ಬೋವಿ ನಿಗಮದಲ್ಲಿ ₹100 ಕೋಟಿ ಅವ್ಯವಹಾರ; ಕೋಟ ಶ್ರೀನಿವಾಸ್ ಪೂಜಾರಿ ವಿರುದ್ಧ ಗೂಳಿಹಟ್ಟಿ ಶೇಖರ್ ಆರೋಪ

| Updated By: ಆಯೇಷಾ ಬಾನು

Updated on: Jun 06, 2024 | 9:03 AM

ಬೋವಿ ನಿಗಮದಲ್ಲಿ ₹100 ಕೋಟಿ ಅವ್ಯವಹಾರ ಆಗಿದೆ ಎಂದು ವಾಯ್ಸ್ ಮೆಸೇಜ್ ಮೂಲಕ ಗೂಳಿಹಟ್ಟಿ ಶೇಖರ್ ಅವರು ಕೋಟ ಶ್ರೀನಿವಾಸ್ ಪೂಜಾರಿ ವಿರುದ್ಧ ಆರೋಪ ಮಾಡಿದ್ದಾರೆ. ಸಿಬಿಐ ತನಿಖೆ ಬೇಡ, ಹಾಲಿ ಜಡ್ಜ್ ನೇತೃತ್ವದಲ್ಲಿ ತನಿಖೆ ಮಾಡಿಸಿ ಎಂದು ಶೇಖರ್ ಒತ್ತಾಯಿಸಿದ್ದಾರೆ.

ಬೋವಿ ನಿಗಮದಲ್ಲಿ ₹100 ಕೋಟಿ ಅವ್ಯವಹಾರ; ಕೋಟ ಶ್ರೀನಿವಾಸ್ ಪೂಜಾರಿ ವಿರುದ್ಧ ಗೂಳಿಹಟ್ಟಿ ಶೇಖರ್ ಆರೋಪ
ಗೂಳಿಹಟ್ಟಿ ಶೇಖರ್
Follow us on

ಚಿತ್ರದುರ್ಗ, ಜೂನ್.06: ಬೋವಿ ನಿಗಮದ ಮಾಜಿ ಅಧ್ಯಕ್ಷ, ಮಾಜಿ ಸಚಿವ ಗೂಳಿಹಟ್ಟಿ ಶೇಖರ್ (Goolihatti Shekar) ಗಂಭೀರ ಆರೋಪ ಮಾಡಿದ್ದಾರೆ. ಬೋವಿ ನಿಗಮದಲ್ಲಿ ₹100 ಕೋಟಿ ಅವ್ಯವಹಾರ ಆಗಿದೆ ಎಂದು ವಾಯ್ಸ್ ಮೆಸೇಜ್ ಮೂಲಕ ಗೂಳಿಹಟ್ಟಿ ಶೇಖರ್ ಅವರು ಕೋಟ ಶ್ರೀನಿವಾಸ್ ಪೂಜಾರಿ (Kota Srinivas Poojary) ವಿರುದ್ಧ ಆರೋಪ ಮಾಡಿದ್ದಾರೆ.

ಉಡುಪಿ-ಚಿಕ್ಕಮಗಳೂರು ನೂತನ ಸಂಸದರಾದ ಕೋಟ ಶ್ರೀನಿವಾಸ್ ಪೂಜಾರಿ ಅವರು ಬಸವರಾಜ ಬೊಮ್ಮಾಯಿ ಅವಧಿಯಲ್ಲಿ ಸಚಿವರಾಗಿದ್ದಾಗ ಹಗರಣ ನಡೆದಿದೆ. ಬೋವಿ ನಿಗಮದ ಹಗರಣವನ್ನು ಸಿಐಡಿ ತನಿಖೆಗೆ ನೀಲಾಗಿದೆ. ಪ್ರಕರಣ ಸಂಬಂಧ ಇಬ್ಬರ ಕೊಲೆ ಆಗಿದೆ ಎಂದು ಗೂಳಿಹಟ್ಟಿ ಶೇಖರ್ ಆರೋಪ ಮಾಡಿದ್ದಾರೆ. ಸಿಬಿಐ ತನಿಖೆ ಬೇಡ, ಹಾಲಿ ಜಡ್ಜ್ ನೇತೃತ್ವದಲ್ಲಿ ತನಿಖೆ ಮಾಡಿಸಿ. ಕೋಟ ಶ್ರೀನಿವಾಸ್ ಪೂಜಾರಿಯಂಥ ಪ್ರಾಮಾಣಿಕರು ದೇಶದಲ್ಲಿಲ್ಲ. ಈಗ 50-60 ಕೋಟಿ ಆಸ್ತಿ ಮಾಡಿದ್ದು ಎಲ್ಲಿಂದ ಬಂತು? ಎಸ್​​ಟಿ ನಿಗಮ, ಬೋವಿ ನಿಗಮ ಎಲ್ಲ ಹಗರಣಗಳ ಬಗ್ಗೆ ತನಿಖೆ ಮಾಡಿ. ಸಿದ್ದರಾಮಯ್ಯ ಸಿಎಂ ಆದ ಬಳಿಕ ತನಿಖೆ ಸ್ಥಗಿತ ಆಗಿದೆ. ಬಿಎಸ್ ಯಡಿಯೂರಪ್ಪ ಕೇಸ್ ತನಿಖೆ ಮಾಡದೆ ಯಾಕೆ ಮುಚ್ಚಿ ಹಾಕಿದ್ರಿ? ದೂರುದಾರ ಮಹಿಳೆ ಸಾವಿಗೀಡಾದ ಸುದ್ದಿ ಎಲ್ಲೆಡೆ ಬಂದಿದೆ. ಪ್ರಜ್ವಲ್ ಕೇಸ್ ಮಾತ್ರ ತನಿಖೆ ಮಾಡ್ತೀರಾ ಎಂದು ಶೇಖರ್​​ ಕಿಡಿ ಕಾರಿದ್ದಾರೆ.

ಇದನ್ನೂ ಓದಿ: ಬಿಎಸ್​ ಯಡಿಯೂರಪ್ಪ ಆಪ್ತ, ವರುಣ ಕ್ಷೇತ್ರದ ಪ್ರಭಾವಿ ಮುಖಂಡ ಕಾಪು ಸಿದ್ದಲಿಂಗಸ್ವಾಮಿ ನಿಧನ

ಕೊಟ್ಟ ಸಾಲ ವಾಪಸ್ ಕೇಳಿದ್ದಕ್ಕೆ ಕೊಲೆ

ಕೊಟ್ಟ ಸಾಲ ವಾಪಸ್ ಕೇಳಿದ್ದಕ್ಕೆ ಕೊಲೆ ಮಾಡಿ ಶವ ಹೂತಿಟ್ಟಿದ್ದಾನೆ. ರಾಮನಗರ ಜಿಲ್ಲೆಯ ಕನಕಪುರ ತಾಲೂಕಿನ ಶ್ರೀನಿವಾಸನಹಳ್ಳಿ ಗ್ರಾಮದಲ್ಲಿ ಘಟನೆ ನಡೆದಿದ್ದು, 55 ವರ್ಷದ ಸುನಂದಮ್ಮ ಕೊಲೆಯಾದ ದುರ್ದೈವಿ. ಆರೋಪಿ ರವಿಕುಮಾರ್ ಒಂದು ವರ್ಷದ ಹಿಂದೆ ಸುನಂದಮ್ಮ ಬಳಿ 20‌ ಸಾವಿರ ರೂಪಾಯಿ ಸಾಲ ಪಡೆದಿದ್ದಾನೆ. ವಾಪಸ್ ಕೊಟ್ಟಿರಲಿಲ್ಲ. ಆದ್ರೆ, ನಿನ್ನೆ ಸಾಲದ ಹಣ ಕೊಡೋದಾಗಿ ಸುನಂದಮ್ಮನನ್ನು ಆರೋಪಿ ಕರೆದಿದ್ದಾನೆ. ಆರೋಪಿ ರವಿ ಮಾತಿನಂತೆ ಮೃತ ಸುನಂದಮ್ಮ ಟಿ.ಗೊಲ್ಲಹಳ್ಳಿಗೆ ತೆರಳಿದ್ದಾಳೆ.

ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ

Published On - 9:01 am, Thu, 6 June 24