ಭಲೇ ಚಿತ್ರದುರ್ಗ! ಅಚ್ಚುಮೆಚ್ಚಿನ ಅಂಬಾರಿ ಆನೆ ಅರ್ಜುನನನ್ನು ಹೀಗೂ ಚಿರಸ್ಥಾಯಿಯಾಗಿ ನೆನಪು ಮಾಡಿಕೊಳ್ಳಬಹುದು

| Updated By: ಸಾಧು ಶ್ರೀನಾಥ್​

Updated on: Dec 22, 2023 | 12:52 PM

ಕೋಟೆನಾಡು ಚಿತ್ರದುರ್ಗದಲ್ಲಿ ಅಂಬಾರಿ ಆನೆ ಅರ್ಜುನ ಹೆಸರಿನಲ್ಲಿ ಕ್ರಿಕೆಟ್ ಪಂದ್ಯಾವಳಿ ಆಯೋಜಿಸುವ ಮೂಲಕ ಯುವಪಡೆ ವಿಶೇಷ ಗೌರವ ಸಲ್ಲಿಸಿದೆ.

ಭಲೇ ಚಿತ್ರದುರ್ಗ! ಅಚ್ಚುಮೆಚ್ಚಿನ ಅಂಬಾರಿ ಆನೆ ಅರ್ಜುನನನ್ನು ಹೀಗೂ ಚಿರಸ್ಥಾಯಿಯಾಗಿ ನೆನಪು ಮಾಡಿಕೊಳ್ಳಬಹುದು
ಅಚ್ಚುಮೆಚ್ಚಿನ ಅಂಬಾರಿ ಆನೆ ಅರ್ಜುನನನ್ನು ಹೀಗೂ ಚಿರಸ್ಥಾಯಿಯಾಗಿ ನೆನಪು ಮಾಡಿಕೊಳ್ಳಬಹುದು
Follow us on

ವಿಶ್ವ ವಿಖ್ಯಾತ ಮೈಸೂರು ದಸರಾ ಅಂದಾಕ್ಷಣ ಅಂಬಾರಿ ಆನೆ ಅರ್ಜುನ ನೆನಪಾಗದೆ ಇರದು. ಇತ್ತೀಚೆಗೆ ಅರ್ಜುನ ಆನೆ ದಾರುಣ ಸಾವಿಗೀಡಾಗಿದ್ದು ನಾಡಿನ ಜನರ ಮನ ಮಿಡಿದಿದೆ. ಇದೇ ವೇಳೆ ಕೋಟೆನಾಡಿನಲ್ಲಿ ಅಂಬಾರಿ ಆನೆ ಅರ್ಜುನ ಹೆಸರಿನಲ್ಲಿ ಕ್ರಿಕೆಟ್ ಪಂದ್ಯಾವಳಿ ಆಯೋಜಿಸುವ ಮೂಲಕ ಸ್ಮರಿಸಿ ಗೌರವಿಸಲಾಗಿದೆ. ಈ ಕುರಿತು ವರದಿ.

ಇಲ್ಲಿದೆ. ಕೋಟೆನಾಡಿನಲ್ಲಿ ಅಂಬಾರಿ ಆನೆ ಅರ್ಜುನ ಹೆಸರಿನಲ್ಲಿ ಕ್ರಿಕೆಟ್ ಆಯೋಜನೆಯಾಗಿತ್ತು. ಕ್ರಿಕೆಟ್ ಪಂದ್ಯಾವಳಿಯಲ್ಲಿ ನಾಡಿನ ವಿವಿಧೆಡೆಯಿಂದ ತಂಡಗಳು ಭಾಗಿಯಾಗಿದ್ದವು. ಹೊನಲು-ಬೆಳಕಿನ ಪಂದ್ಯ ವೀಕ್ಷಿಸಲು ಕ್ರಿಕೆಟ್ ಪ್ರೇಮಿಗಳು ಜಮಾಯಿಸಿದ್ದರು. ಈ ದೃಶ್ಯಗಳು ಕಂಡು ಬಂದಿದ್ದು ಕೋಟೆನಾಡು ಚಿತ್ರದುರ್ಗ ನಗರದ ಹಳೇ ಮಾಧ್ಯಮಿಕ ಶಾಲಾ ಮೈದಾನದಲ್ಲಿ. ಹೌದು, ಕೋಟೆನಾಡಿನ ಜನರು ಮಾಜಿ ನಗರಸಭೆ ಅಧ್ಯಕ್ಷ ಬಿ. ಕಾಂತರಾಜ್ ನೇತೃತ್ವದಲ್ಲಿ ಅಂಬಾರಿ ಆನೆ ಅರ್ಜುನ ಕಪ್ ಹೆಸರಿನಲ್ಲಿ ಕ್ರಿಕೆಟ್ ಪಂದ್ಯಾವಳಿ ಆಯೋಜಿಸುವ ಮೂಲಕ ಅಂಬಾರಿ ಆನೆ ಅರ್ಜುನನ ಸ್ಮರಿಸಿ ಗೌರವ ಸಲ್ಲಿಸಿದ್ದಾರೆ.

ಇನ್ನು ಅಂಬಾರಿ ಆನೆ ಅರ್ಜುನ ಕಪ್ ಕ್ರಿಕೆಟ್ ಪಂದ್ಯಾವಳಿಯಲ್ಲಿ ಒಟ್ಟು 35 ತಂಡಗಳು ಭಾಗಿ ಆಗಿವೆ. ಚಿತ್ರದುರ್ಗ ಜಿಲ್ಲೆಯ 19 ತಂಡಗಳು ಸೇರಿದಂತೆ ರಾಜ್ಯದ ವಿವಿಧ ಜಿಲ್ಲೆಯ 16 ತಂಡಗಳು ಭಾಗಿ ಆಗಿವೆ. ಅಂಬಾರಿ ಆನೆ ಅರ್ಜುನ್ ಕಪ್ ವಿನ್ನರ್ ಟೀಮ್ ಗೆ 2ಲಕ್ಷ ರೂಪಾಯಿ ಮತ್ತು ಪಾರಿತೋಷಕ ಹಾಗೂ ರನ್ನರ್ ಅಪ್ ಗೆ ಒಂದೂವರೆ ಲಕ್ಷ ರೂಪಾಯಿ ಮತ್ತು ಪಾರಿತೋಷಕ ನೀಡಲಾಗುತ್ತಿದೆ. ಮೂರು ದಿನಗಳ ಕಾಲ ನಡೆಯುವ ಈ ಕ್ರಿಕೆಟ್ ಪಂದ್ಯಾವಳಿಯ ಫೈನಲ್ ನಾಳೆ ಸಂಜೆ ನಡೆಯಲಿದೆ.

ಒಟ್ಟಾರೆಯಾಗಿ ಕೋಟೆನಾಡು ಚಿತ್ರದುರ್ಗದಲ್ಲಿ ಅಂಬಾರಿ ಆನೆ ಅರ್ಜುನ ಹೆಸರಿನಲ್ಲಿ ಕ್ರಿಕೆಟ್ ಪಂದ್ಯಾವಳಿ ಆಯೋಜಿಸುವ ಮೂಲಕ ಯುವಪಡೆ ವಿಶೇಷ ಗೌರವ ಸಲ್ಲಿಸಿದೆ. ಕ್ರಿಕೆಟ್ ಪಂದ್ಯಾವಳಿ ವೀಕ್ಷಣೆಗೆ ಬಂದ ಅನೇಕರು ಯುವಕರ ಈ ವಿಶೇಷ ಪ್ರಯತ್ನಕ್ಕೆ ಭೇಷ್ ಎನ್ನುತ್ತಿದ್ದಾರೆ.

ಇನ್ನಷ್ಟು ಕರ್ನಾಟಕ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ