Madara Chennaiah Swamiji Mother: ಬಸವಮೂರ್ತಿ ಮಾದಾರ ಚನ್ನಯ್ಯಶ್ರೀಗೆ ಮಾತೃ ವಿಯೋಗ

ಚಿತ್ರದುರ್ಗದ ಶಿವಶರಣ ಮಾದಾರ ಚನ್ನಯ್ಯ ಮಠದ ಚನ್ನಯ್ಯಶ್ರೀಗಳ ತಾಯಿ ಗಂಗಮ್ಮ(85) ನಿಧನರಾಗಿದ್ದಾರೆ. ವಯೋಸಹಜ ಅನಾರೋಗ್ಯದಿಂದ ಬಳಲುತ್ತಿದ್ದ ಗಂಗಮ್ಮ ಇಂದು (ಆಗಸ್ಟ್ 17) ಕೊನೆಯುಸಿರೆಳೆದಿದ್ದಾರೆ.

Madara Chennaiah Swamiji Mother: ಬಸವಮೂರ್ತಿ ಮಾದಾರ ಚನ್ನಯ್ಯಶ್ರೀಗೆ ಮಾತೃ ವಿಯೋಗ
ಮಾದಾರ ಚನ್ನಯ್ಯಶ್ರೀ ತಾಯಿ ಗಂಗಮ್ಮ
Updated By: ರಮೇಶ್ ಬಿ. ಜವಳಗೇರಾ

Updated on: Aug 17, 2023 | 11:11 AM

ಚಿತ್ರದುರ್ಗ, (ಆಗಸ್ಟ್ 17): ಚಿತ್ರದುರ್ಗದ (Chiradruga) ಶಿವಶರಣ ಮಾದಾರ ಚನ್ನಯ್ಯ ಮಠದ ಚನ್ನಯ್ಯಶ್ರೀಗಳ (basavamurthy madara chennaiah swamiji) ತಾಯಿ ಗಂಗಮ್ಮ(85) ನಿಧನರಾಗಿದ್ದಾರೆ. ವಯೋಸಹಜ ಅನಾರೋಗ್ಯದಿಂದ ಬಳಲುತ್ತಿದ್ದ ಗಂಗಮ್ಮ ಅವರು ನಿನ್ನೆ  (ಆಗಸ್ಟ್ 16) ಕೊನೆಯುಸಿರೆಳೆದಿದ್ದು, ಇಂದು ಸಂಜೆ ವೇಳೆಗೆ ಚಿತ್ರದುರ್ಗ ಜಿಲ್ಲೆ ಹೊಳಲ್ಕೆರೆ ತಾಲೂಕಿನ ಹಿರೇಕಂದವಾಡಿ ಗ್ರಾಮದಲ್ಲಿ ಅಂತ್ಯಸಂಸ್ಕಾರ ನಡೆಯಲಿದೆ.

ಚಿತ್ರದುರ್ಗವನ್ನು ಕಾರ್ಯ ಕ್ಷೇತ್ರವನ್ನಾಗಿಸಿಕೊಂಡು ಶ್ರೀ ಶಿವಶರಣ ಮಾದಾರ ಚನ್ನಯ್ಯ ಗುರು ಪೀಠ ಸ್ಥಾಪಿಸಿರುವ ಶ್ರೀಗಳು ಈ ಮಠದ ಪ್ರಥಮ ಪೀಠಾಧ್ಯಕ್ಷರಾಗಿದ್ದು, ಸರ್ವ ಜಾತಿ ಧರ್ಮಗಳ ಜನರು ಒಡನಾಟ ಹೊಂದಿದ್ದಾರೆ. ಶ್ರೀ ಬಸವಮೂರ್ತಿ ಮಾದಾರ ಚನ್ನಯ್ಯ ಸ್ವಾಮೀಜಿಯವರು ಸಮಾಜ ಸೇವಾ ದೀಕ್ಷೆ ಸ್ವೀಕರಿಸಿ 2022ರ ಜೂನ್ 24ಕ್ಕೆ ಎರಡು ದಶಕಗಳು ಕಳೆದಿವೆ.

ಇದನ್ನೂ ಓದಿ: ಚಿತ್ರದುರ್ಗದಲ್ಲಿ ಕಲುಷಿತ ನೀರು ಸೇವಿಸಿ 6 ಜನ ಸಾವು ಪ್ರಕರಣ: ಕಾಲರಾ ಮಾದರಿಯ ಬ್ಯಾಕ್ಟೀರಿಯ ಪತ್ತೆ, ಕೇಸ್​ ಬುಕ್

ತಮ್ಮ ಪೂರ್ವಾಶ್ರಮದಲ್ಲಿ ಶ್ರೀಗಳಿಗೆ ಚಿಕ್ಕಂದಿನಿಂದಲೂ ಚಿತ್ರದುರ್ಗ ಮುರುಘಾಮಠದೊಂದಿಗೆ ಅತ್ಯಂತ ನಿಕಟ ಸಂಬಂಧ ಈ ಸಂದರ್ಭದಲ್ಲಿ ಪರಮ ಪೂಜ್ಯ ಡಾ.ಶ್ರೀ ಶಿವಮೂರ್ತಿ ಮುರುಘಾ ಶರಣರು ಮಾದಾರ ಸಮಾಜದ ಪ್ರಗತಿಗೆ ಗುರುಪೀಠ ಸ್ಥಾಪಿಸಿ, ಸಮಾಜಸೇವಾ ದೀಕ್ಷೆ ನೀಡಿದ್ದು. ನಂತರ ಶ್ರೀ ಬಸವಮೂರ್ತಿ ಮಾದಾರ ಚನ್ನಯ್ಯ ಸ್ವಾಮೀಜಿಯವರು ಕಳೆದ 20 ವರ್ಷಗಳಲ್ಲಿ ಸಾಧಿಸಿದ್ದು ಅಪಾರ.

ಚಿತ್ರದುರ್ಗ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

Published On - 11:05 am, Thu, 17 August 23