ಮುರುಘಾಶ್ರೀ ವಿರುದ್ಧ ಪೋಕ್ಸೋ ಪ್ರಕರಣ; ಎ2 ಆರೋಪಿ ವಾರ್ಡನ್ ರಶ್ಮಿ ಜೈಲಿನಿಂದ ಬಿಡುಗಡೆ

| Updated By: ಕಿರಣ್ ಹನುಮಂತ್​ ಮಾದಾರ್

Updated on: Dec 27, 2023 | 8:52 PM

ಮುರುಘಾಶ್ರೀ ವಿರುದ್ಧ ಪೋಕ್ಸೋ ಪ್ರಕರಣಕ್ಕೆ ಸಂಬಂಧಪಟ್ಟಂತೆ ಕೇಸ್​ನ ಎ2 ಆರೋಪಿ ಆಗಿರುವ ಲೇಡಿ ವಾರ್ಡನ್ ರಶ್ಮಿ ಜೈಲಿನಿಂದ ಬಿಡುಗಡೆ ಆಗಿದ್ದಾರೆ. ಡಿ.21ರಂದು ಹೈಕೋರ್ಟ್(High Court)​​ನಿಂದ ಬೇಲ್​ ಮಂಜೂರಾಗಿತ್ತು. ಇಂದು ಜೈಲಿನಿಂದ ಹೊರಗಡೆ ಬಂದಿದ್ದಾರೆ.

ಮುರುಘಾಶ್ರೀ ವಿರುದ್ಧ ಪೋಕ್ಸೋ ಪ್ರಕರಣ; ಎ2 ಆರೋಪಿ ವಾರ್ಡನ್ ರಶ್ಮಿ ಜೈಲಿನಿಂದ ಬಿಡುಗಡೆ
ಮುರುಘಾಶ್ರೀ ವಿರುದ್ಧ ಪೋಕ್ಸೋ ಪ್ರಕರಣ; ಎ2 ಆರೋಪಿ ವಾರ್ಡನ್ ರಶ್ಮಿ ಜೈಲಿನಿಂದ ಬಿಡುಗಡೆ
Follow us on

ಚಿತ್ರದುರ್ಗ, ಡಿ.27: ಮುರುಘಾಶ್ರೀ ವಿರುದ್ಧ ಪೋಕ್ಸೋ ಪ್ರಕರಣಕ್ಕೆ ಸಂಬಂಧಪಟ್ಟಂತೆ ಕೇಸ್​ನ ಎ2 ಆರೋಪಿ ಆಗಿರುವ ಲೇಡಿ ವಾರ್ಡನ್ ರಶ್ಮಿ ಜೈಲಿನಿಂದ ಬಿಡುಗಡೆ ಆಗಿದ್ದಾರೆ. ಡಿ.21ರಂದು ಹೈಕೋರ್ಟ್(High Court)​​ನಿಂದ ನ್ಯಾಯಮೂರ್ತಿ ಮೊಹಮ್ಮದ್ ನವಾಜ್ ರವರ ಪೀಠದಿಂದ ಬೇಲ್ ಮಂಜೂರಾಗಿತ್ತು. ಈ ಹಿನ್ನಲೆ ಚಿತ್ರದುರ್ಗ‌ 2ನೇ ಅಪರ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ದಾಖಲೆಗಳನ್ನು ಪರಿಶೀಲಿಸಿ ಇಂದು ಬಿಡುಗಡೆಯಾಗಿದ್ದಾರೆ.

ಚಾರ್ಜ್​ಶೀಟ್​​ನಲ್ಲಿ ಎರಡನೇ ಆರೋಪಿ ಆಗಿರುವ ಲೇಡಿ ವಾರ್ಡನ್

ಮುರುಘಾ ಶ್ರೀಗಳ ಲೈಂಗಿಕ ದೌರ್ಜನ್ಯಕ್ಕೆ ವಾರ್ಡನ್ ರಶ್ಮಿ ಸಹಕಾರ ನೀಡಿದ್ದರು. ಈ ಹಿನ್ನಲೆ ಚಾರ್ಜ್​ಶೀಟ್​​ನಲ್ಲಿ ಎರಡನೇ ಆರೋಪಿ ಆಗಿರುವ ಲೇಡಿ ವಾರ್ಡನ್ ವಿರುದ್ಧ, ಬೆಚ್ಚಿ ಬೀಳಿಸುವ ಆರೋಪಗಳು ಮಾಡಲಾಗಿತ್ತು. ಈ ಪೈಕಿ, ಮುರುಘಾ ಶ್ರೀಗಳ ಬಳಿ ಬಾಲಕಿಯರನ್ನ ಕರೆದೊಯ್ಯುವ ಕೆಲಸವನ್ನ ಇದೇ ವಾರ್ಡನ್​ ಮಾಡುತ್ತಿದ್ದಳು ಎನ್ನಲಾಗಿತ್ತು. ಯಾರನ್ನ ಕಳಿಸಬೇಕು, ಯಾವಾಗ ಕಳಿಸಬೇಕು,  ಹೇಗೆ ಕಳಿಸಬೇಕು ಎನ್ನುವ ಎಲ್ಲ ವಿಚಾರವನ್ನೂ ಈಕೆಯೇ ನೋಡಿಕೊಳ್ಳುತ್ತಿದ್ದು, ಇದಕ್ಕೆ ತಿರುಗಿ ಬೀಳುವ ಬಾಲಕಿಯರ ಮೇಲೆ, ಇಲ್ಲದ ನೆಪವೊಡ್ಡಿ ಶಿಕ್ಷೆಯನ್ನೂ ನೀಡುತ್ತಿದ್ದಳು ಎನ್ನುವ ಸಂಗತಿಯನ್ನ ಬಾಲಕಿಯರು ಹೇಳಿದ್ದರು.

ಇದನ್ನೂ ಓದಿ:ಲೈಂಗಿಕ ದೌರ್ಜನ್ಯಕ್ಕೆ ಸಹಕಾರ: ಮುರುಘಾ ಮಠದ ವಾರ್ಡನ್ ರಶ್ಮಿಗೆ ಜಾಮೀನು 

ಇನ್ನು ಪ್ರಮುಖ ಆರೋಪಿಯಾಗಿರುವ ಮುರುಘಾ ಶ್ರೀ ಖಾಸಗಿ ಕೋಣೆಗೆ ಆರೋಪಿ ನಂಬರ್​ 2 ಆಗಿರುವ ಇದೇ ಹಾಸ್ಟೆಲ್​ ವಾರ್ಡನ್​ ಮಕ್ಕಳನ್ನ ಕರೆದುಕೊಂಡು ಹೋಗುತ್ತಿದ್ದರು. ಈ ಹಿನ್ನಲೆ ಇದಕ್ಕೆ ಪೂರಕವಾದ ಸಾಕ್ಷ್ಯಧಾರಗಳು ಲಭಿಸಿವೆ ಎಂದು ಸಂತ್ರಸ್ತೆಯರ ಪರ ವಕೀಲ ಶ್ರೀನಿವಾಸ್ ಹೇಳಿದ್ದರು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 8:45 pm, Wed, 27 December 23