AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

KKRDB Committee: ಕೆಕೆಆರ್​ಡಿಬಿಗೆ ಸಮಿತಿ ರಚನೆ, ಅಧ್ಯಕ್ಷರಾಗಿ ಡಾ.ಅಜಯಸಿಂಗ್ ನೇಮಕ

ಕಾಂಗ್ರೆಸ್ ಸರ್ಕಾರದ ವಿರುದ್ಧ ಅಸಮಾಧಾನಗೊಂಡಿದ್ದ ಸ್ವಪಕ್ಷದ ಶಾಸಕ ಡಾ.ಅಜಯ್ ಸಿಂಗ್ ಅವರನ್ನು ಕೆಕೆಆರ್​ಡಿಬಿ ಅಧ್ಯಕ್ಷರನ್ನಾಗಿ ನೇಮಿಸಿ ಆದೇಶಿಸಲಾಗಿದೆ.

KKRDB Committee: ಕೆಕೆಆರ್​ಡಿಬಿಗೆ ಸಮಿತಿ ರಚನೆ, ಅಧ್ಯಕ್ಷರಾಗಿ ಡಾ.ಅಜಯಸಿಂಗ್ ನೇಮಕ
ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿ ಸಮಿತಿ ಅಧ್ಯಕ್ಷರಾಗಿ ಶಾಸಕ ಡಾ.ಅಜಯ್ ಸಿಂಗ್ ನೇಮಿಸಿ ಆದೇಶಿಸಿದ ಕರ್ನಾಟಕ ಸರ್ಕಾರ
Follow us
ಸಂಜಯ್ಯಾ ಚಿಕ್ಕಮಠ, ಕೊಪ್ಪಳ
| Updated By: Rakesh Nayak Manchi

Updated on:Aug 10, 2023 | 7:58 PM

ಕಲಬುರಗಿ, ಆಗಸ್ಟ್ 10: ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿ (KKRDB) ಸಮಿತಿ ರಚಿಸಿ ಕಾಂಗ್ರೆಸ್ ಸರ್ಕಾರ ಆದೇಶ ಹೊರಡಿಸಿದೆ. ಸಮಿತಿಗೆ ಶಾಸಕ ಡಾ.ಅಜಯ್ ಸಿಂಗ್ (Ajay Singh) ಅವರನ್ನು ಅಧ್ಯಕ್ಷರನ್ನಾಗಿ ನೇಮಿಸಲಾಗಿದೆ. ಸಚಿವರ ವಿರುದ್ಧ ಮುನಿಸುಗೊಂಡಿದ್ದ ಸ್ವಪಕ್ಷದ ಶಾಸಕರಾದ ಬಿಆರ್​ ಪಾಟೀಲ್ (BR Patil), ಬಸವರಾಜ ರಾಯರೆಡ್ಡಿ (Basavaraj Rayareddy) ಅವರನ್ನು ಸಮಿತಿ ಸದಸ್ಯರನ್ನಾಗಿ ನೇಮಿಸಲಾಗಿದೆ. ಆ ಮೂಲಕ ಮೂವರನ್ನು ಸಮಾಧಾನ ಮಾಡುವ ಪ್ರಯತ್ನ ನಡೆಸಲಾಗಿದೆ.

ಅಜಯ್ ಸಿಂಗ್ ಅವರನ್ನೊಳಗೊಂಡಂತೆ ಕೆಕೆಆರ್​ಡಿಬಿ ಸಮಿತಿಗೆ ಒಟ್ಟು 11 ಮಂದಿ ಸದಸ್ಯರನ್ನು ನೇಮಿಸಲಾಗಿದೆ. ರಾಜ್ಯಸಭಾ ಸದಸ್ಯ ಸೈಯದ್ ನಾಜೀರ್ ಹುಸೇನ್, ವಿಧಾನ ಪರಿಷತ್ ಸದಸ್ಯರಾದ ಅರವಿಂದ ಅರಳಿ ಯಲಕನೂರು, ತಿಮ್ಮಪ್ಪಣ್ಣ ಕಾಮಕನೂರು, ಶಾಸಕರಾದ ಅಜಯ್ ಸಿಂಗ್, ಬಿ.ಆರ್​.ಪಾಟೀಲ್, ರಾಜ ವೆಂಕಟಪ್ಪ ನಾಯ್ಕ, ಹಂಪನಗೌಡ ಬಾದರ್ಲಿ, ಬಸವರಾಜ ರಾಯರೆಡ್ಡಿ, ರಾಘವೇಂದ್ರ ಹಿಟ್ನಾಳ್, ತುಕಾರಾಮ್, ಹೆಚ್​.ಆರ್​.ಗವಿಯಪ್ಪ ಅವರನ್ನು ಸದಸ್ಯರನ್ನಾಗಿ ನೇಮಿಸಲಾಗಿದೆ.

ಇದನ್ನೂ ಓದಿ: ಪಿಎಸ್​ಐ ನೇಮಕಾತಿಯಲ್ಲಿ ಅಕ್ರಮ: ನ್ಯಾಯಾಂಗ ತನಿಖೆಗೆ ಯಾವುದೇ ಸೌಲಭ್ಯ ನೀಡದ ರಾಜ್ಯ ಸರ್ಕಾರ

ಕಲ್ಯಾಣ ಕರ್ನಾಟಕ ಭಾಗ ಹಿಂದುಳಿದ ಪ್ರದೇಶವಾಗಿದ್ದು, 371 ಜೆ ವಿಧಿಯಡಿ ವಿಶೇಷ ಸ್ಥಾನಮಾನ ನೀಡಲಾಗಿದೆ. ಈ ಭಾಗದ ಅಭಿವೃದ್ದಿಗಾಗಿ ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ದಿ ಮಂಡಳಿ ರಚನೆಯಾಗಿತ್ತು. ಆದರೆ ಅಧ್ಯಕ್ಷರ ನೇಮಕ ನಿಯಮ ಬದಲಾಯಿಸಿದ್ದ ಬಿಜೆಪಿ ಸರ್ಕಾರ, ಸಚಿವರ ಬದಲು ಶಾಸಕರನ್ನು ಅಧ್ಯಕ್ಷರನ್ನಾಗಿ ನೇಮಕ ಮಾಡಿತ್ತು. ಇದನ್ನು ವಿರೋಧಿಸಿದ್ದ ಕಾಂಗ್ರೆಸ್, ಮಂಡಳಿಯ ಅಧ್ಯಕ್ಷರನ್ನಾಗಿ ಸಚಿವರನ್ನು ನೇಮಕ ಮಾಡುವುದಾಗಿ ಚುನಾವಣಾ ಪೂರ್ವದಲ್ಲಿ ಕಾಂಗ್ರೆಸ್ ಭರವಸೆ ನೀಡಿತ್ತು.

ಸಚಿವ ಸ್ಥಾನ ಕೈತಪ್ಪಿದ ಹಿನ್ನೆಲೆ ಮುನಿಸುಗೊಂಡಿದ್ದ ಅಜಯ್ ಸಿಂಗ್, ಇತ್ತೀಚೆಗೆ ತವರು ಜಿಲ್ಲೆಯಲ್ಲಿ ನಡೆದಿದ್ದ ಗೃಹಜ್ಯೋತಿ ಯೋಜನೆ ಚಾಲನೆ ಕಾರ್ಯಕ್ರಮಕ್ಕೆ ಗೈರು ಆಗಿದ್ದರು. ಅಲ್ಲದೆ, ಅಂದು ದೆಹಲಿಯಲ್ಲೇ ಉಳಿದುಕೊಂಡಿದ್ದ ಅವರು, “ಅವಕಾಶ ಕಿತ್ತುಕೊಳ್ಳಬಹುದೇ ಹೊರತು ಸಾಮರ್ಥ್ಯ, ಜನಪ್ರಿಯತೆಯನಲ್ಲ” ಎಂದು ಫೇಸ್​ಬುಕ್​ನಲ್ಲಿ ಪೋಸ್ಟ್ ಮಾಡಿ ಅಸಾಮಾಧನ ಹೊರಹಾಕಿದ್ದರು.

ಸದ್ಯ ಸರ್ಕಾರದ ವಿರುದ್ಧ ಪತ್ರ ಸಮರ‌ ಸಾರಿದ್ದ ಶಾಸಕ ಬಸವರಾಜ ರಾಯರೆಡ್ಡಿ, ಬಿ.ಆರ್ ಪಾಟೀಲ್, ಹಂಪನಗೌಡ ಬಾದರ್ಲಿ ಅವರಿಗೆ ಸಮಿತಿಯಲ್ಲಿ ಸ್ಥಾನ ನೀಡಲಾಗಿದ್ದು, ಸಚಿವ ಸ್ಥಾನದ ಆಕಾಂಕ್ಷಿಗಳಾಗಿದ್ದ ತುಕಾರಾಂ, ರಾಘವೇಂದ್ರ ಹಿಟ್ನಾಳ್​ಗೂ ಸಮಿತಿಯಲ್ಲಿ ಸ್ಥಾನ ನೀಡಲಾಗಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 7:38 pm, Thu, 10 August 23