ಇಂದು ಮುರುಘಾ ಮಠದ ಶಿವಮೂರ್ತಿ ಸ್ವಾಮೀಜಿ ಜಾಮೀನು ಅರ್ಜಿ ವಿಚಾರಣೆ: ಜೈಲ್ ಅಥವಾ ಬೇಲ್ ಭವಿಷ್ಯ ನಿರ್ಧಾರ

| Updated By: ಗಂಗಾಧರ​ ಬ. ಸಾಬೋಜಿ

Updated on: Sep 08, 2022 | 7:55 AM

ಸಮೀಪದ ಸರ್ಕಾರಿ ಆಸ್ಪತ್ರೆಯಲ್ಲಿ ಹೃದಯ ಖಾಯಿಲೆ, ಅನಾರೋಗ್ಯ ಹಿನ್ನೆಲೆ ಚಿಕಿತ್ಸೆಗೆ ಮುರುಘಾಶ್ರೀ ಪರ ವಕೀಲ ಉಮೇಶ್ ಮನವಿ ಹಿನ್ನೆಲೆ ಕೋರ್ಟ್ ಸೂಚನೆ ನೀಡಿದೆ.

ಇಂದು ಮುರುಘಾ ಮಠದ ಶಿವಮೂರ್ತಿ ಸ್ವಾಮೀಜಿ ಜಾಮೀನು ಅರ್ಜಿ ವಿಚಾರಣೆ: ಜೈಲ್ ಅಥವಾ ಬೇಲ್ ಭವಿಷ್ಯ ನಿರ್ಧಾರ
ಶಿವಮೂರ್ತಿ ಸ್ವಾಮೀಜಿ
Follow us on

ಚಿತ್ರದುರ್ಗ: ಮುರುಘಾಶ್ರೀ ವಿರುದ್ಧ ಫೋಕ್ಸೋ ಪ್ರಕರಣ ಸಂಬಂಧ ಜಿಲ್ಲಾ 2ನೇ ಅಪರ ಮತ್ರು ಸತ್ರ ನ್ಯಾಯಾಲಯದಲ್ಲಿ ಇಂದು ಮುರುಘಾಶ್ರೀ ಜಾಮೀನು ಅರ್ಜಿ ವಿಚಾರಣೆ ನಡೆಯಲಿದೆ. ಸಂತ್ರಸ್ತರ ಪರ ವಕೀಲರಿಗೆ ಆಕ್ಷೇಪಣೆ ಸಲ್ಲಿಕೆಗೆ ಸೂಚನೆ ನೀಡಿದ್ದು, ಇಂದು ಮುರುಘಾಶ್ರೀಗೆ ಜೈಲ್ ಅಥವಾ ಬೇಲ್ ಭವಿಷ್ಯ ನಿರ್ಧಾರವಾಗಲಿದೆ. ಸದ್ಯ ಸೆ‌.14ರವೆರೆಗೆ ನ್ಯಾಯಾಂಗ ಬಂಧನದಲ್ಲಿರುವ ಮುರುಘಾಶ್ರೀ, ರಾತ್ರಿ ಸೊಳ್ಳೆ ಕಾಟದಿಂದ ಕಂಗಾಲಾಗಿದ್ದಾರೆ ಎನ್ನಲಾಗುತ್ತಿದೆ. ರಾತ್ರಿ ವೇಳೆ ಮೂರ್ನಾಲ್ಕು ಸಲ  ಮುರುಘಾಶ್ರೀ ಎದ್ದೆದ್ದು ಕುಳಿತಿದ್ದಾರೆ. ಬೆಳಗ್ಗೆ 6ಗಂಟೆಗೆ ಎದ್ದು ಕುಳಿತಿದ್ದು, ವಾಕಿಂಗ್ ತೆರಳಲು ಮುಂದಾದ ಮುರುಘಾಶ್ರೀಗೆ ಸಿಬ್ಬಂದಿ ನಿರಾಕರಿಸಿದ್ದಾರೆ. ಬೆಳಗ್ಗೆ ಉಪಹಾರಕ್ಕೆ ಉಪ್ಪಿಟ್ಟು, ಚಿತ್ರನ್ನ ಸೇವಿಸಿದ್ದು, ಮಧ್ಯಾಹ್ನ ಮತ್ತು ರಾತ್ರಿ ಮುದ್ದೆ, ಚಪಾತಿ, ಅನ್ನ, ಸಾರು ಜೈಲೂಟವನ್ನೇ ಮುರುಘಾಶ್ರೀ ಸೇವಿಸುತ್ತಿದ್ದಾರೆ. ಬೆಳಗ್ಗೆ 11ಗಂಟೆಗೆ ಜೈಲಿನ ಲೈಬ್ರರಿಯಲ್ಲಿ ಓದಿದ್ದು, ಮಧ್ಯಾಹ್ನ  4 ಗಂಟೆಯಿಂದ ಜೈಲಿನಲ್ಲೇ ಕುಳಿತು ಮುರುಘಾಶ್ರೀ ಡೈರಿ ಬರೆದಿದ್ದಾರೆ.

ದಾವಣಗೆರೆ ಅಥವಾ ಬೆಂಗಳೂರಿನ ಆಸ್ಪತ್ರೆಗೆ ಶಿಫ್ಟ್ ಸಾಧ್ಯತೆ:

ಸಮೀಪದ ಸರ್ಕಾರಿ ಆಸ್ಪತ್ರೆಯಲ್ಲಿ ಹೃದಯ ಖಾಯಿಲೆ, ಅನಾರೋಗ್ಯ ಹಿನ್ನೆಲೆ ಚಿಕಿತ್ಸೆಗೆ ಮುರುಘಾಶ್ರೀ ಪರ ವಕೀಲ ಉಮೇಶ್ ಮನವಿ ಹಿನ್ನೆಲೆ ಕೋರ್ಟ್ ಸೂಚನೆ ನೀಡಿದೆ. ಸೆ.2ರಂದು ಎದೆನೋವು ಎಂದು ಜಿಲ್ಲಾಸ್ಪತ್ರೆಗೆ ದಾಖಲಾಗಿದ್ದ ಮುರುಘಾಶ್ರೀ, ಜಿಲ್ಲಾಸ್ಪತ್ರೆಯಲ್ಲಿ ಇಸಿಜಿ, ಸ್ಕ್ಯಾನ್, ರಕ್ತದ ಮಾದರಿಯನ್ನು ವೈದ್ಯರು ಪರೀಕ್ಷಿಸಿದರು. ವೈದ್ಯರ ವರದಿ ನಿನ್ನೆ ಕೋರ್ಟಿಗೆ ಸಲ್ಲಿಕೆ ಹಿನ್ನೆಲೆ ತಪಾಸಣೆಗೆ ಸೂಚನೆ ನೀಡಿದ್ದು, ಇಂದು ದಾವಣಗೆರೆಯ ಚಿಗಟೇರಿ, ಅಥವಾ ಬೆಂಗಳೂರಿನ ಜಯದೇವ ಆಸ್ಪತ್ರೆಗೆ ಮುರುಘಾಶ್ರೀ ಶಿಫ್ಟ್ ಸಾಧ್ಯತೆ ಎನ್ನಲಾಗುತ್ತಿದೆ.

2ನೇ ಆರೋಪಿ ಮಹಿಳಾ ವಾರ್ಡನ್​ಳನ್ನು ಸೆ.8ರವರೆಗೆ ಪೊಲೀಸ್ ಕಸ್ಟಡಿಗೆ

ಇನ್ನೂ ಪ್ರಕರಣದ 2ನೇ ಆರೋಪಿ ಮಹಿಳಾ ವಾರ್ಡನ್​ಳನ್ನು ಸೆ.8ರವರೆಗೆ ಪೊಲೀಸ್ ಕಸ್ಟಡಿಗೆ ನೀಡಿ ಜಿಲ್ಲಾ ಹೆಚ್ಚುವರಿ ನ್ಯಾಯಾಲಯ ಆದೇಶ ಹೊರಡಿಸಿದೆ. ಶಿವಮೊಗ್ಗ ಜೈಲಿನಲ್ಲಿದ್ದ ಮಹಿಳಾ ವಾರ್ಡನ್​ಳನ್ನು ಚಿತ್ರದುರ್ಗ ಪೊಲೀಸರು ​ಏಳು ದಿನಗಳ ಕಾಲ ಕಸ್ಟಡಿಗೆ ಕೇಳಿದ್ದರು. ಪೊಲೀಸರು ಮಹಿಳಾ ವಾರ್ಡನ್​ಳನ್ನು ಮಹಿಳಾ ಸಾಂತ್ವನ ಕೇಂದ್ರದಲ್ಲಿ ವಿಚಾರಣೆ ನಡೆಸಲಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.