ಚಿತ್ರದುರ್ಗ: ಚಲಿಸುತ್ತಿದ್ದ ಲಾರಿಯ ಟೈರ್ ಸ್ಫೋಟಗೊಂಡು ಡಿಸ್ಕ್ ಬಡಿದ ಹಿನ್ನೆಲೆಯಲ್ಲಿ ರಸ್ತೆ ಬದಿ ನಿಂತಿದ್ದ ದಂಪತಿ ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ಚಳ್ಳಕೆರೆ ಪಟ್ಟಣದ ಪಾವಗಡ ರಸ್ತೆಯಲ್ಲಿ ನಡೆದಿದೆ. ಕಾಲುವೆಹಳ್ಳಿ ಗ್ರಾಮದ ತಿಪ್ಪೇಸ್ವಾಮಿ(45), ಶಿವಮ್ಮ(42) ಮೃತ ದಂಪತಿ. ಚಳ್ಳಕೆರೆಯ ಪಾವಗಡ ರಸ್ತೆಯಲ್ಲಿ ದಂಪತಿ ನಿಂತಿದ್ದರು. ಈ ವೇಳೆ ಲಾರಿಯ ಟೈರ್ ಸಿಡಿದು ದಂಪತಿಗೆ ಟೈರಿನ ಡಿಸ್ಕ್ ಬಡಿದಿದೆ. ಗಂಭೀರವಾಗಿ ಗಾಯಗೊಂಡಿದ್ದ ದಂಪತಿ ಸ್ಥಳದಲ್ಲೇ ಸಾವಿಗೀಡಾಗಿದ್ದಾರೆ. ಘಟನೆ ಸಂಬಂಧ ಚಳ್ಳಕೆರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Follow us on
ಚಿತ್ರದುರ್ಗ: ಚಲಿಸುತ್ತಿದ್ದ ಲಾರಿಯ ಟೈರ್ ಸ್ಫೋಟಗೊಂಡು ಡಿಸ್ಕ್ ಬಡಿದ ಹಿನ್ನೆಲೆಯಲ್ಲಿ ರಸ್ತೆ ಬದಿ ನಿಂತಿದ್ದ ದಂಪತಿ ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ಚಳ್ಳಕೆರೆ ಪಟ್ಟಣದ ಪಾವಗಡ ರಸ್ತೆಯಲ್ಲಿ ನಡೆದಿದೆ. ಕಾಲುವೆಹಳ್ಳಿ ಗ್ರಾಮದ ತಿಪ್ಪೇಸ್ವಾಮಿ(45), ಶಿವಮ್ಮ(42) ಮೃತ ದಂಪತಿ.
ಚಳ್ಳಕೆರೆಯ ಪಾವಗಡ ರಸ್ತೆಯಲ್ಲಿ ದಂಪತಿ ನಿಂತಿದ್ದರು. ಈ ವೇಳೆ ಲಾರಿಯ ಟೈರ್ ಸಿಡಿದು ದಂಪತಿಗೆ ಟೈರಿನ ಡಿಸ್ಕ್ ಬಡಿದಿದೆ. ಗಂಭೀರವಾಗಿ ಗಾಯಗೊಂಡಿದ್ದ ದಂಪತಿ ಸ್ಥಳದಲ್ಲೇ ಸಾವಿಗೀಡಾಗಿದ್ದಾರೆ. ಘಟನೆ ಸಂಬಂಧ ಚಳ್ಳಕೆರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.