ಚಿತ್ರದುರ್ಗ: ವ್ಯರ್ಥ ಕೆಲಸಕ್ಕೆ ಗುಡ್ಡದ ಮೇಲಕ್ಕೆ ಕಲ್ಲು ಹೊತ್ತಂತೆ ಎಂದು ಹೇಳುವ ಮಾತೊಂದಿದೆ. ಕೋಟೆನಾಡಿನಲ್ಲಿ ಮಾತ್ರ ಅಧಿಕಾರಿಗಳು ಅಕ್ಷರಶ: ಗುಡ್ಡಕ್ಕೆ ಕಲ್ಲು ಹೊರುವ ಕೆಲಸ ಮಾಡುತ್ತಿದ್ದಾರೆ. ಆ ಮೂಲಕ ಸಂಶೋಧಕರು ಹಾಗೂ ಪರಿಸರ ಪ್ರಿಯರ ಆಕ್ರೋಶಕ್ಕೆ ಗುರಿ ಆಗಿದ್ದಾರೆ.
ಭಾರತೀಯ ಪುರಾತತ್ವ ಇಲಾಖೆ ಅಧಿಕಾರಿಗಳು ಸುಮಾರು 2ಕೋಟಿ ರೂಪಾಯಿ ವೆಚ್ಚದಲ್ಲಿ ಜಿಲ್ಲೆಯ ಬೆಟ್ಟಗುಡ್ಡಗಳ ಸಂರಕ್ಷಣೆ ನೆಪದಲ್ಲಿ ಬೆಟ್ಟದ ಸುತ್ತಲೂ ಕಾಂಪೌಂಡ್ ನಿರ್ಮಿಸುವ ಯೋಜನೆ ಆರಂಭಿಸಿದೆ. ಹತ್ತಾರು ಕಿಲೋ ಮೀಟರ್ ಗುಡ್ಡದ ಸುತ್ತಲೂ ಕಲ್ಲಿನ ಕಾಂಪೌಂಡ್, ಕಬ್ಬಿಣದ ತಂತಿಬೇಲಿಯನ್ನು ಹಾಕಲಾಗುತ್ತಿದೆ. ಆದ್ರೆ ಇದರಿಂದ ಹಣ ವ್ಯರ್ಥ ಮಾಡಲಾಗುತ್ತಿದೆ. ಜೊತೆಗೆ ಪ್ರಾಚೀನ ಕಾಲದ ಪರಿಸರಕ್ಕೆ ಧಕ್ಕೆ ಮಾಡಲಾಗುತ್ತಿದೆ ಎಂದು ಹಿರಿಯ ಸಂಶೋಧಕರು ಆರೋಪಿಸಿದ್ದಾರೆ.
ಒಟ್ಟಾರೆಯಾಗಿ ಕೋಟೆನಾಡು ಚಿತ್ರದುರ್ಗ ಬಳಿಯ ಬೃಹತ್ ಬೆಟ್ಟಗುಡ್ಡಗಳ ಸುತ್ತ ಕಾಂಪೌಂಡ್ ನಿರ್ಮಿಸುವ ಕಾರ್ಯ ಸಾಗಿದೆ. ಆದ್ರೆ ಬೆಟ್ಟಗಡ್ಡಗಳಿಗೆ ಕಾಂಪೌಡ್ ನಿರ್ಮಿಸುವ ಅವಶ್ಯಕತೆ ಇತ್ತ ಅನ್ನೋ ಪ್ರಶ್ನೆ ಜನರಲ್ಲಿ ಎದ್ದಿದೆ.
Published On - 3:12 pm, Fri, 31 January 20