Murugha Shree Arrested: ಮೊನ್ನೇ ಅಷ್ಟೇ ಜೈಲಿನಿಂದ ಬಿಡುಗಡೆಯಾಗಿದ್ದ ಮುರುಘಾಶ್ರೀ ಮತ್ತೆ ಅರೆಸ್ಟ್!

Chitradurga Shivamurthy Sharanaru Arrested: ಅಪ್ರಾಪ್ತ ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯ ಆರೋಪದ 2ನೇ ಪ್ರಕರಣದಲ್ಲಿ ಮತ್ತೆ ಚಿತ್ರದುರ್ಗದ ಮುರುಘಾ ಮಠದ ಶಿವಮೂರ್ತಿ ಶರಣರ ಬಂಧನವಾಗಿದೆ. ಎರಡನೇ ಪೋಕ್ಸೋ ಪ್ರಕರಣದಲ್ಲಿ ಚಿತ್ರದುರ್ಗ ನ್ಯಾಯಾಲಯದ ಅರೆಸ್ಟ್ ವಾರೆಂಟ್ ಜಾರಿ ಮೇರೆಗೆ ಚಿತ್ರದುರ್ಗ ಗ್ರಾಮಾಂತರ ಠಾಣೆ ಪೊಲೀಸರು ಮುರುಘಾಶ್ರಿಯನ್ನು ದಾವಣಗೆರೆಯಲ್ಲಿ ಬಂಧಿಸಿದ್ದಾರೆ.

Murugha Shree Arrested: ಮೊನ್ನೇ ಅಷ್ಟೇ ಜೈಲಿನಿಂದ ಬಿಡುಗಡೆಯಾಗಿದ್ದ  ಮುರುಘಾಶ್ರೀ ಮತ್ತೆ ಅರೆಸ್ಟ್!
ಮುರುಘಾ ಶ್ರೀ
Follow us
| Updated By: ರಮೇಶ್ ಬಿ. ಜವಳಗೇರಾ

Updated on:Nov 20, 2023 | 3:21 PM

ದಾವಣಗೆರೆ/ಚಿತ್ರದುರ್ಗ, (ನವೆಂಬರ್ 20): ಅಪ್ರಾಪ್ತ ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯ (sexually assaulting)  ಪ್ರಕರಣದಲ್ಲಿ ಮತ್ತೆ ಚಿತ್ರದುರ್ಗದ ಮುರುಘಾ ಮಠದ ಶಿವಮೂರ್ತಿ ಶರಣರ (Shivamurthy Sharanaru) ಬಂಧನವಾಗಿದೆ. ಎರಡನೇ ಪೋಕ್ಸೋ ಪ್ರಕರಣದಲ್ಲಿ ಚಿತ್ರದುರ್ಗ ನ್ಯಾಯಾಲಯ ಜಾರಿ ಮಾಡಿದ ಅರೆಸ್ಟ್ ವಾರೆಂಟ್ ಮೇರೆಗೆ ಮುರುಘಾಶ್ರಿಯನ್ನು ಬಂಧಿಸಿದ್ದಾರೆ. ಇಂದು(ನವೆಂಬರ್ 20)  ಕೋರ್ಟ್ ಅರೆಸ್ಟ್​ ವಾರೆಂಟ್ ಆದೇಶದ ಪ್ರತಿಪಡೆದುಕೊಂಡ ಚಿತ್ರದುರ್ಗ ಗ್ರಾಮಾಂತರ ಠಾಣೆ ಪೊಲೀಸರು ನೇರವಾಗಿ ದಾವಣಗೆರೆಯ ವಿರಕ್ತ ಮಠಕ್ಕೆ ತೆರಳಿ ಮುರುಘಾಶ್ರೀಗಳನ್ನು ಬಂಧಿಸಿದ್ದಾರೆ.

ಮೊದಲನೇ ಪೋಕ್ಸೋ ಪ್ರಕರಣದಲ್ಲಿ ಒಂದು ವರ್ಷ ಜೈಲುವಾಸ ಅನುಭವಿಸಿದ್ದ ಮುರುಘಾಶ್ರೀ ಜಾಮೀನಿನ ಮೇಲೆ ನವೆಂಬರ್ 16ರಂದು ಬಿಡುಗಡೆಯಾಗಿದ್ದರು. ಆದ್ರೆ ಇದೀಗ ನಾಲ್ಕೇ ದಿನದಲ್ಲಿ ಮತ್ತೆ ಅರೆಸ್ಟ್ ಆಗಿದ್ದಾರೆ. 2022 ಅಕ್ಟೋಬರ್ 13ರಂದು ಮುರುಘಾಶ್ರೀ ವಿರುದ್ಧ ಮೈಸೂರಿನ ನಜರ್​ಬಾದ್ ಪೊಲೀಸ್ ಠಾಣೆಯಲ್ಲಿ ಎರಡನೇ ಪೋಕ್ಸೋ ಪ್ರಕರಣ ದಾಖಲಾಗಿತ್ತು. ಬಳಿಕ ಈ ಪ್ರಕರವನ್ನು ಚಿತ್ರದುರ್ಗ ಗ್ರಾಮಾಂತರ ಪೊಲೀಸ್ ಠಾಣೆಗೆ ವರ್ಗಾವಣೆಯಾಗಿತ್ತು.

ಇದನ್ನೂ ಒದಿ: ಬಾಡಿ ವಾರಂಟ್ ಇದ್ದರೂ ಜೈಲಿನಿಂದ ಮುರುಘಾಶ್ರೀ ಬಿಡುಗಡೆ; ಕಾರಾಗೃಹ ಇಲಾಖೆಯಿಂದ ತನಿಖೆಗೆ ಸೂಚಿಸಿದ ನ್ಯಾಯಾಲಯ

ಮೊದಲನೇ ಪೋಕ್ಸೋ ಪ್ರಕರಣದಲ್ಲಿ ಜಾಮೀನಿನ ಮೇಲೆ ಜೈಲಿನಿಂದ ಬಿಡುಗಡೆಯಾಗಿರುವ ಚಿತ್ರದುರ್ಗದ ಮುರುಘಾಶ್ರೀಗೆ 2ನೇ ಪೋಕ್ಸೋ ಪ್ರಕರಣದಲ್ಲಿ ಚಿತ್ರದುರ್ಗ 2ನೇ ಅಪರ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಮುರುಘಾ ಶರಣರ ವಿರುದ್ಧ ಜಾಮೀನು ರಹಿತ ಅರೆಸ್ಟ್ ವಾರಂಟ್ ಜಾರಿ ಮಾಡಿದೆ. ಈ ಹಿನ್ನೆಲೆಯಲ್ಲಿ 1ನೇ ಪೋಕ್ಸೋ ಪ್ರಕರಣದಲ್ಲಿ ಒಂದು ವರ್ಷಕ್ಕಿಂತ ಹೆಚ್ಚು ಕಾಲ ಜೈಲಿನಲ್ಲಿದ್ದು, ಆಚೆ ಬಂದಿರುವ ಚಿತ್ರದುರ್ಗದ ಮುರುಘಾಶ್ರೀ ಬಂಧನವಾಗಿದೆ.

ಇತ್ತೀಚೆಗೆ 1ನೇ ಪೊಕ್ಸೋ ಪ್ರಕರಣವೊಂದಕ್ಕೆ ಹೈಕೋರ್ಟ್ ಜಾಮೀನು ನೀಡಿತ್ತು. ಈ ಹಿನ್ನೆಲೆಯಲ್ಲಿ ಶ್ರೀಗಳು ನವೆಂಬರ್ 16ರಂದು ಚಿತ್ರದುರ್ಗ ಜಿಲ್ಲಾ ಕಾರಾಗೃಹದಿಂದ ಹೊರಬಂದಿದ್ದರು. ಆದರೆ ಇದಕ್ಕೆ ಸರ್ಕಾರಿ ವಕೀಲರು ಆಕ್ಷೇಪ ವ್ಯಕ್ತಪಡಿಸಿದ್ದರು. 2ನೇ ಪೋಕ್ಸೋ ಕೇಸಲ್ಲಿ ಬಂಧನ ವಾರೆಂಟ್ ಕೋರಿ ಸರ್ಕಾರಿ ವಕೀಲ ಜಗದೀಶ್ ಕೋರ್ಟ್ ಗೆ ಮನವಿ ಮಾಡಿದ್ದರು. ಇದಕ್ಕೆ ಮುರುಘಾ ಶ್ರೀ ಪರ ವಕೀಲರು ಆಕ್ಷೇಪ ವ್ಯಕ್ತಪಡಿಸಿದ್ದರು. ಸದ್ಯ ಎರಡೂ ಕಡೆಯ ವಾದ ಆಲಿಸಿದ್ದ ಚಿತ್ರದುರ್ಗ 2ನೇ ಅಪರ ಜಿಲ್ಲಾ & ಸತ್ರ ನ್ಯಾಯಾಲಯ ಇಂದು ಅರೆಸ್ಟ್ ವಾರೆಂಟ್ ಆದೇಶ ನೀಡಿತ್ತು. ಹೀಗಾಗಿ ಪೊಲೀಸರು ಮುರುಘಾಶ್ರೀಗಳನ್ನು

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 3:12 pm, Mon, 20 November 23

ತಾಜಾ ಸುದ್ದಿ
ಕೊಲೆ ಪ್ರಕರಣದ ಸಾಕ್ಷ್ಯ ನಾಶಕ್ಕೆ ನಡೆದಿತ್ತು ಪ್ಲ್ಯಾನ್
ಕೊಲೆ ಪ್ರಕರಣದ ಸಾಕ್ಷ್ಯ ನಾಶಕ್ಕೆ ನಡೆದಿತ್ತು ಪ್ಲ್ಯಾನ್
ದರ್ಶನ್ ನನ್ನ ಬಳಿ ಹೇಳಿ ಶೆಡ್​ಗೆ ಹೋಗಿಲ್ಲ; ಪಟ್ಟಣಗೆರೆ ಜಯಣ್ಣ
ದರ್ಶನ್ ನನ್ನ ಬಳಿ ಹೇಳಿ ಶೆಡ್​ಗೆ ಹೋಗಿಲ್ಲ; ಪಟ್ಟಣಗೆರೆ ಜಯಣ್ಣ
ಪಾರ್ಟಿಯಲ್ಲಿ ದರ್ಶನ್, ಚಿಕ್ಕಣ್ಣ ಜೊತೆ ಇದ್ದ ಮತ್ತೋರ್ವ ಹೀರೋ ಇವರೇ ನೋಡಿ
ಪಾರ್ಟಿಯಲ್ಲಿ ದರ್ಶನ್, ಚಿಕ್ಕಣ್ಣ ಜೊತೆ ಇದ್ದ ಮತ್ತೋರ್ವ ಹೀರೋ ಇವರೇ ನೋಡಿ
ಆಧಾರ್ ಕಾರ್ಡ್ ಅಪ್​ಡೇಟ್ ಮಾಡಲು ಮತ್ತೊಂದು ಅವಕಾಶ
ಆಧಾರ್ ಕಾರ್ಡ್ ಅಪ್​ಡೇಟ್ ಮಾಡಲು ಮತ್ತೊಂದು ಅವಕಾಶ
Daily Devotional: ದೇವಸ್ಥಾನದ ಹಿಂಭಾಗ ನಮಸ್ಕಾರ ಮಾಡುವುದರ ಮಹತ್ವ
Daily Devotional: ದೇವಸ್ಥಾನದ ಹಿಂಭಾಗ ನಮಸ್ಕಾರ ಮಾಡುವುದರ ಮಹತ್ವ
ಸ್ತ್ರೀಯರಿಗೆ ತವರು ಮನೆಯ ಕಡೆಯಿಂದ ಶುಭವಾದ ಸುದ್ದಿಯು ಬರಲಿದೆ
ಸ್ತ್ರೀಯರಿಗೆ ತವರು ಮನೆಯ ಕಡೆಯಿಂದ ಶುಭವಾದ ಸುದ್ದಿಯು ಬರಲಿದೆ
ದರ್ಶನ್​ ಕೇಸ್: ಮಾಧ್ಯಮದ ಪ್ರಶ್ನೆ ಕೇಳಿಸಿಕೊಳ್ಳದೇ ಕಾಲ್ಕಿತ್ತ ನಟ ಚಿಕ್ಕಣ್ಣ
ದರ್ಶನ್​ ಕೇಸ್: ಮಾಧ್ಯಮದ ಪ್ರಶ್ನೆ ಕೇಳಿಸಿಕೊಳ್ಳದೇ ಕಾಲ್ಕಿತ್ತ ನಟ ಚಿಕ್ಕಣ್ಣ
ವೇದಿಕೆಯಲ್ಲೇ ಕಾರ್ಯಕರ್ತರ ಮೇಲೆ ಸಿಟ್ಟಿಗೆದ್ದ ಹೆಚ್​ಡಿ ಕುಮಾರಸ್ವಾಮಿ
ವೇದಿಕೆಯಲ್ಲೇ ಕಾರ್ಯಕರ್ತರ ಮೇಲೆ ಸಿಟ್ಟಿಗೆದ್ದ ಹೆಚ್​ಡಿ ಕುಮಾರಸ್ವಾಮಿ
ಮಂಕಾಗಿ ಬಂದು ವ್ಯಾನ್​ ಹತ್ತಿದ ದರ್ಶನ್; ರೇಣುಕಾ ಸ್ವಾಮಿ ಕೊಲೆ ಕೇಸ್​ ಮಹಜರು
ಮಂಕಾಗಿ ಬಂದು ವ್ಯಾನ್​ ಹತ್ತಿದ ದರ್ಶನ್; ರೇಣುಕಾ ಸ್ವಾಮಿ ಕೊಲೆ ಕೇಸ್​ ಮಹಜರು
ದರ್ಶನ್​ ಕಾರಣಕ್ಕೆ ಅರೆಸ್ಟ್​ ಆದ ಅನು ಮನೆ ಎಂಥಾ ದುಸ್ಥಿತಿಯಲ್ಲಿದೆ ನೋಡಿ..
ದರ್ಶನ್​ ಕಾರಣಕ್ಕೆ ಅರೆಸ್ಟ್​ ಆದ ಅನು ಮನೆ ಎಂಥಾ ದುಸ್ಥಿತಿಯಲ್ಲಿದೆ ನೋಡಿ..