ. ಅಲ್ಲದೇ ಸ್ವಚ್ಛತೆ ಮಾಯವಾಗಿದ್ದು, ಜನರು ವಾಕಿಂಗ್ ಬರದ ಸ್ಥಿತಿಗೆ ಬಂದಿದೆ. ಇದರೊಂದಿಗೆ ಒಂದು ಕಾಲದ ಪ್ರಸಿದ್ಧ ಪ್ರೇಕ್ಷಣೀಯ ಸ್ಥಳವಾಗಿದ್ದ ಅಪ್ಪನ​ ಕೆರೆ ಇದೀಗ ತನ್ನ ಕಳೆ ಕಳೆದುಕೊಂಡಿದೆ.

ಇನ್ನಷ್ಟು ಕಲಬುರಗಿ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ಕನಸಿನಲ್ಲಿ ಬಂದ ದೇವರು ಹೇಳಿದ್ದಕ್ಕೆ ಮಣ್ಣು ಅಗೆದಾಗ ನಡೆಯಿತು ಅಚ್ಚರಿ!
ಕನಸಿನಲ್ಲಿ ಬಂದ ದೇವರು ಹೇಳಿದ್ದಕ್ಕೆ ಮಣ್ಣು ಅಗೆದಾಗ ನಡೆಯಿತು ಅಚ್ಚರಿ!
ಈ ವರ್ಷದ ಮೊದಲ ಸೂಪರ್ ಮೂನ್ ಭಾರತದಲ್ಲಿ ಕಂಡಿದ್ದು ಹೀಗೆ; ವಿಡಿಯೋ ವೈರಲ್
ಈ ವರ್ಷದ ಮೊದಲ ಸೂಪರ್ ಮೂನ್ ಭಾರತದಲ್ಲಿ ಕಂಡಿದ್ದು ಹೀಗೆ; ವಿಡಿಯೋ ವೈರಲ್
ನಟ ಭಯಂಕರ ವಜ್ರಮುನಿ ಅವರ ಕೊನೆಯ ದಿನಗಳು ಹೇಗಿದ್ದವು: ವಿಡಿಯೋ
ನಟ ಭಯಂಕರ ವಜ್ರಮುನಿ ಅವರ ಕೊನೆಯ ದಿನಗಳು ಹೇಗಿದ್ದವು: ವಿಡಿಯೋ
ಮೃತ ರಾಜಶೇಖರ್​ ಕುಟುಂಬಕ್ಕೆ 25 ಲಕ್ಷ ರೂ ಪರಿಹಾರ ನೀಡಿದ ಸಚಿವ ಜಮೀರ್
ಮೃತ ರಾಜಶೇಖರ್​ ಕುಟುಂಬಕ್ಕೆ 25 ಲಕ್ಷ ರೂ ಪರಿಹಾರ ನೀಡಿದ ಸಚಿವ ಜಮೀರ್
ಹಾರ್ದಿಕ್ ಸಿಡಿಲಬ್ಬರ; ಲಿಸ್ಟ್​ ಎ ಕ್ರಿಕೆಟ್‌ನಲ್ಲಿ ಚೊಚ್ಚಲ ಶತಕ
ಹಾರ್ದಿಕ್ ಸಿಡಿಲಬ್ಬರ; ಲಿಸ್ಟ್​ ಎ ಕ್ರಿಕೆಟ್‌ನಲ್ಲಿ ಚೊಚ್ಚಲ ಶತಕ
ಸುಂಟರಗಾಳಿಗೆ ಕುಸಿದ ಪೆಂಡಾಲ್​​: ಸಚಿವ ಸತೀಶ್​ ಜಾರಕಿಹೊಳಿ ಪಾರು
ಸುಂಟರಗಾಳಿಗೆ ಕುಸಿದ ಪೆಂಡಾಲ್​​: ಸಚಿವ ಸತೀಶ್​ ಜಾರಕಿಹೊಳಿ ಪಾರು
ವೆನೆಜುವೆಲಾ ಮೇಲೆ ಅಮೆರಿಕದಿಂದ ವೈಮಾನಿಕ ದಾಳಿ; ತುರ್ತು ಪರಿಸ್ಥಿತಿ ಘೋಷಣೆ
ವೆನೆಜುವೆಲಾ ಮೇಲೆ ಅಮೆರಿಕದಿಂದ ವೈಮಾನಿಕ ದಾಳಿ; ತುರ್ತು ಪರಿಸ್ಥಿತಿ ಘೋಷಣೆ
ಬಳ್ಳಾರಿ ಗಲಭೆ: ರೆಡ್ಡಿ, ಶ್ರೀರಾಮುಲುಗೆ ಫೋನ್​ ಮಾಡಿ ಧೈರ್ಯ ಹೇಳಿದ ದೇವೇಗೌಡ
ಬಳ್ಳಾರಿ ಗಲಭೆ: ರೆಡ್ಡಿ, ಶ್ರೀರಾಮುಲುಗೆ ಫೋನ್​ ಮಾಡಿ ಧೈರ್ಯ ಹೇಳಿದ ದೇವೇಗೌಡ
ಬೇಜವಾಬ್ದಾರಿ, ಅಹಂಕಾರ, ಪಕ್ಷಪಾತ: ಗಿಲ್ಲಿ ವಿರುದ್ಧ ದೂರಿನ ಸರಮಾಲೆ
ಬೇಜವಾಬ್ದಾರಿ, ಅಹಂಕಾರ, ಪಕ್ಷಪಾತ: ಗಿಲ್ಲಿ ವಿರುದ್ಧ ದೂರಿನ ಸರಮಾಲೆ
4ನೇ ಶತಕ.. ದೇಶಿ ಅಂಗಳದಲ್ಲಿ ಕನ್ನಡಿಗನ ಪಾರುಪತ್ಯ; ವಿಡಿಯೋ
4ನೇ ಶತಕ.. ದೇಶಿ ಅಂಗಳದಲ್ಲಿ ಕನ್ನಡಿಗನ ಪಾರುಪತ್ಯ; ವಿಡಿಯೋ